ಕರ್ನಾಟಕ

ಅಪಾರ್ಟ್‌ಮೆಂಟ್ ಮ್ಯಾನೇಜರ್ ಅಪಹರಣಕ್ಕೆ ವಿಫಲ ಯತ್ನ

Pinterest LinkedIn Tumblr

managerಬೆಂಗಳೂರು,ಆ.೮-ಎಲೆಕ್ಟ್ರಾನಿಕ್ ಸಿಟಿಯಲ್ಲಿ ಅಪಾರ್ಟ್‌ಮೆಂಟ್ ಮ್ಯಾನೇಜರ್ ಅಪಹರಣ ಯತ್ನ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿರುವ ದುರ್ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಎಲೆಕ್ಟ್ರಾನಿಕ್ ಸಿಟಿಯ ಆಜ್ಮೀರಾ ಇನ್‌ಫಿನಿಟಿ ಅಪಾರ್ಟ್‌ಮೆಂಟ್ ಮ್ಯಾನೇಜರ್ ಚರಣ್ ಸಾಹು ಎಂಬಾತನ ಮೇಲೆ ಹಲ್ಲೆ ನಡೆಸಿದ ಮೂವರು ದುಷ್ಕರ್ಮಿಗಳು ಆಟೋದಲ್ಲಿ ಎಳೆದು ಅಪಹರಣಕ್ಕೆ ಪ್ರಯತ್ನಿಸಿದ್ದರು. ಆದರೆ ಚರಣ್ ಸಾಹು ಸಹಾಯಕ್ಕೆ ಕೂಗಿ ರಂಪಾಟ ಮಾಡಿದ್ದು ಸ್ಥಳೀಯರು ಧಾವಿಸಿದ್ದು ಅವರನ್ನು ನೋಡಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಕಳೆದ ಆ.೩ರಂದು ರಾತ್ರಿ ೭.೨೦ರ ವೇಳೆಗೆ ದುಷ್ಕರ್ಮಿಗಳು ಅಪಹರಣಕ್ಕೆ ಯತ್ನಿಸಿದ್ದರು. ಅಪಹರಣಕ್ಕೂ ಮುನ್ನ ಕೆಎ೦೧, ಎಕೆ-೨೮೬ ನಂಬರ್‌ನ ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳ ಚಲನವಲನ ಸಿಸಿಟಿವಿಯಲ್ಲಿ ದಾಖಲಾಗಿದೆ.

ಆಜ್ಮೇರಾ ಇನ್‌ಫಿನಿಟಿ ನಿವಾಸಿಗಳ ಸಂಘ ಮತ್ತು ಆಜ್ಮೇರಾ ಹೌಸಿಂಗ್ ಕಾರ್ಪೊರೇಷನ್ ನಡುವೆ ಜಾಗದ ವಿವಾದ ಇದೆ ಎನ್ನಲಾಗಿದೆ. ಈ ವಿಚಾರವಾಗಿ ಹಲವು ದಿನಗಳಿಂದ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗೆ ದೂರು ಪ್ರತಿ ದೂರುಗಳನ್ನು ನೀಡಲಾಗಿತ್ತು.

ಬಿಲ್ಡರ್ ಕಡೆಯವರು ಕೆಲ ದಿನಗಳ ಹಿಂದೆ ನಿವಾಸಿಗಳಿಗೆ ರಿವಾಲ್ವರ್ ಹಿಡಿದು ಬೆದರಿಸಿದ್ದರು ಎಂದು ತಿಳಿದು ಬಂದಿದೆ. ಈಗ ಇದೇ ವಿವಾದದಿಂದಾಗಿ ಬಿಲ್ಡರ್‌ಗಳೇ ಅಪಹರಣಕ್ಕೆ ಯತ್ನಿಸಲಾಗಿದೆ ಎಂದು ಮ್ಯಾನೇಜರ್ ಚರಣ್ ಆರೋಪಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Comments are closed.