ಮನೋರಂಜನೆ

ಶರ್ಟ್‌ರಹಿತ ಕೊಹ್ಲಿ ಬ್ರೂಸ್‌ಲೀ ರೀತಿಯಲ್ಲಿ ಕಾಣುತ್ತಾರೆ: ಕಪಿಲ್ ದೇವ್

Pinterest LinkedIn Tumblr

koನವದೆಹಲಿ: ಭಾರತದ ಮಾಜಿ ನಾಯಕ ಕಪಿಲ್ ದೇವ್‌ಗೆ ವಿರಾಟ್ ಕೊಹ್ಲಿಯನ್ನು ಕಂಡರೆ ಪ್ರೀತಿ ಹೆಚ್ಚುತ್ತಿದೆ. ಭಾರತದ ಟೆಸ್ಟ್ ನಾಯಕನಿಗೆ ಬ್ರಿಯಾನ್ ಲಾರಾ ಅವರ ಸುದೀರ್ಘ ಕಾಲದ ದಾಖಲೆ 400 ರನ್ ಮುರಿಯುವಂತೆ ಹುರಿದುಂಬಿಸಿದ್ದ ಕಪಿಲ್ ಈಗ ಕೊಹ್ಲಿಯನ್ನು ಯುದ್ಧ ಕಲೆ ನಿಪುಣ ಮತ್ತು ನಟ ಬ್ರೂಸ್‌ಲೀಗೆ ಹೋಲಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ತಾವು ಹೇಗೆ ಫಿಟ್ನೆಸ್ ಕಡೆ ಗಮನವಹಿಸಿದೆ ಎಂದು ಕೊಹ್ಲಿ ಇತ್ತೀಚೆಗೆ ಬಹಿರಂಗ ಮಾಡಿದ್ದರು.

ಕೊಹ್ಲಿಯ ಫಿಟ್ನೆಸ್ ಫಲವಾಗಿ 2015ರ ಕೊನೆಯಲ್ಲಿ ಕೊಹ್ಲಿ ವಿಶ್ವಕ್ರಿಕೆಟ್‌ನಲ್ಲಿ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್ ಆಗಿದ್ದಾರೆ.
ಕೊಹ್ಲಿ ಫಿಟ್ನೆಸ್‌ಗೆ ಹೆಚ್ಚು ಗಮನನೀಡಿದ್ದರಿಂದ ಇಂತಹ ಮಾಂತ್ರಿಕ ಶೃಂಗ ಏರಲು ಸಾಧ್ಯವಾಗಿದೆ ಎಂದು ಕಪಿಲ್ ಭಾವಿಸಿದ್ದಾರೆ. ಕೊಹ್ಲಿ ಶ್ರಮಪಟ್ಟು ಕೆಲಸ ಮಾಡುತ್ತಾರೆ. ನಾನು ಕೊಹ್ಲಿಯ ಶರ್ಟ್‌ರಹಿತ ಚಿತ್ರವನ್ನು ನೋಡಿದ್ದು ಅವರು ಬ್ರೂಸ್‌ಲೀ ರೀತಿಯಲ್ಲಿ ಕಂಡುಬಂದರು ಎಂದು ಕಪಿಲ್ ಉದ್ಗರಿಸಿದ್ದಾರೆ.

ಕೊಹ್ಲಿಯ ಇತ್ತೀಚಿನ ಸತತ ಪ್ರಯತ್ನವು ಕ್ರಿಕೆಟ್ ತಜ್ಞರನ್ನು ಅಚ್ಚರಿಗೊಳಿಸಿದೆ. ಜಟಿಲ ಬೌಲಿಂಗ್ ದಾಳಿ ವಿರುದ್ಧ ವಿವಿಧ ಪರಿಸ್ಥಿತಿಯಲ್ಲಿ ಕೊಹ್ಲಿ ಏಳು ಶತಕಗಳನ್ನು ಸಿಡಿಸಿದ್ದಾರೆ. ಯಶಸ್ಸಿಗೆ ಕೊಹ್ಲಿಯ ಮಂತ್ರ ಸರಳವಾಗಿದ್ದು, ತಿನ್ನು, ನಿದ್ರೆಮಾಡು, ಅಭ್ಯಾಸಮಾಡು, ಪುನರಾವರ್ತಿಸು! ಎನ್ನುವುದು ಕೊಹ್ಲಿಯ ಮಂತ್ರವಾಗಿದೆ.

Comments are closed.