ಮನೋರಂಜನೆ

ಲೂಲಿಯಾಳ ಚಿತ್ರ ಬಿಡಿಸಿದ್ದು ಸಲ್ಮಾನ್ ಅವರೇನಾ?

Pinterest LinkedIn Tumblr

luಮುಂಬೈ: ಬಿಟೌನ್‌ನಲ್ಲಿ ಸದ್ಯಕ್ಕಂತೂ ಸಲ್ಮಾನ್ ಖಾನ್ -ಲೂಲಿಯಾ ವೆಂಟೂರ್ ಮದುವೆ ಕುರಿತು ಚರ್ಚೆ ನಡೆಯುತ್ತಿದೆ. ಆದ್ರೆ ಸಲ್ಮಾನ್ ಮಾತ್ರ ತಮ್ಮ ಗೆಳತಿ ಲೂಲಿಯಾಗೆ ಸರ್‌ಪ್ರೈಜ್‌ವೊಂದನ್ನು ನೀಡಿದ್ದಾರೆ ಎನ್ನಲಾಗುತ್ತಿದೆ. ಸಲ್ಮಾನ್ ಖಾನ್ ಖುದ್ದು ತನ್ನ ಕೈಯಾರೇ ಲೂಲಿಯಾಳ ಚಿತ್ರ ಬಿಡಿಸಿದ್ದಾರಾ? ಅದನ್ನು ಸಲ್ಮಾನ್ ಲೂಲಿಯಾಗೆ ಗಿಫ್ಟ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಲೂಲಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಫೊಟೋ ಶೇರ್ ಮಾಡಿದ್ದಾರೆ. ಆದ್ರೆ ಲೂಲಿಯಾಳ ಚಿತ್ರ ಬಿಡಿಸಿದ್ದು ಸಲ್ಮಾನ್ ಅವರೇನಾ ಅಂತ ಅಭಿಮಾನಿಗಳು ಯೋಚನೆ ಮಾಡುತ್ತಿದ್ದಾರಂತೆ. ಅಷ್ಟಕ್ಕೂ ಲೂಲಿಯಾಳ ಚಿತ್ರವನ್ನು ಬಿಡಿಸಿರೋದು ಯಾರು ಎಂಬುದು ಮಾತ್ರ ಲೂಲಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಿಳಿಸಿಲ್ಲ..

ಇನ್ನೂ ಲೂಲಿಯಾ ರೇಖಾಚಿತ್ರ ಬಿಡಿಸಿದ್ದು ಅದು ಸಲ್ಲುನೇ ಅಂತ ಹೇಳಲಾಗುತ್ತಿದೆ. ಯಾಕಂದ್ರೆ ಆ ಚಿತ್ರದಲ್ಲಿ ಸಹಿ ಇದೆಯಂತೆ. ಆ ಸಹಿ ಸಲ್ಮಾನ್ ಅವರದ್ದೇ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಸಲ್ಮಾನ್ ಖಾನ್ ತಮ್ಮ ಹಾಗೂ ಲೂಲಿಯಾ ಮಧ್ಯದ ಸಂಬಂಧವನ್ನು ಯಾವತ್ತು ಹೇಳಿಕೊಂಡಿಲ್ಲ. ಕಡೆಗೆ ಸಲ್ಲು ಲೂಲಿಯಾರನ್ನೇ ಮದುವೆಯಾಗ್ತಾರಾ? ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.

Comments are closed.