ಮನೋರಂಜನೆ

ವಿರಾಟ್ ಕೊಹ್ಲಿಗೆ ಬೌಲ್ ಮಾಡುವ ಮುಂಚೆ ಪ್ರಾರ್ಥಿಸುತ್ತಿದ್ದ ಬ್ರೆಟ್ ಲೀ

Pinterest LinkedIn Tumblr

breನವದೆಹಲಿ: ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ ಅತೀ ವೇಗದ ಬೌಲರ್ ಎನ್ನುವುದಕ್ಕೆ ಎರಡು ಮಾತಿಲ್ಲ. ವಿಶ್ವದರ್ಜೆಯ ಬ್ಯಾಟ್ಸ್‌ಮನ್‌ಗಳಿಗೆ ತಮ್ಮ ನಿರ್ದಯ ಎಸೆತಗಳ ಮೂಲಕ ಮೈನಡುಕ ಹುಟ್ಟಿಸುತ್ತಿದ್ದರು. ಆದರೆ ವಿರಾಟ್ ಕೊಹ್ಲಿಗೆ ಚೆಂಡು ಎಸೆಯುವಾಗ ತಾನು ಪ್ರಾರ್ಥನೆ ಮಾಡುತ್ತಿದ್ದೆ ಎಂದು ಬ್ರೆಟ್ ಲೀ ಹೇಳಿದ್ದಾರೆ.

ವಿಶೇಷ ಸಂವಾದದಲ್ಲಿ ನೀವು ಕೊಹ್ಲಿಗೆ ಹೇಗೆ ಬೌಲ್ ಮಾಡುತ್ತೀರಾ ಎಂದು ಪ್ರಶ್ನಿಸಿದಾಗ, ಮೊದಲು ನಾನು ನನ್ನ ಎಸೆತವನ್ನು ಕೊಹ್ಲಿ ಸಿಕ್ಸರ್ ಹೊಡೆಯದಂತೆ ಪ್ರಾರ್ಥಿಸುತ್ತೇನೆ. ವಿರಾಟ್ ಕೊಹ್ಲಿ ಮೈದಾನದ ಎಲ್ಲಾ ಕಡೆ ಪ್ರಬಲರಾಗಿದ್ದಾರೆ. ಅವರು 360 ಡಿಗ್ರಿ ಆಟಗಾರ.

ಏಕ ದಿನ ಪಂದ್ಯದಲ್ಲಿ ಅವರು ಸ್ಕೋರ್ ಮಾಡದಂತೆ ತಡೆಯಲು ನಾನು ಬಹುಶಃ ವೈಡ್ ಲೈನ್ ಯಾರ್ಕರ್ ಎಸೆಯುತ್ತಿದ್ದೆ ಎಂದು ಲೀ ಹೇಳಿದರು. ಭಾರತದ ಟೆಸ್ಟ್ ನಾಯಕನನ್ನು ಈ ಕ್ಷಣದಲ್ಲಿ ವಿಶ್ವದ ಶ್ರೇಷ್ಟ ಬ್ಯಾಟ್ಸ್‌ಮನ್ ಎಂದು ಶ್ಲಾಘಿಸಿದರು.

Comments are closed.