ಜೋಗಿ ಪ್ರೇಮ ಶಿಷ್ಯ ರಘು ಹಾಸನ್ ನಿರ್ದೇಶನದ ಗಾಂಧಿಗಿರಿ ಚಿತ್ರಕ್ಕೆ ಇದೀಗ ಮತ್ತೆ ಚಾಲನೆ ಸಿಕ್ಕಿದೆ.
ಫೋಟೋ ಶೂಟ್ ನಂತರ ಚಿತ್ರ ತಂಡದಿಂದ ಯಾವುದೇ ಸುದ್ದಿ ಹೊರ ಬಂದಿರಲಿಲ್ಲ. ಇದೀಗ ಚಿತ್ರದಲ್ಲಿ ರಾಗಿಣಿ ದ್ವಿವೇದಿ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದು ಈ ಚಿತ್ರಕ್ಕೆ ರಾಗಿಣಿ ಬರೋಬ್ಬರಿ 75 ಲಕ್ಷ ಪಡೆಯುತ್ತಿದ್ದಾರಂತೆ. ಇದು ನಿಜವಾದರೇ ಗಾಂಧಿನಗರದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.
ಸ್ವಲ್ಪ ದಪ್ಪಗಿದ್ದ ರಾಗಿಣಿ ಡಯೇಟ್ ಮೂಲಕ ಬಳಕುವ ಬಳ್ಳಿಯಂತಾಗಿದ್ದು, ಇದೀಗ ಗಾಂಧಿನಗರದಲ್ಲಿ ಬೇಡಿಕೆ ಹೆಚ್ಚಾಗಿದೆ. ಚಿತ್ರಕ್ಕಾಗಿ ರಾಗಿಣಿ 75 ಲಕ್ಷ ಪಡೆಯುತ್ತಿರುವುದಾಗಿ ಕೇಳಿದರೆ ಸುಮ್ಮನಾಗುತ್ತಾರೆ. ನಾನು ಸದ್ಯ ಚಿತ್ರದ ಭಾಗವಾಗಿದ್ದು, ಸಂಭಾವನೆ ವಿಚಾರ ನನಗೆ ಹಾಗೂ ನಿರ್ಮಾಪಕರಿಗೆ ಬಿಟ್ಟಿದ್ದು ಎಂದು ಕಡ್ಡಿ ಮುರಿದಂತೆ ಮಾತನಾಡುತ್ತಾರೆ.
ಬಾಲಿವುಡ್ ನ ಮೇ ಹೂ ನಾ ಚಿತ್ರದಲ್ಲಿ ಸುಸ್ಮಿತ ಸೇನೆ ನಟಿಸಿದ್ದ ಶಿಕ್ಷಕಿ ಪಾತ್ರದಂತೆ ನಾನು ಗಾಂಧಿಗಿರಿ ಚಿತ್ರದಲ್ಲಿ ಶಿಕ್ಷಕಿಯಾಗಿ ನಟಿಸುತ್ತಿದ್ದೇನೆ ಎಂದರು. ಚಿತ್ರ ಆಗಸ್ಟ್ 17ರಂದು ಪ್ರಾರಂಭಗೊಳ್ಳಲಿದೆ.
ವೇದಮೂರ್ತಿ ಮತ್ತು ಆರ್ ಜೆ ಸ್ಟುಡಿಯೋಸ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
Comments are closed.