ಬೆಂಗಳೂರು: ನಟ ಸುದೀಪ್ ಹಾಗೂ ನಿತ್ಯಾ ಮೆನನ್ ಕೋಟಿಗೊಬ್ಬ-2 ಚಿತ್ರದಲ್ಲಿ ಜತೆ ಜತೆಯಾಗಿ ಅಭಿನಯಿಸುತ್ತಿರೋದು ನಿಮಗೆಲ್ಲಾ ಗೊತ್ತು.
ನಟಿ ನಿತ್ಯಾ ಮೆನನ್ ನಿರ್ದೇಶನದ ಚಿತ್ರದಲ್ಲಿ ಸುದೀಪ್ ನಟಿಸಲಿದ್ದಾರೆ ಎಂದು ಕೇಳಿ ಬರುತ್ತಿದೆ. ನಿತ್ಯಾ ಮೆನನ್ ಸುದೀಪ್ ಅವರನ್ನು ತೆಗೆದುಕೊಳ್ಳುವ ಪ್ಲ್ಯಾನ್ ನಲ್ಲಿದ್ದಾರಂತೆ.
ಕನ್ನಡ ಚಿತ್ರರಂಗದಲ್ಲಿ ಸುದೀಪ್ ನನಗೆ ಉತ್ತಮ ಸ್ನೇಹಿತ ಅಂತ ನಿತ್ಯಾ ಮೆನನ್ ಹೇಳಿದ್ದರು. ಇನ್ನೂ ನಿತ್ಯಾ ಅಭಿನಯಿಸಲಿರುವ ಚಿತ್ರಕ್ಕೆ ತಾವೇ ನಿರ್ದೇಶನ ಮಾಡಲಿದ್ದಾರಂತೆ. ಈ ಚಿತ್ರಕ್ಕೆ ಅವರು ಸುದೀಪ್ರನ್ನು ತೆಗೆದುಕೊಳ್ಳಲಿದ್ದಾರಂತೆ.
ಈ ಮೂಲಕ ಸುದೀಪ್ ಎಲ್ಲಾ ಅಭಿಮಾನಿಗಳಿಗೂ ನಿತ್ಯಾ ಮೆನನ್ ಸರ್ಪ್ರೈಜ್ ನೀಡಿದ್ದಾರೆ. ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿರುವ ನಿತ್ಯಾ ಮೆನನ್, ಎಲ್ಲಾ ಸಮಯದಲ್ಲೂ ಸುದೀಪ್ ಅವರನ್ನು ಕಂಡಾಗ ಸ್ಟೋರಿ ಬರೆಯಲು ಇನ್ಸ್ಪೈರ್ ಆಗುತ್ತಾರೆ ಎಂದು ತಿಳಿಸಿದ್ದರು.
ನಾನು ಪ್ರಸ್ತುತಪಡಿಸುತ್ತಿರುವ ಸ್ಟೋರಿ ಬರೆಯಲು ನನ್ನ 3 ಕಿರುಚಿತ್ರಗಳ ಕಥೆ ಪ್ರೇರಣೆಯಾಗಿದೆ. ಆದ್ದರಿಂದ ಚಿತ್ರ ನಿರ್ದೇಶನ ಮಾಡಲಿಕ್ಕೆ ಇದು ಸಹಾಯವಾಗಿದೆ ಎಂದು ನಿತ್ಯಾ ಮೆನನ್ ತಿಳಿಸಿದ್ದಾರೆ.
Comments are closed.