ಮನೋರಂಜನೆ

‘ಸುಲ್ತಾನ್’ ನೋಡಿ, ಶಾಲಾ ಮಕ್ಕಳಿಗೆ ಶಿಕ್ಷಣಾಧಿಕಾರಿ ಸುತ್ತೋಲೆ

Pinterest LinkedIn Tumblr

sultan-WEB

ಛತ್ತೀಸ್ಗಢ: ಮಕ್ಕಳಿಗೆ ಸುಲ್ತಾನ್ ಸಿನಿಮಾ ತೋರಿಸಿ, ಇದರಿಂದ ಸ್ಪೂರ್ತಿ ಪಡೆದು ಅವರು ಜೀವನದ ಗುರಿಯನ್ನು ನಿರ್ಧರಿಸುವಂತಾಗಲಿ ಎಂದು ಗೌರೇಲಾ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಸಲ್ಮಾನ್ ಖಾನ್ ಅಭಿನಯದ ಬಹು ಜನಪ್ರಿಯ ಸುಲ್ತಾನ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಜಯಭೇರಿ ಬಾರಿಸಿದ್ದು ಮಾತ್ರವಲ್ಲ, ಬೆಳೆಯುವ ಮಕ್ಕಳಿಗೆ ರಂಜನೆ ಜೊತೆಗೆ ಪ್ರೇರಣಾದಾಯಕವಾಗಿಯೂ ಇದೆ. ಭಾರತೀಯ ಮೂಲದ ಕ್ರೀಡೆ ಕುಸ್ತಿಯ ಮಹತ್ವ ಮತ್ತು ಹಿರಿಮೆಯನ್ನು ಎತ್ತಿ ಹಿಡಿದಿದೆ. ಹಾಗಾಗಿ ಇದು ಮಕ್ಕಳು ನೋಡಲೇಬೇಕಾದ ಚಿತ್ರ. ಮುಖ್ಯ ಶಿಕ್ಷಕರು ಇದಕ್ಕೆ ಸಹಕರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್. ಕುಜೂರ್ ಸರ್ಕಾರಿ ಶಾಲೆಗಳಿಗೆ ಕಳಿಸಿರುವ ಸುತ್ತೋಲೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಗಿರ್ವಾರ್ ಗ್ರಾಮದ ಸರ್ಕಾರಿ ಶಾಲೆಯ 70 ಮಕ್ಕಳು ಈಗಾಗಲೇ ಸಿನಿಮಾ ವೀಕ್ಷಿಸಿ ಖುಷಿ ಪಟ್ಟಿದ್ದಾರೆ. ಇನ್ನೂ ಸಾವಿರಾರು ಮಕ್ಕಳು ವೀಕ್ಷಣೆಗೆ ಸಿದ್ಧರಾಗಿದ್ದಾರೆ.

Comments are closed.