ನವದೆಹಲಿ, ಜು.31-ದೇಶದಲ್ಲಿರುವ ಅರ್ಧದಷ್ಟು ಪೆಟ್ರೋಲ್ ಬಂಕ್ ಗಳನ್ನು ನಿರ್ವಹಿಸುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಗ್ರಾಹಕರಿಗೆ ಒಂದು ಹೊಸ ವ್ಯವಸ್ಥೆಯನ್ನು ಒದಗಿಸಲು ಮುಂದಾಗಿದೆ.
ಈ ವ್ಯವಸ್ಥೆ ಜಾರಿಗೆ ಬಂದಲ್ಲಿ ಪೆಟ್ರೋಲ್, ಡೀಸೆಲ್ ಹಾಕಿಸಲು ಕ್ಯೂ ನಿಲ್ಲಬೇಕಿಲ್ಲ. ಐಒಸಿ, ಪೆಟ್ರೋಲ್ ಬಂಕ್ ಗೆ ಹೋಗುವ ಸಮಯವನ್ನು ಮೊದಲೇ ಬುಕ್ ಮಾಡಿಕೊಳ್ಳುವಂತ ವ್ಯವಸ್ಥೆ ಜಾರಿಗೆ ತರಲಿದೆ. ಬಂಕ್ಗೆ ಭೇಟಿ ನೀಡುವ ಸಮಯವನ್ನು ಮೊದಲೇ ಕಾದಿರಿಸುವ ಗ್ರಾಹಕರಿಗೆ ಹಾಗೂ ಹಣವನ್ನು ಮೊದಲೇ ಪಾವತಿಸುವ ಗ್ರಾಹಕರಿಗೆ ರೆಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಷನ್ ಟ್ಯಾಗ್ ನೀಡಲಾಗುತ್ತದೆ. ಈ ಟ್ಯಾಗ್ ಇರುವ ವಾಹನ, ಪೆಟ್ರೊಲ್ ಬಂಕ್ ಸಮೀಪದಲ್ಲಿರುವಾಗಲೇ ಬಂಕ್ ಸಿಬ್ಬಂದಿಗಳಿಗೆ ಮಾಹಿತಿ ಸಿಗುತ್ತದೆ.
ಮಾಹಿತಿ ಪಡೆದ ಸಿಬ್ಬಂದಿಗಳು ನಿಮ್ಮ ವಾಹನ ಬಂಕ್ ಪ್ರವೇಶ ಮಾಡುತ್ತಿದ್ದಂತೆಯೇ ಇಂಧನ ತುಂಬಿಸಿ ಕಳುಹಿಸುತ್ತಾರೆ. ವರದಿಯ ಪ್ರಕಾರ, ಇನ್ನು ಆರೆಂಟು ತಿಂಗಳಲ್ಲೇ ಈ ಯೋಜನೆ ಜನರಿಗೆ ಬರಲಿದೆ.
Comments are closed.