ಮನೋರಂಜನೆ

ಸೈಫ್ ಜತೆಗೆ ಕರೀನಾ ಮದುವೆ ನಿರ್ಧಾರ ಹೇಳಿದ ವೇಳೆ ಕರಿಷ್ಮಾ ,ಬಬಿತಾಗೆ ಶಾಕ್ ಆಗಿತ್ತು!

Pinterest LinkedIn Tumblr

kariಮುಂಬೈ: ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಬಾಲಿವುಡ್‌ನ ಬೆಸ್ಟ್ ಕಪಲ್ಸ್‌ಗಳಲ್ಲಿ ಒಬ್ಬರು. ಮದುವೆ ಬಗ್ಗೆ ಕರೀನಾ ಒಬ್ಬರೇ ನಿರ್ಧಾರ ತೆಗೆದುಕೊಂಡಿರಲಿಲ್ಲ.. ಕುಟುಂಬದ ಸದಸ್ಯರ ಒಪ್ಪಿಗೆಯ ಮೇರೆಗೆ ಮದುವೆಯಾಗಿದ್ದ ಬೆಬೋ, ಮೊದಲ ಬಾರಿಗೆ ಸೈಫ್ ಜತೆಗೆ ಮದುವೆಯಾಗ್ತುತ್ತೇನೆ ಎಂದು ಕರಿಷ್ಮಾ ಹಾಗೂ ತಾಯಿ ಬಬಿತಾಗೆ ವಿಷಯ ತಿಳಿಸಿದ್ದರು. ಆದ್ರೆ ಅಂದು ಕರಿಷ್ಮಾ ಹಾಗೂ ಅಮ್ಮ ಬಬೀತಾಗೆ ಶಾಕ್ ಆಗಿತ್ತಂತೆ.

ಆದ್ರೆ ಕರೀನಾ ತೆಗೆದುಕೊಂಡ ನಿರ್ಧಾರದ ಬಗ್ಗೆ ಇಬ್ಬರು ಒಪ್ಪಿಕೊಂಡಿದ್ದರು ಎಂದು ಮಾಹಿತಿ ತಿಳಿದು ಬಂದಿದೆ. ಕರೀನಾ ತಮ್ಮ ಲೈಫ್‌ಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡರು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಾಳೆ. ಈ ವಿಷಯದಲ್ಲಿ ಅವರು ಪಾಸಿಟಿವ್ ಆಗಿದ್ದರಂತೆ. ಎಲ್ಲವನ್ನು ಬದಿಗೊತ್ತಿ ಕರೀನಾ ಸೈಫ್‌ರನ್ನು ಮದುವೆಯಾಗಲು ಅನುಮತಿ ಪಡೆದುಕೊಂಡಿದ್ದರು ಎನ್ನಲಾಗುತ್ತಿದೆ.

ಕರೀನಾ ಕಪೂರ್ ಸೈಫ್ ಅಲಿ ಖಾನ್ ಜತೆಗೆ ಡೇಟಿಂಗ್ ನಡೆಸುತ್ತಿರುವುದನ್ನು ತಿಳಿದ ಅಭಿಮಾನಿಗಳಿಗೂ ಅಂದು ಶಾಕ್ ಆಗಿತ್ತು. 2007ರಲ್ಲಿ ಪಬ್ಲಿಕ್ ಎದುರು ಕಾಣಿಸಿಕೊಂಡ ಎರಡು ಜೋಡಿಗಳು, 2009ರಲ್ಲಿ ಸೈಫ್ ಅಲಿ ಖಾನ್ ತಮ್ಮಿಬ್ಬರ ಸಂಬಂಧದ ಬಗ್ಗೆ ಅಧಿಕೃತವಾಗಿ ಹೊರಹಾಕಿದ್ದರು. ಬಳಿಕ ಅಕ್ಟೋಂಬರ್ 2012ರಂದು ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಸೈಫ್ ಜತೆಗೆ ಮದುವೆಯಾದ ಬಳಿಕ ಕರೀನಾ ಮೊದಲ ಬಾರಿಗೆ ತಾಯಿಯಾಗುತ್ತಿದ್ದಾರೆ. ಇಬ್ಬರು ಪೋಷಕರ ಜವಾಬ್ದಾರಿ ತೆಗೆದುಕೊಳ್ಳಲು ರೆಡಿಯಾಗಿದ್ದಾರೆ. ಇನ್ನೂ ಕರೀನಾ ತಮ್ಮ ಮುಂಬರುವ ಚಿತ್ರ ‘ವೀರ್ ದಿ ವೆಡ್ಡಿಂಗ್’ ಶೂಟಿಂಗ್‌ನಲ್ಲಿ ಬ್ಯೂಸಿ ಇದ್ದಾರೆ.

Comments are closed.