ಮುಂಬೈ: ಜವಾಬ್ದಾರಿಯುತ ಪಾಲಕರಾಗಿರುವ ಹೃತಿಕ್ ರೋಷನ್ ಹಾಗೂ ಸುಸೈನ್ ಖಾನ್ ವಿಚ್ಛೇದನೆ ಪಡೆದುಕೊಂಡಿದ್ದರು, ಅದಾದ ಬಳಿಕ ಇಬ್ಬರು ಹಾಲಿ ಡೈ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಸೈನ್ ಖಾನ್ ನಾವಿಬ್ಬರು ಹಾಲಿಡೇ ನಡೆಸುತ್ತಿರುವುದು ಸುಳ್ಳು ಎಂದು ತಿಳಿಸಿದ್ದಾರೆ.
ನಾನು ಹಾಗೂ ಹೃತಿಕ್ ಇಬ್ಬರು ಉತ್ತಮ ಪೋಷಕರಾಗಲು ಬಯಸುತ್ತೇವೆ. ಮಕ್ಕಳು ನಮಗೆ ಮೊದಲು ಮುಖ್ಯವಾಗುತ್ತವೆ. ಇಬ್ಬರು ಜತೆಗೂಡಿ ಊಟ ಮಾಡಿದ್ದೇವೆ. ಆದ್ರೆ ಹೃತಿಕ್ ಜತೆಗೆ ಹಾಲಿ ಡೇ ಕಳೆಯುವುತ್ತಿಲ್ಲ ಎಂದು ಸುಸೈನ್ ಖಾನ್ ಸ್ಪಷ್ಟನೆ ನೀಡಿದ್ದಾರೆ.
ಹೃತಿಕ್ ಆಗಲಿ ಇಲ್ಲಾ ಸುಸೈನ್ ಆಗಲಿ ಈ ಬಗ್ಗೆ ಹೆಚ್ಚೇನು ಹೇಳಿರಲಿಲ್ಲ. ಕೆಲ ದಿನಗಳ ಹಿಂದೆ ಸುಸೈನ್ ಬಾಯ್ಬಿಟ್ಟಿದ್ದರು. ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಸುಸೈನ್, ನಾನು ಹಾಗೂ ಹೃತಿಕ್ ಬಾಲ್ಯದ ಗೆಳೆಯರು. ಗಂಡ ಹೆಂಡತಿ ಅನ್ನೋದಕ್ಕಿಂತ ಹೆಚ್ಚಾಗಿ ಸ್ನೇಹಿತರು.
ಆದ್ರೆ ಅದ್ಯಾಕೋ ನಮಗೆ ಸಂಸಾರದಲ್ಲಿ ಸಮರಸ ಸಾಧಿಸೋದಕ್ಕೆ ಸಾಧ್ಯವಾಗಲಿಲ್ಲ. ಒಂದು ಸಂಬಂಧ ಸರಿ ಬರೋದಿಲ್ಲ ಅಂದಮೇಲೆ ಅದನ್ನು ಮುಂದುವರೆಸಿಕೊಂಡು ಹೋಗೋದು ಸರಿ ಕಾಣಲಿಲ್ಲ. ಆದ್ದರಿಂದ ನಾವಿಬ್ಬರು ಪರಸ್ಪರ ಒಪ್ಪಿಗೆಯಿಂದಲೇ ದೂರವಾದೆವು.
ಆದ್ರೆ ಇಂದಿಗೂ ನಾವು ಮಕ್ಕಳಿಗೆ ಮಾತ್ರ ನಾವಿಬ್ಬರು ದೂರವಾಗಿ ಅವರಿಗೆ ಕಷ್ಟವಾಗುತ್ತಿದೆ ಅನ್ನೋ ರೀತಿ ನಡೆದುಕೊಳ್ಳುತ್ತಿಲ್ಲ ಅಂತಾ ಸುಸೈನ್ ಹೇಳಿದ್ದರು.
Comments are closed.