ಆ್ಯಂಟಿಗುವಾ: ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ ವೆಸ್ಟ್ ಇಂಡೀಸ್ ಸಂತೋಷದ ಬೇಟೆಯ ತಾಣವಾಗಿರಲಿಲ್ಲ. ಭಾರತದ ಯುವ ನಾಯಕ 2011ರಲ್ಲಿ ಕ್ಯಾರಿಬಿಯನ್ ಪ್ರವಾಸ ಮಾಡಿದ್ದು, ಕೇವಲ ಐದು ಇನ್ನಿಂಗ್ಸ್‌ಗಳಲ್ಲಿ 15.20 ಸರಾಸರಿಯೊಂದಿಗೆ ಹಿಂತಿರುಗಿದ್ದರು. ಆದರೆ ಈ ಬಾರಿ ಕಥೆ ಸಂಪೂರ್ಣ ಭಿನ್ನವಾಗಿದೆ.
ಕೊಹ್ಲಿ ಈಗ ಕಿರು ಮಾದರಿಗಳ ಕ್ರಿಕೆಟ್‌ನಲ್ಲಿ ಕೊಲೊಸಸ್ ರೀತಿ ದಾಪುಗಾಲು ಹಾಕಿದ್ದು, ಯಾವುದೇ ಪರಿಸ್ಥಿತಿಗೆ ಹೊಂದಿಕೊಳ್ಳುವ ಪ್ರತಿಯೊಂದು ಅವಕಾಶಕ್ಕೂ ಸವಾಲು ಹಾಕುವ ಕೊಹ್ಲಿ ಸಾಮರ್ಥ್ಯದಿಂದಾಗಿ ವೆಸ್ಟ್ ಇಂಡೀಸ್ ಬೌಲರುಗಳ ಮಗ್ಗುಲ ಮುಳ್ಳಾಗಿದ್ದಾರೆ. ಎರಡನೇ ಅಭ್ಯಾಸ ಪಂದ್ಯದಲ್ಲಿ ಅವರ ರನ್ ಹಸಿವು ಸಾಬೀತಾಗಿದೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಕೇವಲ 14 ರನ್ ಗಳಿಸಿದ ಬಳಿಕ, ಕೊಹ್ಲಿ ಎರಡನೇ ಪಂದ್ಯದಲ್ಲಿ 51 ರನ್ ಸಿಡಿಸಿದರು. ಎರಡು ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿ 96 ಎಸೆತಗಳನ್ನು ಎದುರಿಸಿದರು.
41 ಪಂದ್ಯಗಳಲ್ಲಿ 11 ಟೆಸ್ಟ್ ಶತಕಗಳನ್ನು ಗಳಿಸಿದ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ 6 ಟೆಸ್ಟ್‌ಗಳಲ್ಲಿ ಒಂದು ಶತಕವನ್ನು ಕೂಡ ಸ್ಕೋರ್ ಮಾಡಿಲ್ಲ. ಕೊಹ್ಲಿ ಅವರ 27.88 ಟೆಸ್ಟ್ ಸರಾಸರಿಯು ಇಂಗ್ಲೆಂಡ್(20.12) ಮತ್ತು ಬಾಂಗ್ಲಾದೇಶ(14) ಸರಾಸರಿಗಿಂತ ಉತ್ತಮವಾಗಿದೆ. ಭಾರತ ಕ್ಯಾರಿಬಿಯನ್ ದ್ವೀಪದಲ್ಲಿ ಮೂರನೇ ಸರಣಿ ಜಯಕ್ಕಾಗಿ ಎದುರುನೋಡುತ್ತಿರುವ ನಡುವೆ ವೆಸ್ಟ್ ಇಂಡೀಸ್ ದುರಾದೃಷ್ಟದಿಂದ ಕೊಹ್ಲಿ ಹೊರಬರುವರೇ ಎಂಬ ಕುತೂಹಲ ಮೂಡಿಸಿದೆ.
Comments are closed.