ರಾಷ್ಟ್ರೀಯ

ಹೋಟೆಲ್ ನಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್, ಮೂವರ ಬಂಧನ

Pinterest LinkedIn Tumblr

rape-2ಚಂಡೀಗಢ: 21 ವರ್ಷ ವಿದ್ಯಾರ್ಥಿನಿ ಮೇಲೆ ಎರಡನೇ ಬಾರಿ ಅತ್ಯಾಚಾರ ಎಸಗಿದ ಘಟನೆಯ ಬೆನ್ನಲ್ಲೇ ಹರಿಯಾಣದ ಕರ್ನಲ್ ಜಿಲ್ಲೆಯ ಹೋಟೆಲ್ ನಲ್ಲಿ ವಿವಾಹಿತ ಮಹಿಳೆಯೊಬ್ಬರ ಮೇಲೆ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಸೋನೆಪತ್ ಮೂಲದ ಮಹಿಳೆ ಮೇಲೆ ನಿನ್ನೆ ಕರ್ನಲ್ ನ ಹೋಟೆಲ್ ನಲ್ಲಿ ಅತ್ಯಾಚಾರ ಎಸಗಲಾಗಿದ್ದು, ಆರೋಪಿಗಳ ಪೈಕಿ ಓರ್ವನೊಂದಿಗೆ ಮಹಿಳೆ ಕೆಲವು ದಿನಗಳಿಂದ ದೂರವಾಣಿ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ನಿನ್ನೆ ಮಹಿಳೆಯನ್ನು ಕರ್ನಲ್ ಗೆ ಕರೆದಿದ್ದು, ಕರ್ನಲ್ ಗೆ ಆಗಮಿಸಿದ ಮಹಿಳೆಯನ್ನು ಹೋಟೆಲ್ ಗೆ ಕರೆದೊಯ್ದು ತನ್ನ ಇತರೆ ಇಬ್ಬರು ಸ್ನೇಹಿತರೊಂದಿಗೆ ಕೃತ್ಯ ಎಸಗಿದ್ದಾನೆ ಎಂದು ಕರ್ನಲ್ ಡಿಎಸ್ಪಿ ಜಿತೇಂದ್ರ ಗೇಹ್ಲಾವಾಟ್ ಅವರು ಹೇಳಿದ್ದಾರೆ.

ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇಬ್ಬರು ಅಸಂಧ್ ಹಾಗೂ ಓರ್ವ ಆರೋಪಿ ಕರ್ನಲ್ ಮೂಲದವರಾಗಿದ್ದಾರೆ. ಆರೋಪಿಗಳ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Comments are closed.