ನವದೆಹಲಿ: ಇಲ್ಲಿಯವರೆಗೆ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದ ಬಾಲಿವುಡ್ ಬೆಡಗಿ ಕತ್ರೀನಾ ಕೈಫ್ ಶನಿವಾರ ಫೇಸ್‍ಬುಕ್‍ನಲ್ಲಿ ವಿಡಿಯೋವೊಂದನ್ನು ಅಪ್‍ಲೋಡ್ ಮಾಡುವ ಮೂಲಕ ಸೋಷ್ಯಲ್ ನೆಟ್ವರ್ಕ್‍ಗೆ ಪ್ರವೇಶಿಸಿದ್ದಾರೆ.
ಶನಿವಾರ ತಮ್ಮ 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಈ ಹಾಟ್ ನಟಿ, ‘ಲೆಟ್ಸ್ ಡೂ ದಿಸ್’ ಎಂಬ ಶೀರ್ಷಿಕೆ ನೀಡಿ ತಮ್ಮ ವಿಡಿಯೋ ಅಪ್‍ಲೋಡ್ ಮಾಡಿದ್ದಾರೆ.
ತನ್ನ ನೂತನ ಚಿತ್ರದ ಪ್ರಚಾರಕ್ಕಾಗಿಯೇ ಇದೀಗ ಕತ್ರೀನಾ ಸೋಷ್ಯಲ್ ನೆಟ್ವರ್ಕ್‍ಗೆ ಬಂದಿದ್ದಾಳೆ ಎಂದು ಹೇಳಲಾಗುತ್ತಿದೆ.
ಗೂಗಲ್ ಸರ್ಚ್‍ನಲ್ಲಿ ಸನ್ನಿ ಲಿಯೋನಿ ನಂತರ ಜನರು ಅತೀ ಹೆಚ್ಚು ಸರ್ಚ್ ಮಾಡಿದ ನಟಿಯರ ಪಟ್ಟಿಯಲ್ಲಿ ಕತ್ರೀನಾ ಕೈಫ್ ಅಗ್ರ ಸ್ಥಾನದಲ್ಲಿದ್ದಾರೆ.
ಕತ್ರೀನಾ ಅಪ್‍ಲೋಡ್ ಮಾಡಿದ ಈ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
Comments are closed.