ಮುಂಬೈ: ಬಾಲಿವುಡ್ ನಟಿ ಕತ್ರೀನಾ ಕೈಫ್ ಇವತ್ತು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ ಕತ್ರೀನಾ ಕೈಫ್ ತಮ್ಮ ಆಪ್ತರ ಜತೆಗೆ ಬರ್ತಡೇ ಸೆಲೆಬ್ರೆಟ್ ಮಾಡಿದ್ದಾರೆ. ಕ್ಯಾಟ್ ತಮ್ಮ ಹುಟ್ಟುಹಬ್ಬವನ್ನು ಸ್ಪೆಷಲ್ ಆಗಿ ಕೆಲ ಸ್ನೇಹಿತರ ಜತೆ ಆಚರಿಸಿಕೊಂಡಿದ್ದಾರೆ.
ಇನ್ನೂ ಬರ್ತಡೇ ಪಾರ್ಟಿಗೆ ಕತ್ರೀನಾ ಕೈಫ್ ಅಮ್ಮ ಹಾಗೂ ಸಹೋದರಿ ಕೂಡ ಮುಂಬೈಗೆ ಆಗಮಿಸಿ ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಅಲ್ಲದೇ ಇದೇ ವೇಳೆ ಆಲಿಯಾ ಭಟ್, ಸಿದ್ದಾರ್ಥ ಮಲೋತ್ರಾ ಸೇರಿದಂತೆ ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಿ ಶುಭಾಷಯ ಕೋರಿದ್ದಾರೆ.
ಕೆಲ ದಿನಗಳ ಹಿಂದೆ ಆಲಿಯಾ ಭಟ್ ಹಾಗೂ ಕತ್ರೀನಾ ಕೈಫ್ ಇಬ್ಬರ ಫೊಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು. ಇಬ್ಬರು ಸಹೋದರಿಯರಂತೆ ಕಾಣಿಸಿಕೊಳ್ಳುತ್ತಾರೆ ಎಂದು ಪೂಜಾ ಭಟ್ ಹೇಳಿಕೆ ನೀಡಿದ್ದರು.
ಇನ್ನೂ ನಿರ್ಮಾಪಕ ಕಬೀರ್ ಬೇಡಿ ಹಾಗೂ ಪತ್ನಿ ಭಾಗಿಯಾಗಿದ್ದರೆ. ಖ್ಯಾತ ನಿರ್ಮಾಪಕ ಕರಣ್ ಜೋಹರ್ ಕೂಡ ಭಾಗಿಯಾಗಿದ್ದರು. ಆದ್ರೆ ಸಲ್ಮಾನ್ ಖಾನ್ ಕತ್ರೀನಾ ಕೈಫ್ ಬರ್ತಡೇಗೆ ಹಾಜರಾಗಿರಲಿಲ್ಲ.
ಮೊದಲ ಬಾರಿಗೆ ಸೋಷಿಯಲ್ ನೆಟ್‌ವರ್ಕಿಂಗ್ ಬಳಕೆ ಮಾಡದ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದ ನಟಿ ಕ್ಯಾಟ್ ಇಂದು ಫೇಸ್‌ಬುಕ್‌ಗೆ ಎಂಟ್ರಿ ನೀಡುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಅಲ್ಲದೇ ಇವತ್ತು ನಟಿ ಕತ್ರೀನಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟು ಹಬ್ಬದ ದಿನದಂದೇ ಅವರು ಸೋಷಿಯಲ್ ನೆಟ್‌ವರ್ಕ್‌ಗೆ ಎಂಟ್ರಿ ನೀಡುತ್ತಿರುವುದು ವಿಶೇಷ.
ಈ ಬಗ್ಗೆ ಕ್ಯಾಟ್ ಕುತೂಹಲದಿಂದ ಕಾಯುತ್ತಿದ್ದಾರಂತೆ.. ಮೊದಲ ಬಾರಿಗೆ ಫೇಸ್‌ಬುಕ್‌ಗೆ ಲಾಗಿನ್ ಆಗುತ್ತಿರುವ ಕತ್ರೀನಾ ಈ ಬಗ್ಗೆ ತಮ್ಮ ಕವರ್ ಫೊಟೋವನ್ನು ಕೂಡ ಹಾಕಿದ್ದಾರೆ. ಅಲ್ಲದೇ ಈ ಕುರಿತು ಕ್ಯಾಟ್ ವಿಡಿಯೋ ಶೇರ್ ಮಾಡಿದ್ದಾರೆ. ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಸಾಮಾಜಿಕ ಜಾಲತಾಣಗಳಿಗೆ ಸೇರ್ಪಡೆಗೊಂಡಿದ್ದಾರೆ.
Comments are closed.