ಬೆಂಗಳೂರು: ಅನಾರೋಗ್ಯದ ಕಾರಣ ಚಿತ್ರೀಕರಣದಿಂದ ದೂರವುಳಿದಿದ್ದ ಕಿಚ್ಚ ಸುದೀಪ್ ಇದೀಗ ಚೇತರಿಸಿಕೊಂಡಿದ್ದು ‘ಹೆಬ್ಬುಲಿ’ ಚಿತ್ರೀಕರಣಕ್ಕೆ ಮರಳಿದ್ದಾರೆ.
ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಜತೆ ಕ್ರೇಜಸ್ಟಾರ್ ರವಿಚಂದ್ರನ್ ಸಹೋದರನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
‘ಮಾಣಿಕ್ಯ’ ಚಿತ್ರದ ನಂತರ ಕಿಚ್ಚ ಮತ್ತು ಕ್ರೇಜಿಸ್ಟಾರ್ ಸಂಗಮದ ಎರಡನೇ ಚಿತ್ರ ಇದಾಗಿದ್ದು, ಸಿನಿಮಾ ಪ್ರೇಮಿಗಳಲ್ಲಿ ಹೆಚ್ಚಿನ ನಿರೀಕ್ಷೆ ಹುಟ್ಟು ಹಾಕಿದೆ.
ಎ. ಕೃಷ್ಣ ನಿರ್ದೇಶನದ ಹೆಬ್ಬುಲಿ ಚಿತ್ರದಲ್ಲಿ ಅಮಲಾ ಪೌಲ್ ನಾಯಕಿಯಾಗಿದ್ದು, ರವಿಶಂಕರ್ , ಕಬೀರ್ ದುಹಾನ್ ಸಿಂಗ್ , ರವಿ ಕಿಶನ್ ಮೊದಲಾದವರು ತಾರಾಗಣದಲ್ಲಿದ್ದಾರೆ.
Comments are closed.