ಮನೋರಂಜನೆ

ದಿಗಂತ್‌ ಕಣ್ಣಿಗೆ ಮೂರನೆಯ ಸರ್ಜರಿ

Pinterest LinkedIn Tumblr

diganthದಿಗಂತ್‌ ಕಪ್ಪು ಕೂಲಿಂಗ್‌ ಗ್ಲಾಸ್‌ ಹಾಕಿಕೊಂಡೇ ತಿರುಗುತ್ತಿದ್ದಾರೆ. ಸಾಮಾನ್ಯವಾಗಿ ಆ ತರಹ ತಿರುಗುವ ಮನುಷ್ಯ ಅವರಲ್ಲ. ಅದರಲ್ಲೂ ಮಾಧ್ಯಮ ಮುಂದೆ ಬಂದಾಗ ಅವರು ಕೂಲಿಂಗ್‌ ಗ್ಲಾಸ್‌ ತೆಗೆದೇ ಬರುತ್ತಾರೆ. ಆದರೆ, ಈ ಬಾರಿ ದಿಗಂತ್‌ ಕೂಲಿಂಗ್‌ ಗ್ಲಾಸ್‌ ತೆಗೆಯಲು ಹಿಂದೆ-ಮುಂದೆ ನೋಡುತ್ತಿದ್ದಾರೆ. ಅದಕ್ಕೆ ಕಾರಣ ದಿಗಂತ್‌ ಅವರ ಕಣ್ಣಿಗೆ ಏಟಾಗಿರುವುದು. ಹೌದು, ದಿಗಂತ್‌ ಅವರ ಬಲಗಣ್ಣಿಗೆ ಬಲವಾದ ಏಟಾಗಿದ್ದು, ದಿಗಂತ್‌ ಈಗಷ್ಟೇ ಅದರಿಂದ ಸುಧಾರಿಸಿಕೊಳ್ಳುತ್ತಿದ್ದಾರೆ. ಈ ಏಟಿಗೆ ಕಾರಣ ಅವರ ಹಿಂದಿ ಚಿತ್ರ.

ದಿಗಂತ್‌ “ಟಿಕೆಟ್‌ ಟು ಬಾಲಿವುಡ್‌’ ಎಂಬ ಹಿಂದಿ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ನಿಮಗೆ ಗೊತ್ತೇ ಇದೆ. ಆ ಚಿತ್ರದ ಫೈಟಿಂಗ್‌ ದೃಶ್ಯದ ವೇಳೆ ಮೆಟಲ್‌ ಚೂರೊಂದು ಬಂದು ಅವರ ಕಣ್ಣಿನೊಳಗೆ ತೂರಿದ ಪರಿಣಾಮ ಬಲವಾದ ಏಟಾಗಿದೆ. ಈಗಾಗಲೇ ಮೂರನೇ ಬಾರಿಗೆ ಸರ್ಜರಿ ಮಾಡಲಾಗಿದ್ದು, ಸದ್ಯ ದಿಗಂತ್‌ ಕಣ್ಣು ನೋವಿನಿಂದ ಸುಧಾರಿಸಿಕೊಳ್ಳುತ್ತಿದ್ದಾರೆ. ಅವರ ಕಣ್ಣಿಗೆ ಗಾಯವಾದ್ದರಿಂದ ಚಿತ್ರೀಕರಣದ ವೇಳೆಯೂ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅದರಲ್ಲೂ ಪ್ರಖರವಾದ ಬೆಳಕು ಕಣ್ಣಿಗೆ ಬಿದ್ದರೆ ಸಹಿಸಿಕೊಳ್ಳುವುದು ದಿಗಂತ್‌ಗೆ ಕಷ್ಟವಾಗುತ್ತಿತ್ತಂತೆ. “ಶೂಟಿಂಗ್‌ ವೇಳೆ ಆದ ಗಾಯವಿದು. ಮೂರನೇ ಸರ್ಜರಿ ಆಗಿದೆ. ಈಗ ನಿಧಾನವಾಗಿ ಗುಣವಾಗುತ್ತಿದೆ. ಶೂಟಿಂಗ್‌ನಲ್ಲಿ ಬಳಸುವ ಲೈಟ್ಸ್‌ ನೋಡೋದು ಕೂಡಾ ಕಷ್ಟವಾಗುತಿತ್ತು’ ಎನ್ನುವುದು ದಿಗಂತ್‌ ಮಾತು.

ಸದ್ಯ ದಿಗಂತ್‌ ನಟಿಸಿರುವ “ಚೌಕ’ ಚಿತ್ರ ಕೊನೆಯ ಹಂತದಲ್ಲಿದೆ. ಅದು ಬಿಟ್ಟರೆ ಸೌಂದರ್ಯ ಜಗದೀಶ್‌ ನಿರ್ಮಾಣದ
ಚಿತ್ರವನ್ನು ದಿಗಂತ್‌ ಒಪ್ಪಿಕೊಂಡಿದ್ದಾರೆ. ಈ ಚಿತ್ರವನ್ನು ಪ್ರತಾಪ್‌ ನಿರ್ದೇಶಿಸುತ್ತಿದ್ದಾರೆ. ಯಾವ ಪ್ರತಾಪ್‌ ಎಂದರೆ ಈ ಹಿಂದೆ ಚಿರಂಜೀವಿ ಸರ್ಜಾ ಅವರ “ರಾಮ್‌ -ಲೀಲಾ’ ಚಿತ್ರವನ್ನು ನಿರ್ದೇಶಿಸಿದ ಪ್ರತಾಪ್‌ ಎನ್ನಬೇಕು. ಸದ್ಯ ಚಿತ್ರಕ್ಕೆ “ಎಲ್ಲಾ ಓಕೆ ಮದುವೆ ಯಾಕೆ’ ಎಂಬ ಟೈಟಲ್‌ ಇಡಲಾಗಿದೆ ಎಂಬ ಸುದ್ದಿ ಇದೆ.

ಅಂದಹಾಗೆ, ಸೌಂದರ್ಯ ಜಗದೀಶ್‌ ನಿರ್ಮಾಣದ “ಮಸ್ತ್ ಮಜಾ ಮಾಡಿ’ ಚಿತ್ರದಲ್ಲೂ ದಿಗಂತ್‌ ನಟಿಸಿದ್ದರು. ಈಗ ಮತ್ತೂಮ್ಮೆ ಅವರ ಬ್ಯಾನರ್‌ನಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ಚಿತ್ರದ ತಾಂತ್ರಿಕ ಹಾಗೂ ಇತರ ತಾರಾಬಳಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.
-ಉದಯವಾಣಿ

Comments are closed.