ಮನೋರಂಜನೆ

ಪುತ್ರನ ಕ್ಯಾನ್ಸರ್‌ ಕಾಯಿಲೆಗೆ ನಾನೇ ದೋಷಿ ಎಂದು ಭಾವಿಸಿದ್ದೆ: ಇಮ್ರಾನ್ ಹಶ್ಮಿ

Pinterest LinkedIn Tumblr

hashmiಮುಂಬೈ: ಬಾಲಿವುಡ್ ನಟ ಇಮ್ರಾನ್ ಹಶ್ಮಿ ತನ್ನ ಮಗನ ಕುರಿತಾಗಿ ಶೇರ್ ಮಾಡಿಕೊಂಡಿದ್ದಾರೆ. ಜೀವನದ ಒಂದು ಹಂತದಲ್ಲಿ ಮಗನ ಕ್ಯಾನ್ಸರ್ ಕಾಯಿಲೆಗೆ ನನ್ನ ಪತ್ನಿ ಹಾಗೂ ನಾನು ಕಾರಣ ಎಂದು ಭಾವಿಸಿದ್ದೇವು ಎಂದು ಹೇಳಿದ್ದಾರೆ. ನಮ್ಮಿದ್ದ ತಪ್ಪಾದ್ರು ಆಗಿದ್ದೇನು? ಎಂದು ಪ್ರಶ್ನೆ ಮಾಡಿಕೊಂಡಿದ್ದೇವು ಎಂದ ಇಮ್ರಾನ್ ಹಶ್ಮಿ ತಮ್ಮ ಕ್ಲಿಷ್ಟ ಪರಿಸ್ಥಿತಿಯ ಬಗ್ಗೆ ನೆನಪಿಸಿಕೊಂಡಿದ್ದಾರೆ.

2010ರಲ್ಲಿ ಜನಿಸಿದ್ದ ಆಯಾನ್ 2014ರಲ್ಲಿ ಶುರುವಾದ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಕೊಡಿಸಿದ್ದೇವು. ನಮಗೆ ಈ ಕಾಯಿಲೆ ಬಗ್ಗೆ ತಿಳಿಯಲಿಲ್ಲ. ಶಾರಿರೀಕವಾಗಿ ಯಾವುದೇ ಲಕ್ಷಣಗಳು ಕಾಣಿಸುತ್ತಿರಲಿಲ್ಲ ಎಂದು ಇಮ್ರಾನ್ ಹಶ್ಮಿ ತಿಳಿಸಿದ್ದಾರೆ.

ಕ್ಯಾನ್ಸರ್ ನಿಂದ ಬಳಲುತ್ತಿರುವ ಅಯಾನ್ ‌ಹೆಸರಲ್ಲಿ ಇಮ್ರಾನ್ ಹಶ್ಮಿ ಪುಸ್ತಕದ ಶೀರ್ಷಿಕೆ ‘ಕಿಸ್ ಆಫ್ ಲೈಫ್ ‘ ಎಂಬ ಪುಸ್ತಕವನ್ನು ಹೊರತಂದಿದ್ದಾರೆ.

6 ವರ್ಷದ ಅಯಾನ್‌ಗೆ ಸೂಪರ್ ಹಿರೋ ಎಂದು ಹೆಸರಿಟ್ಟಿದ್ದಾರೆ. ಇಮ್ರಾನ್ ಹಶ್ಮಿ,ಇನ್ನೂ ಪುಸ್ತಕದಲ್ಲಿ ಒಟ್ಟು 29 ಚಿತ್ರಗಳನ್ನು ಒಳಗೊಂಡಿದೆ. ಮುಖ್ಯವಾಗಿ ಇಮ್ರಾನ್ ಹೊರತರಲಿರುವ ಪುಸ್ತಕವು ಇಮ್ರಾನ್ ಹಾಗೂ ಅವರ ಕ್ಲಿಷ್ಟ ಪರಿಸ್ಥಿತಿಯನ್ನು ನೆನಪಿಸುತ್ತದೆ ಎಂದು ಹೇಳಲಾಗಿದೆ.

Comments are closed.