ರಾಷ್ಟ್ರೀಯ

ಸ್ಮೃತಿ ಇರಾನಿ ಮುಗ್ಧ ಮಹಿಳೆ: ಲಾಲು

Pinterest LinkedIn Tumblr

smruಪಾಟ್ಣಾ: ಮಹತ್ವದ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯನ್ನು ಕಳೆದುಕೊಂಡು ಜವಳಿ ಖಾತೆಗೆ ವರ್ಗಾವಣೆಯಾಗಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪರ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಬ್ಯಾಟ್ ಬೀಸಿದ್ದಾರೆ. ಸ್ಮೃತಿ ಇರಾನಿ ಅವರು ಮುಗ್ಧ ಮಹಿಳೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಕೆಲವು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಆದರೆ ಜವಳಿ ಖಾತೆಯಲ್ಲಿ ಅವರಿಗೆ ಭವಿಷ್ಯವಿಲ್ಲವೆಂದಿದ್ದಾರೆ.

ಈ ಸಚಿವಾಲಯ ಮುಳುಗಿ ಹೋಗಿಯಾಗಿದೆ ಎಂದು ಜವಳಿ ಖಾತೆಯನ್ನು ಉಲ್ಲೇಖಿಸಿ ಅವರು ಹೇಳಿದ್ದಾರೆ.

ಅನೇಕ ವಿವಾದಗಳಲ್ಲಿ ಸಿಲುಕಿದ್ದ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಈ ವಾರದ ಆರಂಭದಲ್ಲಿ ನಡೆದ ಸಚಿವ ಸಂಪುಟ ಪುನಾರಚನೆಯಲ್ಲಿ ಆ ಸ್ಥಾನವನ್ನು ಕಳೆದುಕೊಂಡಿದ್ದರು. ಈಗ ಅವರಿಗೆ ಅಷ್ಟೇನೂ ಮಹತ್ವವಲ್ಲದ ಜವಳಿ ಖಾತೆಯನ್ನು ನೀಡಲಾಗಿದೆ.

Comments are closed.