ಮನೋರಂಜನೆ

ಪಟಾಕಿ ಚಿತ್ರದಲ್ಲಿ ಮಂಗಳಮುಖಿಯಾಗಿ ಸಾಧು ಕೋಕಿಲ

Pinterest LinkedIn Tumblr

Sadhu-Kokilaಸ್ಯಾಂಡಲ್ವುಡ್ ನ ಬಹುಬೇಡಿಕೆಯ ಹಾಸ್ಯ ನಟ ಸಾಧು ಕೋಕಿಲ ಅವರು ಪಟಾಕಿ ಚಿತ್ರದಲ್ಲಿ ಮಂಗಳಮುಖಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ತೆಲುಗಿನ ಸೂಪರ್ ಹಿಟ್ ಪಟಾಕಿ ಚಿತ್ರದ ರಿಮೇಕ್ ಆಗಿರುವ ಕನ್ನಡದ ಪಟಾಕಿ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ಅಭಿನಯಿಸುತ್ತಿದ್ದು, ಸಾಧು ಮಂಗಳಮುಖಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ನಿರ್ದೇಶಕ ಮಂಜು ಸ್ವರಾಜ್ ಹೇಳಿದ್ದಾರೆ.
ಮೂಲ ಪಟಾಕಿ ಚಿತ್ರದಲ್ಲಿ ಮಂಗಳಮುಖಿ ಪಾತ್ರವನ್ನು ಹಾಸ್ಯಕ್ಕಾಗಿ ಬಳಸಿಕೊಳ್ಳಲಾಗಿದೆ. ಆದರೆ ಕನ್ನಡದ ಪಟಾಕಿ ಚಿತ್ರಕ್ಕೆ ಮಂಗಳಮುಖಿ ಪಾತ್ರ ಮೇಜರ್ ಟರ್ನಿಂಗ್ ಪಾಯಿಂಟ್ ಆಗಿರುತ್ತದೆ. ಇಲ್ಲಿ ಮಂಗಳಮುಖಿ ಪಾತ್ರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಸಮಾಜದಲ್ಲಿ ಮಂಗಳಮುಖಿಯರಿಗೆ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ತೋರಿಸಲಾಗುವುದು ಎಂದು ನಿರ್ದೇಶಕರು ಹೇಳಿದ್ದಾರೆ.
ಜೂಮ್ ಚಿತ್ರದಲ್ಲಿ ಗಣೇಶ್ ಮತ್ತು ಸಾಧು ಕೋಕಿಲ ಜೋಡಿ ಕಮಾಲ್ ಮಾಡಿದೆ. ಇದೇ ಜೋಡಿ ಪಟಾಕಿ ಚಿತ್ರದಲ್ಲಿ ಒಂದಾಗುತ್ತಿದ್ದು, ಈ ಜೋಡಿ ಕಮಾಲ್ ಮಾಡುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ಚಿತ್ರವನ್ನು ಎಸ್ವಿ ಬಾಬು ನಿರ್ಮಿಸುತ್ತಿದ್ದಾರೆ.

Comments are closed.