ಬೆಂಗಳೂರು: ಕಳೆದ ಎರಡು ವರ್ಷಗಳ ನಂತರ ಚಿನ್ನದ ದರ ಜು.6 ರಂದು ಏರಿಕೆಯಾಗಿದ್ದು, ಯುರೋಪಿಯನ್ ಒಕ್ಕೂಟವನ್ನು ತೊರೆಯಲು ಬ್ರಿಟನ್ ಕೈಗೊಂಡ ನಿರ್ಧಾರದ ಪರಿಣಾಮವಾಗಿ ಭಾರಿ ಕುಸಿತ ಕಂಡಿದ್ದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಹೂಡಿಕೆ ರಕ್ಷಣಾತ್ಮಕ ನಡೆಯಾಗಿದೆ.
ಹೂಡಿಕೆದಾರರು ಚಿನ್ನದ ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿದ್ದು ಚಿನ್ನದ ದರ ಕಳೆದ ಎರಡು ವರ್ಷಗಳಲ್ಲೇ ಹೆಚ್ಚು ಏರಿಕೆ ಕಂಡಿದೆ. ಮಾರ್ಚ್ 2014 ರ ನಂತರ ಸ್ಪಾಟ್ ಚಿನ್ನದ ದರ ಶೇ.05 ರಷ್ಟು ಏರಿಕೆಯಾಗಿದ್ದು, $1,364.80 ರಷ್ಟಿದ್ದ ಚಿನ್ನದ ಧಾರಣೆ ಈಗ $1,362.61 ನಷ್ಟಾಗಿದೆ. ಬ್ರೆಕ್ಸಿಟ್ ತೀರ್ಪಿನ ಬೆನ್ನಲ್ಲೇ ಜೂ.24 ರಂದು ಏರಿಕೆಯಾಗಿದ್ದ ದಾಖಲೆಯನ್ನು ಈ ಬಾರಿಯ ಚಿನ್ನದ ದರ ಏರಿಕೆ ಸರಿಗಟ್ಟಿದೆ.
ಇನ್ನು ಯುಎಸ್ ಚಿನ್ನದ ದರದಲ್ಲೂ ಏರಿಕೆಯಾಗಿದ್ದು $1,365.30 ನಷ್ಟಾಗಿದ್ದರೆ ಬೆಳ್ಳಿಯ ದರ ಶೇ.1.2 ರಷ್ಟು ಏರಿಕೆಯಾಗಿದ್ದು 20.15 ಡಾಲರ್ ಬೆಲೆ ಇದೆ. ಬ್ರೆಕ್ಸಿಟ್ ತೀರ್ಪಿನ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆ ಕುಸಿತ ಕಂಡಿತ್ತು. ಆದರೆ ವಿಶ್ವದ ಅತಿ ದೊಡ್ಡ ಚಿನ್ನ ಆಧಾರಿತ ವಿನಿಮಯ, ವಹಿವಾಟು ನಿಧಿ ಎಸ್ ಪಿಡಿಆರ್ ಚಿನ್ನ ಟ್ರಸ್ಟ್ ಜಿಎಲ್ ಡಿ ನಲ್ಲಿ ಚಿನ್ನದ ಪ್ರಮಾಣ ಜು.2013 ರಿಂದ ಮೊದಲ ಬಾರಿಗೆ ಶೇ.3.02 ಕ್ಕೆ ಏರಿಕೆಯಾಗಿದ್ದು 982.72 ಟನ್ ನಷ್ಟಾಗಿದೆ. ಯುರೋಪಿಯನ್ ಒಕ್ಕೂಟ ತೊರೆಯಲು ಬ್ರಿಟನ್ ನಿರ್ಧಾರ ಕೈಗೊಂಡಿದ್ದು ಅಮೆರಿಕ ಮೇಲೆ ಪರಿಣಾಮ ಬೀರಿದ್ದು, ಅಮೆರಿಕದ ಕೇಂದ್ರೀಯ ಬ್ಯಾಂಕ್ ಆದ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಏರಿಕೆ ಮಾಡುವುದಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
Comments are closed.