ಮನೋರಂಜನೆ

ಆಸ್ಕರ್ ಪಿಸ್ಟೋರಿಯಸ್‌ಗೆ ಆರು ವರ್ಷ ಶಿಕ್ಷೆ

Pinterest LinkedIn Tumblr

Oscroooorಪ್ರಿಟೊರಿಯಾ (ಎಎಫ್‌ಪಿ): ಪ್ರೇಯಸಿ ರೀವಾ ಸ್ಟೀನ್‌ಕೆಂಪ್ ಅವರನ್ನು ಕೊಲೆ ಮಾಡಿದ ಅಪರಾಧಿ, ದಕ್ಷಿಣ ಆಫ್ರಿಕಾದ ಪ್ಯಾರಾ ಅಥ್ಲೀಟ್‌ ಆಸ್ಕರ್ ಪಿಸ್ಟೋರಿಯಸ್ ಜೈಲು ಶಿಕ್ಷೆಯ ಅವಧಿಯನ್ನು ಆರು ವರ್ಷಕ್ಕೆ ಹೆಚ್ಚಿಸಿ ಪ್ರಿಟೊರಿಯಾ ಹೈಕೋರ್ಟ್‌ ಬುಧವಾರ ಆದೇಶಿಸಿದೆ.

ಐದು ವರ್ಷಗಳ ಶಿಕ್ಷೆಗೆ ಗುರಿಯಾಗಿ, ಒಂದು ವರ್ಷ ಜೈಲಿನಲ್ಲಿ ಕಳೆದಿದ್ದ ಪಿಸ್ಟೋರಿಯಸ್‌ ಕಳೆದ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿದ್ದರು. ಹೈಕೋರ್ಟ್‌ ಬುಧವಾರ ಅವರ ಶಿಕ್ಷೆಯನ್ನು ಆರು ವರ್ಷಕ್ಕೆ ಹೆಚ್ಚಿಸಿ ಆದೇಶ ನೀಡಿದೆ.

ದಕ್ಷಿಣ ಆಫ್ರಿಕಾದ ಕಾನೂನಿನಂತೆ ಕೊಲೆ ಅಪರಾಧಕ್ಕೆ ಕನಿಷ್ಠ 15 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆದರೆ, ಪಿಸ್ಟೋರಿಯಸ್‌ ಅವರ ಅಂಗವೈಕಲ್ಯ ಹಾಗೂ ಅವರು ಜೈಲಿನಲ್ಲಿ ಒಂದು ವರ್ಷ ಕಳೆದಿರುವುದನ್ನು ಪರಿಗಣಿಸಿರುವ ನ್ಯಾಯಾಮೂರ್ತಿಗಳು ಶಿಕ್ಷೆಯ ಪ್ರಮಾಣವನ್ನು ಆರು ವರ್ಷಕ್ಕೆ ಹೆಚ್ಚಿಸಿದ್ದಾರೆ.

‘ಜನರ ಅಭಿಪ್ರಾಯ ಪಿಸ್ಟೋರಿಯಸ್‌ ಪರವಿರಬಹುದು. ಆದರೆ, ಜನಾಭಿಪ್ರಾಯ ಎಷ್ಟೇ ದೊಡ್ಡಮಟ್ಟದ್ದಾಗಿದ್ದರೂ ಅದನ್ನು ನ್ಯಾಯಾಲಯ ಪರಿಗಣಿಸಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿ ಥೊಕೊಜಿಲ್‌ ಮಸಿಪ ಹೇಳಿದ್ದಾರೆ.

ನ್ಯಾಯಾಲಯದ ಹೊರಗೆ ನೆರೆದಿದ್ದ ಅಭಿಮಾನಿಗಳು, ‘ದಯವಿಟ್ಟು ಪಿಸ್ಟೋರಿಯಸ್‌ಗೆ ಸ್ವಾತಂತ್ರ್ಯ ಕೊಡಿ’ ಎಂಬ ಬರಹವಿರುವ ಬೋರ್ಡ್‌ಗಳನ್ನು ಹಿಡಿದಿದ್ದರು.

2013ರ ಫೆಬ್ರುವರಿ 24 ರಂದು ರೀವಾ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ಪಿಸ್ಟೋರಿಯಸ್‌ ಅಪರಾಧಿ ಎಂದು 2014ರಲ್ಲಿ ಹೈಕೋರ್ಟ್‌ ಘೋಷಿಸಿತ್ತು.

Comments are closed.