ಮನೋರಂಜನೆ

ಮೆಸ್ಸಿಗೆ 21 ತಿಂಗಳ ಜೈಲು ಶಿಕ್ಷೆ

Pinterest LinkedIn Tumblr

Messsiಮಾಡ್ರಿಡ್‌ (ಎಪಿ): ತೆರಿಗೆ ವಂಚನೆ ಪ್ರಕರಣದಲ್ಲಿ ಅಪರಾಧಿಗಳೆಂದು ಸಾಬೀತಾಗಿರುವ ಬಾರ್ಸಿಲೊನಾ ಫುಟ್‌ಬಾಲ್‌ ಆಟಗಾರ ಲಿಯೊನೆಲ್‌ ಮೆಸ್ಸಿ ಮತ್ತು ಅವರ ತಂದೆ ಜಾರ್ಜ್‌ ಅವರಿಗೆ ಇಲ್ಲಿನ ನ್ಯಾಯಾಲಯ 21 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಸ್ಪ್ಯಾನಿಷ್‌ ಕಾನೂನಿನ ಪ್ರಕಾರ ಎರಡು ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆಗೆ ಗುರಿಯಾದವರು ಜೈಲು ಸೇರುವುದು ಕಡ್ಡಾಯವಲ್ಲ. ಹೀಗಾಗಿ ಮೆಸ್ಸಿ ಮತ್ತು ಜಾರ್ಜ್‌ ಕಾರಾಗೃಹ ವಾಸದಿಂದ ಪಾರಾಗುವ ಅವಕಾಶವಿದೆ.

ನ್ಯಾಯಾಲಯವು ಮೆಸ್ಸಿಗೆ ಎರಡು ಮಿಲಿಯನ್‌ ಯೂರೊ ಮತ್ತು ಅವರ ತಂದೆಗೆ 1.5 ಮಿಲಿಯನ್‌ ಯೂರೊ ದಂಡ ವಿಧಿಸಿದೆ.

Comments are closed.