ಅಂತರಾಷ್ಟ್ರೀಯ

ಸುಂದರ ಯುವತಿಯರು ಮಾರಾಟಕ್ಕಿದ್ದಾರೆ?

Pinterest LinkedIn Tumblr

suಕಾಂಕೇ (ಎಪಿ/ಇರಾಕ್‌): 20ರ ಹರೆಯದ ಸುಂದರ ಕನ್ಯೆಯರು ಮಾರಾಟಕ್ಕಿದ್ದಾರೆ ಎಂದು ಐಎಸ್‌ ಉಗ್ರರು ಸಾಮಾಜಿಕ ಜಾಲತಾಣಗಳಲ್ಲಿ ಜಾಹಿರಾತು ಪ್ರಕಟಿಸಿದ್ದಾರೆ.

ವಾಟ್ಸ್‌ಅಪ್‌ ಮತ್ತು ಟೆಲಿಗ್ರಾಂ ಆ್ಯಪ್‌ ನಲ್ಲಿ ಸುಂದರ ಯುವತಿಯರ ಚಿತ್ರಗಳನ್ನು ಅಪ್‌ಲೋಡ್‌ ಮಾಡಿದ್ದಾರೆ.

ಉಗ್ರರು ಪ್ರಕಟಿಸಿರುವ ಈ ಜಾಹಿರಾತು ಅರೆಬಿಕ್‌ ಭಾಷೆಯಲ್ಲಿದೆ. ವರ್ಗೀಕೃತ ಜಾಹಿರಾತು ನೀಡುವ ಸ್ಥಳದಲ್ಲಿ ಇದನ್ನು ಪ್ರಕಟಿಸಿದ್ದಾರೆ.
ಸಿರಿಯಾದಲ್ಲಿರುವ ಅಲ್ಪಸಂಖ್ಯಾತ ಯಾಜಿದಿ ಸಮುದಾಯದ ಸುಮಾರು 3 ಸಾವಿರಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳನ್ನು ಐಎಸ್‌ ಉಗ್ರರು ಒತ್ತೆಯಾಗಿರಿಸಿಕೊಂಡಿದ್ದಾರೆ.

ಹದಿಹರೆಯದ ಯುವತಿಯರನ್ನು ಲೈಂಗಿಕ ಗುಲಾಮರನ್ನಾಗಿ ಮಾಡಿಕೊಂಡಿದ್ದಾರೆ. ಇದೀಗ ಹಣಕ್ಕಾಗಿ ಈ ಸುಂದರ ಯುವತಿಯರನ್ನು ಮಾರಾಟ ಮಾಡಲು ಉಗ್ರರು ಮುಂದಾಗಿದ್ದಾರೆ.

Comments are closed.