ಮನೋರಂಜನೆ

Samsung Galaxy Note 7 ಚಿತ್ರಗಳು

Pinterest LinkedIn Tumblr

Samsung-Galaxy-Note-7-Press-Renders-788x1024
ಸ್ಯಾಮ್ ಸಂಗ್ ನ ಹೊಸ ಫೋನ್ ಮಾದರಿಯಾದ ಗ್ಯಾಲಕ್ಸೀ ನೋಟ್ 7 ನ ಸೋರಿಕೆಯಾದ ಚಿತ್ರಗಳು ಮಾಧ್ಯಮಗಳಿಗೆ ಲಭ್ಯವಾಗಿವೆ. ಈ ಚಿತ್ರಗಳ ಪ್ರಕಾರ ನೋಟ್ 7 ಮೂರು ಬಣ್ಣಗಳ ಆವ್ರತಿಯಲ್ಲಿ ಮೊದಲಿಗೆ ಲಭ್ಯವಾಗಲಿದೆ. ಇವುಗಳೆಂದರೆ “Black Onyx”, “Silver Titanium” ಮತ್ತು “Blue Coral”. ಮುಂದೆ ಇನ್ನೂ ಹೆಚ್ಚಿನ ಬಣ್ಣಗಳ ಆವ್ರತಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಈ ಫೋನಿನ ಹಿಂದಿನ ಪ್ಯಾನಲ್ನ ಮೇಲೆ “Galaxy Note 7″ಯೆಂಬ ಬ್ರಾಂಡಿಗನ್ನು ಬಿಂಬಿಸಲಾಗಿದೆ. ಇದರ ಮುಂಬಾಗದಲ್ಲಿ ಉಭಯ ವಕ್ರ ಅಂಚುಗಳು (Dual Curved Edges) ಮತ್ತು ಹಿಂಬಾಗದಲ್ಲಿ ಸ್ವಲ್ಪ ವಕ್ರ ಅಂಚುಗಳನ್ನು ಕಾಣಬಹುದಾಗಿದೆ. ನೋಟ್ ಮಾದರಿಯ ವಿಶೇಷತೆಯಾದ ಸ್ಟೈಲಸ್ (Stylus)ನ್ನು ಕೂಡಾ ಕಾಣಬಹುದಾಗಿದೆ.

ಈ ಹಿಂದೆ ಸೋರಿಕೆಯಾದ ವರದಿಗಳ ಪ್ರಕಾರ ಸ್ಯಾಮ್‌ಸಂಗ್ ಗ್ಯಾಲಕ್ಸೀ ನೋಟ್ 7- 5.7 ಇಂಚಿನ QHD Super AMOLED ಡಿಸ್‌ಪ್ಲೇ, 64GB ಇಂಟರ್ನಲ್ ಸ್ಟೋರೇಜ್, ಮೈಕ್ರೋ SD ಕಾರ್ಡ್ನ್ನು ಬಳಸಿ ಶೇಕರಣೆ ವಿಸ್ತರಣಾ ಸಾಮರ್ಥ್ಯ ಮತ್ತು 12MP ಮೈನ್ ಕ್ಯಾಮರವನ್ನು ಹೊಂದಿರುವುದಾಗಿ ತಿಳಿಸಲಾಗಿದೆ. ಇದರ ಮಾರುಕಟ್ಟೆ ಬೆಲೆಯ ಬಗ್ಗೆ ಸಧ್ಯಕ್ಕೆ ಯಾವ ಮಾಹಿತಿಯು ಲಭ್ಯವಾಗಿಲ್ಲ. ಆದರೆ ಇದೊಂದು ಈ ವರೆಗಿನ ಆಂಡ್ರಾಯ್ಡ್ ನೋಟ್ ಮಾದರಿಗಳಿಗಿಂತ ದುಬಾರಿಯಾಗಬಹುದೆಂದು ಊಹಿಸಲಾಗುತ್ತಿದೆ.

ಈ ಫೋನ್ ಮಾರುಕಟ್ಟೆಗೆ ಆಗಸ್ಟ್ 2ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

He is a Software Engineer from Moodbidri currently living in Kuwait. He likes to travel and post interesting things about technology. He is the designer of Kannadigaworld.com. You may follow him on FB at fb.com/alanpaladka

Comments are closed.