ನವದೆಹಲಿ: ಭಾರತಕ್ಕೆ ಎಂಟ್ರಿ ಕೊಡಲಿರುವ ಫುಟ್ಸಾಲ್ ಲೀಗ್ ಒಳಾಂಗಣ ಕ್ರೀಡೆಯ ಥೀಮ್ ಸಾಂಗ್ಗೆ ಸಂಗೀತ ನಿರ್ದೇಶನ ಮಾಡಿರುವ ಆಸ್ಕರ್ ಪ್ರಶಸ್ತಿ ಪುರಸ್ಕೃತ ಎ. ಆರ್. ರಹಮಾನ್ ಸಂಗೀತಕ್ಕೆ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಡು ಹೇಳಿ ನರ್ತಿಸಿದ್ದಾರೆ.
‘ನಾಮ್ ಹೈ ಫುಟ್ಸಾಲ್’ ಎಂಬ ಗೀತೆಯನ್ನು ಸಿದ್ಧಪಡಿಸಿರುವ ರಹಮಾನ್ ಗೀತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಎಂಟು ಪ್ರಾಯೋಜಕತ್ವ ಹೊಂದಿರುವ ತಂಡಗಳು ದೆಹಲಿ, ಚೆನ್ನೈ, ಗೋವಾ, ಹೈದರಾಬಾದ್, ಕೋಲ್ಕತಾ, ಮುಂಬೈ, ಬೆಂಗಳೂರು ತಂಡಗಳು ಫುಟ್ಸಾಲ್ ಲೀಗ್ನ ಪ್ರಥಮ ಆವೃತ್ತಿಯಲ್ಲಿ ಜುಲೈ 15 ರಿಂದ ಪ್ರಶಸ್ತಿಗಾಗಿ ಸೆಣೆಸಲಿವೆ.
ಫುಟ್ಬಾಲ್ನ ಚುಟುಕು ಮಾದರಿಯಾದ ಫುಟ್ಸಾಲ್ ಲೀಗ್ ಯೂರೋಪ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಜನಪ್ರಿಯ ಕ್ರೀಡೆಯಾಗಿದೆ. ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳಿಗೆ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಆಗಲಿ ಅಥವಾ ಏಷಿಯನ್ ಫುಟ್ಬಾಲ್ ಫೆಡರೇಷನ್ಗಳಿಂದ ಭಾರತದಲ್ಲಿ ಪಂದ್ಯಗಳಿಗೆ ಅನುಮತಿ ದೊರೆತಿಲ್ಲ. ಘಟಾನುಘಟಿ ಆಟಗಾರರು ಭಾಗವಹಿಸಲಿರುವ ಟೂರ್ನಿಗೆ ಥೀಮ್ ಸಾಂಗ್ ಪುಷ್ಟಿ ನೀಡುವುದರಲ್ಲಿ ಅನುಮಾನವಿಲ್ಲ.
Comments are closed.