ರಾಷ್ಟ್ರೀಯ

14 ಸಾವಿರ ಪೊಲೀಸ್​ಪೇದೆ ಹುದ್ದೆಗೆ 9 ಲಕ್ಷ ಅರ್ಜಿ!

Pinterest LinkedIn Tumblr

bhupal-web-New-ಭೋಪಾಲ್: ನಿಗದಿತ ಹುದ್ದೆ ಸಂಖ್ಯೆ ಇರುವುದು 14,000. ಇದಕ್ಕಾಗಿ ಅರ್ಜಿ ಸಲ್ಲಿಸಿದವರು ಬರೋಬ್ಬರಿ 9 ಲಕ್ಷ ಅಭ್ಯರ್ಥಿಗಳು. ಇದರಲ್ಲಿ 14,562 ಮಂದಿ ಸ್ನಾತಕೋತ್ತರ ಪದವೀಧರರು, 9629 ಎಂಜಿನಿಯರಿಂಗ್ ಪದವೀಧರು, 2438 ಡಿಪ್ಲೊಮಾ ಪಾಸ್ ಮಾಡಿದವರು, 12 ಮಂದಿ ಡಾಕ್ಟರೇಟ್ (ಪಿಎಚ್ಡಿ)ಪಡೆದವರೂ ಇದ್ದಾರೆ.

ಅಪೇಕ್ಷಿತ ಹುದ್ದೆ ಬಹಳ ದೊಡ್ಡದಿರಬಹುದು ಎಂದು ನೀವು ಊಹಿಸಿದರೆ ಅದು ತಪ್ಪು. ಕುತೂಹಲ ಹೆಚ್ಚಾಯಿತೇ? ಇದು ಪೊಲೀಸ್ ಪೇದೆ ಹುದ್ದೆ. ಮಧ್ಯಪ್ರದೇಶ ಸರ್ಕಾರದ ವೃತ್ತಿಪರ ಪರೀಕ್ಷಾ ಮಂಡಳಿ (ಎಂಪಿಪಿಇಬಿ) ಜುಲೈ 17 ರಂದು ಈ ಹುದ್ದೆಗೆ ಪರೀಕ್ಷೆ ನಿಗದಿಪಡಿಸಿದೆ.

ಸರ್ಕಾರ ಇದಕ್ಕಾಗಿ ನಿಗದಿ ಮಾಡಿರುವ ಕನಿಷ್ಠ ವಿದ್ಯಾರ್ಹತೆ ಎಸ್ಎಸ್ಎಲ್ಸಿ. ಪರಿಶಿಷ್ಟ ಜಾತಿ, ಪಂಗಡಕ್ಕೆ 7ನೇ ತರಗತಿ ಉತ್ತೀರ್ಣ ಮಾತ್ರ. ಈ ವಿಭಾಗದಲ್ಲೂ ಬಹುತೇಕ ಪದವೀಧರರೇ (2.58 ಲಕ್ಷ ಅಭ್ಯರ್ಥಿಗಳು) ಕೆಲಸ ಅಪೇಕ್ಷಿತರು. ಸಣ್ಣ ಹುದ್ದೆಗೆ ಅರ್ಜಿ ಗುಜರಾಯಿಸಿದವರ ಸಂಖ್ಯೆ ಮತ್ತವರ ವಿದ್ಯಾರ್ಹತೆ ನೋಡಿ ಸ್ವತಃ ಪರೀಕ್ಷಾ ಮಂಡಳಿ ಅಧಿಕಾರಿಗಳಿಗೇ ದಂಗಾಗಿದೆಯಂತೆ.

Comments are closed.