ಮನೋರಂಜನೆ

ಅನಿಲ್‌ ಕುಂಬ್ಳೆ ಟೀಂ ಇಂಡಿಯಾ ಮುಖ್ಯ ಕೋಚ್‌

Pinterest LinkedIn Tumblr

kumಧರ್ಮಶಾಲಾ(ಪಿಟಿಐ): ಕ್ರಿಕೆಟ್‌ನ ಸ್ಪಿನ್‌ ಮಾಂತ್ರಿಕ ಅನಿಲ್‌ ಕುಂಬ್ಳೆ ಅವರನ್ನು ಟೀಂ ಇಂಡಿಯಾದ ಮುಖ್ಯ ಕೋಚ್‌ ಆಗಿ ಬಿಸಿಸಿಐ ಆಯ್ಕೆ ಮಾಡಿದೆ.

ಇಲ್ಲಿ ನಡೆದ ಬಿಸಿಸಿಐನ ಉನ್ನತಮಟ್ಟದ ಆಯ್ಕೆ ಸಭೆಯ ಬಳಿಕ ಅಧ್ಯಕ್ಷ ಅನುರಾಗ್‌ ಠಾಕೂರ್‌ ಅವರು, ಅನಿಲ್‌ ಕುಂಬ್ಳೆ ಅವರನ್ನು ಟೀಂ ಇಂಡಿಯಾದ ಮುಖ್ಯ ಕೋಚ್‌ ಆಗಿ ಮುಂದಿನ ಒಂದು ವರ್ಷದ ಅವದಿಗೆ ಆಯ್ಕೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನೂತನ ಕೋಚ್‌ ಆಯ್ಕೆಗೆ ಸಚಿನ್‌ ತೆಂಡೂಲ್ಕರ್‌, ಸೌರವ್‌ ಗಂಗೂಲಿ ಮತ್ತು ವಿವಿಎಸ್‌ ಲಕ್ಷ್ಮಣ್‌ ಅವರಿದ್ದ ಸಲಹಾ ಸಮಿತಿ ಮಂಗಳವಾರ ಸಂದರ್ಶನ ನಡೆಸಿತ್ತು. ಕ್ರಿಕೆಟಿಗ ಅನಿಲ್‌ ಕುಂಬ್ಳೆ, ಪ್ರವೀಣ್‌ ಆಮ್ರೆ, ರವಿ ಶಾಸ್ತ್ರಿ, ಲಾಲ್‌ಚಂದ್‌ ರಜಪೂತ್‌ ಸೇರಿದಂತೆ 21 ಮಂದಿ ಸಂದರ್ಶನಕ್ಕೆ ಹಾಜರಾಗಿದ್ದರು.

Comments are closed.