ಮನೋರಂಜನೆ

2-1 ಅಂತರದಿಂದ ಟಿ 20 ಸರಣಿ ಗೆದ್ದ ಟೀಂ ಇಂಡಿಯಾ

Pinterest LinkedIn Tumblr

winಹರಾರೆ: ಭಾರತ ತಂಡವು ಜಿಂಬಾಬ್ವೆ ವಿರುದ್ಧ 3ನೇ ಹಾಗೂ ಕೊನೆಯ ಟಿ 20 ಪಂದ್ಯದಲ್ಲಿ 3 ರನ್ಗಳ ರೋಚಕ ಗೆಲುವು ಸಾಧಿಸುವುದರೊಂದಿಗೆ ಟಿ 20 ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಮೊದಲಿಗೆ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಭಾರತ ನಿಗದಿತ 20 ಓವರುಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 138ರನ್ನುಗಳನ್ನು ಗಳಿಸಿತು.

ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ ಜಿಂಬಾಬ್ವೆ ತಂಡ ಸಿಬಾಂಡ (28) , ಪೀಟರ್‌ ಮೂರ್‌ (26) ವಿಕೆಟ್‌ ಉರುಳುವುದರೊಂದಿಗೆ ಆಟದ ವೇಗ ಕುಂಟಿತಗೊಂಡಿತು.

ಜಿಂಬಾಬ್ವೆ ಅಂತಿಮವಾಗಿ 6 ವಿಕೆಟ್‌ ಕಳೆದುಕೊಂಡು 135 ರನ್ನುಗಳನ್ನು ಗಳಿಸಲಷ್ಟೆ ಸಫ‌ಲವಾಯಿತು.

ಸ್ಕೋರುಪಟ್ಟಿ
ಭಾರತ
ಕೆಎಲ್‌ ರಾಹುಲ್‌ ಬಿ ಮಝೀವ 22
ಮನ್‌ದೀಪ್‌ ಸಿಂಗ್‌ ಸಿ ಮರುಮ ಬಿ ಟಿರಿಪಾನೊ 4
ಅಂಬಾಟಿ ರಾಯುಡು ಸಿ ಚಿಗುಂಬುರ ಬಿ ಕ್ರೆಮರ್‌ 20
ಮನೀಷ್‌ ಪಾಂಡೆ ರನೌಟ್‌ 0
ಕೇದಾರ್‌ ಜಾಧವ್‌ ಸಿ ಚಿಗುಂಬುರ ಬಿ ಟಿರಿಪಾನೊ 58
ಎಂಎಸ್‌ ಧೋನಿ ಬಿ ಟಿರಿಪಾನೊ 9
ಅಕ್ಷರ್‌ ಪಟೇಲ್‌ ಔಟಾಗದೆ 20
ಧವಳ್‌ ಕುಲಕರ್ಣಿ ಔಟಾಗದೆ 1

ಇತರ: 4
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 138
ವಿಕೆಟ್‌ ಪತನ: 1-20, 2-27, 3-27, 4-76, 5-93, 6-122
ಬೌಲಿಂಗ್‌:
ಟೆಂಡೈ ಚಟಾರ 4-1-34-0
ಡೋನಾಲ್ಡ್‌ ಟಿರಿಪಾನೊ 4-0-20-3
ನೆವಿಲ್‌ ಮಝೀವ 4-0-32-1
ಚಾಮು ಚಿಬಾಬ 4-0-19-0
ಗ್ರೇಮ್‌ ಕ್ರೆಮರ್‌ 4-0-32-1

ಜಿಂಬಾಬ್ವೆ
ಚಾಮು ಚಿಬಾಬ ಸಿ ಚಾಹಲ್‌ ಬಿ ಸ್ರಾನ್‌ 5
ಎಚ್‌. ಮಸಕಝ ಎಲ್‌ಬಿಡಬ್ಲ್ಯು ಪಟೇಲ್‌ 15
ವುಸಿ ಸಿಬಾಂಡ ಎಲ್‌ಬಿಡಬ್ಲ್ಯು ಕುಲಕರ್ಣಿ 28
ಪೀಟರ್‌ ಮೂರ್‌ ಸಿ ಮನ್‌ದೀಪ್‌ ಬಿ ಚಾಹಲ್‌ 26
ಮಾಲ್ಕಂ ವಾಲರ್‌ ಸಿ ಬುಮ್ರಾ ಬಿ ಕುಲಕರ್ಣಿ 10
ಎಲ್ಟನ್‌ ಚಿಗುಂಬುರ ಸಿ ಚಾಹಲ್‌ ಬಿ ಸ್ರಾನ್‌ 16
ಟಿಮಿಸೆನ್‌ ಮರುಮ ಔಟಾಗದೆ 23
ಇತರ: 12
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 135
ವಿಕೆಟ್‌ ಪತನ: 1-17, 2-57, 3-60, 4-86, 5-104, 6-135
ಬೌಲಿಂಗ್‌:
ಬರೀಂದರ್‌ ಸ್ರಾನ್‌ 4-1-31-2
ಧವಳ್‌ ಕುಲಕರ್ಣಿ 4-0-23-2
ಜಸ್‌ಪ್ರೀತ್‌ ಬುಮ್ರಾ 4-0-23-0
ಅಕ್ಷರ್‌ ಪಟೇಲ್‌ 4-0-18-1
ಯಜುವೇಂದ್ರ ಚಾಹಲ್‌ 4-0-32-1

ಪಂದ್ಯಶ್ರೇಷ್ಠ: ಕೇದಾರ್‌ ಜಾಧವ್‌
ಸರಣಿಶ್ರೇಷ್ಠ: ಬರೀಂದರ್‌ ಸ್ರಾನ್‌
-ಉದಯವಾಣಿ

Comments are closed.