ರಾಷ್ಟ್ರೀಯ

ಯೂ ಟ್ಯೂಬ್‌ ಸೈಟ್‌ ಡೌನ್‌; ಪರಿಣತ ಮಂಗನಿಂದ ಎಲ್ಲವೂ ಸರಿಹೋಯ್ತು !

Pinterest LinkedIn Tumblr

monkeyಹೊಸದಿಲ್ಲಿ : ಅಚ್ಚರಿಯೋ ಅಚ್ಚರಿ – ಇಡಿಯ ವಿಶ್ವಕ್ಕೇ ಅಚ್ಚರಿ ! ಏನಚ್ಚರಿ ಎನ್ನುವಿರಾ ? ಇಡಿಯ ಜಗತ್ತಿಗೆ ಜಗತ್ತೇ ಹುಚ್ಚು ಹಿಡಿಸಿಕೊಂಡಷ್ಟು ಜನಪ್ರಿಯವಾಗಿರುವ ಯೂ ಟ್ಯೂಬ್‌ ವಿಡಿಯೋ ಜಾಲ ತಾಣ ಬುಧವಾರ ಬೆಳಗ್ಗೆ ಸಂಪೂರ್ಣವಾಗಿ ಡೆಡ್‌ ಆಗಿರುವುದನ್ನು ಕಂಡು ಇಡಿಯ ವಿಶ್ವವೇ ಅಚ್ಚರಿಪಟ್ಟಿತು; ಆಘಾತಕ್ಕೆ ಗುರಿಯಾಯಿತು.

ಫೇಸ್‌ ಬುಕ್‌, ಟ್ವಿಟರ್‌ ಅಥವಾ ಟಂಬ್ಲರ್‌ ಎಲ್ಲೆಂದರಲ್ಲಿ ಯೂ ಟ್ಯೂಬ್‌ ಲಿಂಕ್‌ ಗಳು ಸಂಪೂರ್ಣ ಡೆಡ್‌ ಆಗಿದ್ದವು.

ಆದರೆ ಈಗ ಈ ಹೊತ್ತಿಗೆ ಯೂ ಟ್ಯೂಬ್‌ ಮತ್ತು ಜೀವ ಪಡೆದಿದೆ.ಅದು ಸಂಪೂರ್ಣವಾಗಿ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ.

ಇಷ್ಟಕ್ಕೂ ಸಂಪೂರ್ಣವಾಗಿ ಡೆಡ್‌ ಆಗಿದ್ದ ಯೂ ಟ್ಯೂಬ್‌ ಲಿಂಕನ್ನು ಸರಿಪಡಿಸಿ ಮತ್ತೆ ಜೀವಂತಗೊಳಿಸಿದವರು ಯಾರು ಎನ್ನುವಿರಾ ? ಇದಕ್ಕೆಂದೇ ವಿಶೇಷ ಪರಿಣತಿ ಪಡೆದಿರುವ ಮಂಗಗಳ ಒಂದು ತಂಡ ! ಇಂತಹ ವಿಷಮ ಸ್ಥಿತಿಯನ್ನೇ ನಿಭಾಯಿಸಲು ಈ ಪರಿಣತ ಮಂಗಗಳ ತಂಡವನ್ನು ಕಳುಹಿಸಿಕೊಡಲಾಯಿತಂತೆ !

ಇಷ್ಟಕ್ಕೂ ಯೂ ಟ್ಯೂಬ್‌ ಸೈಟನ್ನು ಡೆಡ್‌ ಮಾಡಿದವರು ಯಾರು ? ಯಾಕಾಗಿ ಅದು ಡೆಡ್‌ ಆಯ್ತು ? ವಿಷಯ ತುಂಬಾ ಸಿಂಪಲ್‌ ! ಸೈಟ್‌ನಲ್ಲಿ ಒಂದು ಎರರ್‌ ಮೆಸೇಜ್‌ ಕಾಣಿಸಿಕೊಂಡದ್ದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಯಿತು.

ಆ ಸಂದೇಶ ಹೇಳಿದ್ದು ಇಷ್ಟು : ಕ್ಷಮಿಸಿ; ಏನೋ ಎಡವಟ್ಟಾಗಿದೆ. ಈ ಪರಿಸ್ಥಿಯಿಯನ್ನು ನಿಭಾಯಿಸಿ ಸರಿಪಡಿಸಲು ವಿಶೇಷ ಪರಿಣತಿ ಪಡೆದಿರುವ ಮಂಗಗಳ ತಂಡವನ್ನು ಕಳುಹಿಸಿ ಕೊಡಲಾಗಿದೆ. ಒಂದೊಮ್ಮೆ ನೀವು ಅದನ್ನು ಕಂಡರೆ ಅದಕ್ಕೆ ಈ ಟಿಪ್ಪಣಿ ಮಾಹಿತಿಯನ್ನು ಕಳುಹಿಸಿ !

ಇದರೊಂದಿಗೆ ಒಂದು ಸುದೀರ್ಘ‌ ಕೋಡ್‌ ಕಾಣಿಸಿಕೊಂಡಿತು.
-ಉದಯವಾಣಿ

Comments are closed.