ಮನೋರಂಜನೆ

ಈ ಟಯರ್​ಗಳ ಬೆಲೆ ಬರೋಬ್ಬರಿ 4 ಕೋಟಿ ರೂ.! ಅದೀಗ ಗಿನ್ನೆಸ್ ದಾಖಲೆ

Pinterest LinkedIn Tumblr

Tyre-Webಅಚ್ಚರಿ ವಿಷ್ಯಾನೇ ಬಿಡಿ. ಅಂತದ್ದೇನಿದೆ ಆ ಟಯರ್ನಲ್ಲಿ ಅಂತೀರಾ? ಇಲ್ಲಿದೆ ನೋಡಿ ಟಯರ್ ಒಳ ಮರ್ಮ.

ದುಬೈನ ಸ್ಥಳೀಯ ಕಂಪನಿ ಝುಡ್ ಟಯರ್ಸ್ ನಾಲ್ಕು ಟಯರ್ಗಳಲ್ಲಿಯೂ 24 ಕ್ಯಾರೆಟ್ ಚಿನ್ನ ಮತ್ತು ವಜ್ರಗಳನ್ನು ಬಳಸಿಕೊಂಡು ರಯಾರಿಸಿದೆ. ಇಷ್ಟು ಬೆಲೆ ಬಾಳುವ ಟಯರ್ ಇದುವರೆಗೂ ಎಲ್ಲಿಯೂ, ಯಾವುದೇ ಕಂಪನಿ ತಯಾರಿಸಿದ್ದೇ ಇಲ್ಲ. ಈಗಾಗಲೇ ಈ ಟಯರ್ ಗಿನ್ನೆಸ್ ದಾಖಲೆ ಪುಸ್ತಕವನ್ನೂ ಸೇರಿಕೊಂಡಿದೆ.

ರಂಜಾನ್ ವ್ರತಾಚರಣೆಯಲ್ಲಿರುವ ದುಬೈನಲ್ಲಿ ಚಿನ್ನ ಮತ್ತು ವಜ್ರವನ್ನೊಳಗೊಂಡ ಈ ಟಯರ್ ವಿಶ್ವದಾಖಲೆಯ ಮೊತ್ತಕ್ಕೆ ಹರಾಜಾಗಿದೆ. ಇದರಿಂದ ಬರುವ ಹಣವನ್ನು ಜೆನಿಸೆಸ್ ಫೌಂಡೇಷನ್ಗೆ ನೀಡಲಾಗುತ್ತದೆ. ಫೌಂಡೇಷನ್ ಹಣವನ್ನು ವಿಶ್ವವ್ಯಾಪಿ ಶಿಕ್ಷಣದ ಅಗತ್ಯತೆಗೆ ಬಳಸಿಕೊಳ್ಳಲಿದೆ ಎಂದು ಕಂಪನಿ ತಿಳಿಸಿದೆ.

ಈ ಟಯರ್ಗಳನ್ನು ಚಿನ್ನ ಮತ್ತು ವಜ್ರಗಳಿಂದ ಅಲಂಕರಿಸಲು ಇಟಲಿಗೆ ಕಳುಹಿಸಿಕೊಡಲಾಗಿತ್ತು. ಜಾಯ್ಲಿಯರ್ ಪ್ರೖೆವ್ ಆಭರಣ ಕಂಪನಿ ಇದನ್ನು ಅಲಂಕರಿಸಿ, ಮತ್ತೆ ಅಬುಧಾಬಿಗೆ ಕಳುಹಿಸಲು ಚಿನ್ನದ ಎಲೆಗಳನ್ನು ಬಳಸಿಕೊಳ್ಳಲಾಗಿತ್ತು ಎಂದು ಕಂಪನಿ ಹೇಳಿಕೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಝುಡ್ ಟಯರ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಜೀವ್ ಕಾಂಧಾರಿ, ಝುಡ್ ಟಯರ್ ತಯಾರಿಕೆಯಲ್ಲಿ ನಾವು ಯಾವತ್ತೂ ಗುಣಮಟ್ಟದ ವಿಚಾರದಲ್ಲಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಗುಣಮಟ್ಟದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೇವೆ ಎನ್ನುವುದಕ್ಕೆ ಇದೇ ಸಾಕ್ಷಿಯಾಗಿದೆ. ಅದೇ ಕಾರಣಕ್ಕಾಗಿಯೇ ಕಠಿಣ ಶ್ರಮ ವಹಿಸಿ ಇದನ್ನು ತಯಾರಿಸಿದ್ದೇವೆ. ವಿಶ್ವದಾಖಲೆ ಸೃಷ್ಟಿಸುವುದರೊಂದಿಗೆ ಕಂಪನಿ ಉತ್ತಮ ಸಾಧನೆ ಮಾಡಿದೆ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತದೆ ಎಂದಿದ್ದಾರೆ.

Comments are closed.