ಮನೋರಂಜನೆ

ಪತಿ ರಾಜ್ ಕುಂದ್ರಾ ಜತೆ 41ನೇ ಹುಟ್ಟು ಹಬ್ಬ ಆಚರಿಸಿಕೊಂಡ ಶಿಲ್ಪಾ ಶೆಟ್ಟಿ

Pinterest LinkedIn Tumblr

shilpa-1ಮುಂಬೈ: ಕರಾವಳಿ ಬೆಡಗಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಬುಧವಾರ 41ನೇ ವಸಂತಕ್ಕೆ ಕಾಲಿಟ್ಟಿದ್ದು, ಪತಿ ರಾಜ್ ಕುಂದ್ರಾ ಜೊತೆ ತನ್ನ ನೆಚ್ಚಿನ ರೆಸ್ಟೋರೆಂಟ್ ರೋಮ್ಯಾಂಟಿಕ್ ಡಿನ್ನರ್ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಶಿಲ್ಪಾ ಶೆಟ್ಟಿ ಪತಿಯೊಂದಿಗೆ ಡಿನ್ನರ್ ಮಾಡುತ್ತಿರುವ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ತಮ್ಮ ವಿಚ್ಛೇದನ ವಿಚಾರವಾಗಿ ಬಾಲಿವುಡ್ ನಲ್ಲಿ ಹುಟ್ಟಿಕೊಂಡಿದ್ದ ಊಹಾಪೋಹಾಗಳಿಗೆ ತೆರೆ ಎಳೆದಿದ್ದಾರೆ.
ಹುಟ್ಟು ಹಬ್ಬದ ಮುನ್ನಾದಿನ ಪತಿಯೊಂದಿಗೆ ಡಿನ್ನರ್ ಮಾಡಿ ಸಂಭ್ರಮಿಸಿದ ಶಿಲ್ಪಾ ಶೆಟ್ಟಿ, ಆ ಕ್ಷಣದ ಚಿತ್ರಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದಾರೆ.
2009ರಲ್ಲಿ ರಾಜ್ ಕುಂದ್ರಾ ಅವರ ಕೈ ಹಿಡಿದ ಶಿಲ್ಪಾ ಶೆಟ್ಟಿ ದಂಪತಿಗಳಿಗೆ ವಿಯಾನ್ ಎಂಬ ಗಂಡು ಮಗುವಿದ್ದು, ಹಿಂದಿಯಲ್ಲಿ ಬಾಜಿಗಾರ್, ದಡ್ಕನ್, ಜಂಗ್, ಇಂಡಿಯನ್, ದಸ್, ದೋಸ್ತಾನ ಸೇರಿದಂತೆ ಹಲವು ಚಿತ್ರದಲ್ಲಿ ಶಿಲ್ಪಾ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಪ್ರೀತ್ಸೋದ್ ತಪ್ಪಾ, ಆಟೋ ಶಂಕರ್ ಚಿತ್ರದಲ್ಲಿ ನಟಿಸಿದ್ದಾರೆ.

Comments are closed.