ಮನೋರಂಜನೆ

ಸಲ್ಮಾನ್, ಶಾರುಖ್ ವಿರುದ್ಧದ ‘ಶೂ’ ಕೇಸ್ ವಜಾ

Pinterest LinkedIn Tumblr

06-tis-hazari-court-webನವದೆಹಲಿ: ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡಿದ ಆಪಾದನೆಗಾಗಿ ಶಾರುಖ್ ಮತ್ತು ಸಲ್ಮಾನ್ ಖಾನ್ ಅವರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲು ಮಾಡುವಂತೆ ಕೋರಿ ಸಲ್ಲಿಸಲಾದ ಕ್ರಿಮಿನಲ್ ದೂರನ್ನು ತೀಸ್ ಹಜಾರಿ ನ್ಯಾಯಾಲಯ ಸೋಮವಾರ ವಜಾ ಮಾಡಿತು.

ರಿಯಾಲಿಟಿ ಶೋ ಒಂದರಲ್ಲಿ ನಿರ್ಮಿಸಲಾದ ಹಿಂದು ದೇವಾಲಯದ ಸೆಟ್ ಒಳಗೆ ಶೂಧಾರಿಗಳಾಗಿ ಪ್ರವೇಶಿದ ಹಿನ್ನಲೆಯಲ್ಲಿ ಬಾಲಿವುಡ್ ಸ್ಟಾರ್ ನಟರಾದ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ 9ನೇ ಆವೃತ್ತಿಗೆ ಅತಿಥಿಯಾಗಿ ಆಗಮಿಸಿದ ಶಾರುಖ್ ಖಾನ್ ಜತೆಗೆ ಸಹ ನಟ ಸಲ್ಮಾನ್ ದೇವಾಲಯದ ಸೆಟ್ ಒಳಗೆ ಪ್ರವೇಶ ಮಾಡಿದ್ದರು. ಇದರಿಂದಾಗಿ ಹಿಂದು ಭಾವನೆಗಳಿಗೆ ಧಕ್ಕೆ ಆಗಿದೆ. ಸ್ಟಾರ್ ನಟರು ಉದ್ದೇಶ ಪೂರ್ವಕ ಶೂನೊಂದಿಗೆ ದೇವಾಲಯದ ಒಳಗಡೆ ಪ್ರವೇಶ ಮಾಡಿದ್ದಾರೆ ಎಂಬ ಆರೋಪದ ಮೇಲೆ ಹಿಂದು ಸಂಘಟನೆಗಳು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದವು.

ಈ ನಟರು ಉದ್ದೇಶ ಪೂರ್ವಕವಾಗಿ ಶೂ ಹಾಕಿಕೊಂಡು ನೈಜ ದೇವಾಲಯ ಪ್ರವೇಶ ಮಾಡಿಲ್ಲ. ಬಿಗ್ ಬಾಸ್ ಸಲುವಾಗಿ ಹಾಕಿದ್ದ ಸೆಟ್ನಲ್ಲಿ ನಿರ್ಮಿಸಲಾಗಿದ್ದ ದೇವಾಲಯದ ಮಾದರಿಯೊಳಗಷ್ಟೇ ಪ್ರವೇಶಿಸಿದ್ದರು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಉದ್ದೇಶ ಅವರಿಗೆ ಇರಲಿಲ್ಲ ಎಂದು ಪ್ರಕರಣದ ಕುರಿತು ಕೈಗೊಂಡ ಕ್ರಮದ ವರದಿಯಲ್ಲಿ ಪೊಲೀಸರು ತಿಳಿಸಿದ್ದರು. ವಕೀಲ ಗೌರವ್ ಗುಲಟಿ ಅವರು ಅಧಿನಿಯಮ 295ಎ, 298 ಹಾಗೂ 34ರ ಅನ್ವಯ ಶಾರುಖ್ ಖಾನ್, ಸಲ್ಮಾನ್ ಖಾನ್, ಕಲರ್ಸ್ ವಾಹಿನಿಯ ಮುಖ್ಯಸ್ಥರು ಹಾಗೂ ಬಿಗ್ಬಾಸ್ 9ನೇ ಆವೃತ್ತಿಯ ನಿರ್ದೇಶಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.

Comments are closed.