ಮನೋರಂಜನೆ

ರಾಖಿ ಸಾವಂತ್ ಅಭಿನಯದ ‘ಏಕ್ ಕಹಾನಿ ಜೂಲಿ ಕೀ’ ಚಿತ್ರದ ಪೋಸ್ಟರ್ ರಿಲೀಸ್

Pinterest LinkedIn Tumblr

rrrಮುಂಬೈ,: ಬಾಲಿವುಡ್ ನಟಿ, ಐಟಂ ಗರ್ಲ್ ಎಂದೇ ಖ್ಯಾತಿ ಗಳಿಸಿರುವ ರಾಖಿ ಸಾಂವತ್ ಅಭಿನಯದ ‘ಏಕ್ ಕಹಾನಿ ಜೂಲಿ ಕೀ’ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು. ಚಿತ್ರದ ಟ್ಯಾಗ್ ಲೈನ್ ಕೂಡ ಅಷ್ಟೇ ತಮಾಷೆಯಾಗಿದೆ. ಚಿತ್ರದ ಟ್ಯಾಗ್ ಲೈನ್ ‘ಪ್ಯಾರ್ ಮೇ ದೋಖಾ,.. ಇಸಲಿಯೇ ಠೋಕಾ’ ಅಂತ ಇಂಟರ್‌ಸ್ಟಿಂಗ್ ಆಗಿದ್ದು, ರಾಖಿ ಸಾವಂತ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ದೇಶದೆಲ್ಲೆಡೆ ತೀವ್ರ ಸಂಚಲನ ಮೂಡಿಸಿದ್ದ ಶೀನಾ ಬೋರಾ ಹತ್ಯೆ ಪ್ರಕರಣದ ಕುರಿತು ಚಿತ್ರವೊಂದು ಬಾಲಿವುಡ್‌ನಲ್ಲಿ ಬರುತ್ತಿದೆ. ಸದ್ಯಕ್ಕೆ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ನಟಿ ರಾಖಿ ಸಾವಂತ್ ಇಂದ್ರಾಣಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರದ ನಿರ್ದೇಶಕ ಅಜೀಜ್ ಜಿ.. ಚಿತ್ರ ನಿರ್ಮಾಣ ಚೇತನಾ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ಮೂಡಿ ಬರುತ್ತಿದೆ. ಮೂಲಗಳ ಪ್ರಕಾರ ಶೀನಾ ಬೋರಾ ಹತ್ಯೆ ಕುರಿತಂತೆ ಚಿತ್ರದ ಕಥೆ ಒಳಗೊಂಡಿದ್ದು, ಇಂದ್ರಾಣಿ ಪಾತ್ರದಲ್ಲಿ ರಾಖಿ ಸಾವಂತ್ ಮಿಂಚಲಿದ್ದಾರೆ.

ಇನ್ನೂ ಈ ಚಿತ್ರದಲ್ಲಿ ಅಮಿತ್ ಮೆಹರಾ, ಸಾನಿಯಾ ಪಾನು, ಜಿಮ್ಮಿ ಶರ್ಮಾ, ಅವಧಾ ಶರ್ಮಾ ತಾರಾಗಣದಲ್ಲಿದ್ದಾರೆ. ಸದ್ಯಕ್ಕೆ ಚಿತ್ರ ಯಾವಾಗ ರಿಲೀಸ್ ಆಗಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.

Comments are closed.