ಮನೋರಂಜನೆ

ದಿಯಾ ಮಿರ್ಜಾ ‘ಸ್ವಚ್ಛ್ ಸಾಥಿ’ ರಾಯಭಾರಿ

Pinterest LinkedIn Tumblr

Dia_Mirzaಮುಂಬೈ (ಪಿಟಿಐ): ಸ್ವಚ್ಛ ಭಾರತ ಅಭಿಯಾನದ ಭಾಗವಾಗಿರುವ ಯುವ ಪೀಳಿಗೆ ಕೇಂದ್ರಿತ ‘ಸ್ವಚ್ಛ್ ಸಾಥಿ’ ಕಾರ್ಯಕ್ರಮದ ರಾಯಭಾರಿಯಾಗಿ ಬಾಲಿವುಡ್ ನಟಿ ದಿಯಾ ಮಿರ್ಜಾ ಅವರನ್ನು ನೇಮಕ ಮಾಡಲಾಗಿದೆ.

ಸ್ವಚ್ಛ ಭಾರತ ಅಭಿಯಾನ ಕೇಂದ್ರ ಸರ್ಕಾರದ ಮಹತ್ವದ ಕಾರ್ಯಕ್ರಮ. ‘ಸ್ವಚ್ಛ್ ಸಾಥಿ’ ಕಾರ್ಯಕ್ರಮದ ಮೂಲಕ ದೇಶವನ್ನು ಮಾಲಿನ್ಯ ಮುಕ್ತವಾಗಿಸಿ ಉತ್ತಮ ಹಾಗೂ ಆರೋಗ್ಯಕರ ವಾತಾವರಣ ನಿರ್ಮಿಸುವ ಕನಸು ನನಸಾಗಲಿಗೆ ಎಂದು ದಿಯಾ ಸೋಮವಾರ ಹೇಳಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸುಮಾರು 2000 ವಿದ್ಯಾರ್ಥಿಗಳು ಭಾಗಿಯಾಗಿದ್ದು, ಅವರು ದೇಶಾದ್ಯಂತ 10 ಸಾವಿರ ಶಾಲೆಗಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಿದ್ದಾರೆ.

ದಿಯಾ ಯುವ ಪೀಳಿಗೆಯ ‘ಐಕಾನ್’ ಆಗಿದ್ದು, ಸ್ವಚ್ಛ ಭಾರತ ಅಭಿಯಾನದಲ್ಲಿ ಸಕ್ರಿಯರಾಗಿದ್ದಾರೆ. ಆದ್ದರಿಂದ, ಯುವ ಸಮೂಹವನ್ನು ತಲುಪಲು ಅವರೇ ಸೂಕ್ತ. ಈ ಕಾರಣದಿಂದಲೇ ಅವರನ್ನು ರಾಯಭಾರಿಯಾಗಿ ನೇಮಕ ಮಾಡಲಾಗಿದೆ ಎಂದು ಸ್ವಚ್ಛ ಭಾರತ ಮಿಷನ್ ನಿರ್ದೇಶಕ ಪ್ರವೀಣ್ ಪ್ರಕಾಶ್ ಹೇಳಿದ್ದಾರೆ.

Comments are closed.