ಮನೋರಂಜನೆ

ಸಂಚಾರಿ ವಿಜಯ್‌ ಸ್ವರ ಸಂಚಾರ

Pinterest LinkedIn Tumblr

sanchariವಿಜಯ್‌ ಈಗ “ರಿಕ್ತ’ ಎಂಬ ತಮ್ಮದೇ ಚಿತ್ರವೊಂದಕ್ಕೆ ಹಾಡಿದ್ದಾರೆ. ಅವರಿಂದ ಹಾಡಿಸಿದ್ದು ಸಂಗೀತ ನಿರ್ದೇಶಕ “ರಾಕಿ’. “ನೋಡ್ತಾ ನೋಡ್ತಾ ಗೆದ್ದವಳು …’ ಎಂದು ಸಾಗುವ ಪ್ಯಾಥೋ ಹಾಡಿಗೆ ವಿಜಯ್‌ ಧ್ವನಿಯಾಗಿರುವುದು ವಿಶೇಷ.

ನಿಮಗ್ಯಾಕೆ ಹಾಡಬೇಕೆನಿಸಿತು ಎಂದರೆ, ನಾನು ಬಂದಿದ್ದೇ ಗಾಯಕನಾಗಬೇಕು ಎಂದು ಹೇಳುತ್ತಾರೆ ವಿಜಯ್‌. “ನಮ್ಮ ತಂದೆ-ತಾಯಿ ಇಬ್ಬರೂ ಜಾನಪದ ಕಲಾವಿದರು. ನಮ್ಮನೆಯಲ್ಲಿ ಹಾಡುವ ವಾತಾವರಣ. ನಮ್ಮ ಮನೆಯಲ್ಲಿ ಹಾಡು ಕೇಳುವುದಕ್ಕೆ ಸುತ್ತಮುತ್ತಲ ಜನ ಬರೋರು. ನಮ್ಮ ತಾಯಿ ನನಗೆ ಹಾಡುವುದಕ್ಕೆ ಕರೆದರೆ ನನಗೆ ಸಿಕ್ಕಾಪಟ್ಟೆ ಕಿರಿಕಿರಿ ಆಗೋದು. ಹಾಡೋಕೆ ಕರೆದರೆ ಮನೆಬಿಟ್ಟು ಹೋಗ್ತಿàನಿ ಎನ್ನುತ್ತಿದ್ದೆ. ಕ್ರಮೇಣ ಕಾಲೇಜಿಗೆ ಬಂದ ಮೇಲೆ ಹಾಡುವ ಆಸೆಯಾಯಿತು. ಮೂರೂವರೆ ವರ್ಷ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಎರಡು ವರ್ಷಗಳ ಕಾಲ ಹಿಂದೂಸ್ಥಾನಿ ಸಂಗೀತವನ್ನು ಕಲಿತೆ. “ರಿಕ್ತ’ ಚಿತ್ರದ ನಿರ್ದೇಶಕರು, ಹಾಡನ್ನು ಹಾಡುವುದಕ್ಕೆ ಒತ್ತಾಯಿಸಿದರಂತೆ. “ನನಗೆ ಮೊದಲು ಭಯವಿತ್ತು, ನಿರ್ದೇಶಕರು ಬಿಡಲಿಲ್ಲ. ಒಮ್ಮೆ ಟ್ರೈ ಮಾಡಿ ಎಂದು ಹೇಳಿ ಹಾಡಿಸಿದರು. ಅದೊಂದು ಬೇರೆ ಶೈಲಿಯ ಹಾಡು ಟಪ್ಪಾಂಗುಚ್ಚಿ ಶೈಲಿಯ ಪ್ಯಾಥೋ ಹಾಡದು.ಬಹಳ ಚೆನ್ನಾಗಿ ಮೂಡಿ ಬಂದಿದೆ’ ಎನ್ನುತ್ತಾರೆ.
-ಉದಯವಾಣಿ

Comments are closed.