ರಾಷ್ಟ್ರೀಯ

ಐದು ರಾಜ್ಯಗಳ ಮತದಾರರಿಗೆ ಆಭಾರಿಯಾಗಿದ್ದೇನೆ: ಅಮಿತ್ ಶಾ

Pinterest LinkedIn Tumblr

shaನವದೆಹಲಿ: ಪಂಚರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಪಕ್ಷವನ್ನು ಬೆಂಬಲಿಸಿದ ಎಲ್ಲಾ ಮತದಾರರಿಗೆ ಆಭಾರಿಯಾಗಿದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಐದು ರಾಜ್ಯಗಳ ಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಬಲಗೊಳಿಸಲು ಕಾರ್ಯಕರ್ತರು ಶ್ರಮಪಟ್ಟಿದ್ದಾರೆ. ಇದು ಸಕಾರಾತ್ಮಕ ಗೆಲುವು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಮತಗಳಿಕೆ ನೋಡಿದಲ್ಲಿ ಮೋದಿ ಸರಕಾರದ ಎರಡು ವರ್ಷದ ಸಾಧನೆಗೆ ಜನತೆ ಮನ್ನಣೆ ನೀಡಿದ್ದಾರೆ. ಮುಂಬರುವ 2019ರವರೆಗೆ ಈ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಬಲಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗುಜರಾತ್ ಜಾರ್ಖಂಡ್‌ನಲ್ಲಿ ಬಿಜೆಪಿಗೆ ಗೆಲುವು ದೊರೆತಿದೆ. ಬಿಜೆಪಿ ಸಂಘಟನೆ ಇತರ ರಾಜ್ಯಗಳಲ್ಲಿ ವಿಸ್ತರಣೆಯಾಗಿದೆ. ಆಸ್ಸಾಂನಲ್ಲಿ ಸ್ವಂತ ಬಲದ ಮೇಲೆ ಬಿಜೆಪಿಗೆ ಬಹುಮತ ದೊರೆತಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಕೇರಳದಲ್ಲಿ ಬಿಜೆಪಿಗೆ ಶೇ.15 ರಷ್ಟು ಮತ ದೊರೆತಿದೆ. ಆಸ್ಸಾಂ ರಾಜ್ಯ ಶೀಘ್ರದಲ್ಲಿಯೇ ಅಭಿವೃದ್ಧಿಯಾಗಲಿದೆ. ದೇಶದ ಅಭಿವೃದ್ಧಿಗೆ ಕೈ ಜೋಡಿಸುವ ಪ್ರತಿಯೊಬ್ಬರಿಗೆ ಸ್ವಾಗತವಿದೆ. ಬಿಜೆಪಿ ಅಧ್ಯಕ್ಷನಾಗಿ ನನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ ಎಂದು ಅಮಿತ್ ಶಾ ತಿಳಿಸಿದ್ದಾರೆ.

Comments are closed.