ಮನೋರಂಜನೆ

ಮಾದಕ ಬರವಣಿಗೆಯ ಸನ್ನಿ ಲಿಯೋನ್ ಚೊಚ್ಚಲ ಪುಸ್ತಕ ಪಾದಾರ್ಪಣೆ

Pinterest LinkedIn Tumblr

sunny-leone-bookಬಾಲಿವುಡ್ ನಟಿ ಸನ್ನಿ ಲಿಯೋನ್ ನಟನೆಯಲ್ಲಷ್ಟೇ ಅಲ್ಲ ಈಗ ತಮ್ಮ ಬರವಣಿಗೆಯಿಂದಲೂ ಛಾಪು ಮೂಡಿಸಲು ಮುಂದಾಗಿದ್ದಾರೆ. ನಟಿ ಬರೆದಿರುವ ೭ ಕಥೆಗಳುಳ್ಳ ಡಿಜಿಟಲ್ ಪುಸ್ತಕ ಇಂದಷ್ಟೇ ಅನಾವರನಗೊಂಡಿದ್ದು, ಡಿಜಿಟಲ್ ಪುಸ್ತಕ ಪ್ರಕಟಣಾ ಸಂಸ್ಥೆ ಜಗರ್ನಾಟ್ ಮಾರಾಟಕ್ಕೆ ಲಭ್ಯ ಮಾಡಿದೆ.
ಏಳು ಕಥೆಗಳುಳ್ಳ ‘ಸ್ವೀಟ್ ಡ್ರೀಮ್ಸ್’ ಎಂಬ ಸನ್ನಿ ಲಿಯೋನ್ ಬರೆದಿರುವ ಪುಸ್ತಕ ಈಗ ಜಗರ್ನಾಟ್ ಆಪ್ ಮೂಲಕ ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ೪೯.೫ ರೂಗಳಲ್ಲಿ ಲಭ್ಯವಿದ್ದು, ಆ ಆಪ್ ಫೋನಿನಲ್ಲಿ ಇಳಿಸಿಕೊಳ್ಳುವ ಮೂಲಕ ಓದಬಹುದಾಗಿದೆ.
ಆಪ್ ನಲ್ಲಿ ಪುಸ್ತಕದ ಬಗ್ಗೆ ಇರುವ ಪರಿಚಯದಲ್ಲಿ ಹೀಗೆ ಬರೆಯಲಾಗಿದೆ. “ಭಾರತ ಅತಿ ಹೆಚ್ಚು ಅಪೇಕ್ಷೆಯ ಮಾದಕ ಮಹಿಳೆ ಸನ್ನಿ ಲಿಯೋನ್. ಈ ಏಳು ರುಚಿಕಟ್ಟಾದ ಕಥೆಗಳು ನಿಮ್ಮ ಜೀವನದಲ್ಲಿ ಉದ್ರೇಕತೆಯನ್ನು ಮರುಕಳಿಸುತ್ತದೆ. ಪ್ರತಿ ರಾತ್ರಿ ೧೦ ಘಂಟೆಗೆ ನಿಮ್ಮ ಫೋನಿಗೆ ಕಥೆಯೊಂದನ್ನು ಕಳುಹಿಸಲಾಗುತ್ತದೆ” ಎನ್ನುತ್ತದೆ.
ತಮ್ಮ ನಟನೆ ಮತ್ತು ಮಾದಕತೆಯ ಮೂಲಕ ರಸಿಕರ ಮನಗೆದ್ದ ಸನ್ನಿ ಲಿಯೋನ್ ಈಗ ತಮ್ಮ ಬರವಣಿಗೆಯ ಮೂಲಕವೂ ಮೋಡಿ ಮಾಡಬಲ್ಲರೇ, ಕಾದು ನೋಡಬೇಕು.

Write A Comment