ಮನೋರಂಜನೆ

ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಬೆಳ್ಳಿತೆರೆಯ ಮೇಲೆ ಮತ್ತೊಮ್ಮೆ ಕಾಣುವಂಥ ಅವಕಾಶ

Pinterest LinkedIn Tumblr

vಸಾಹಸಸಿಂಹ ವಿಷ್ಣುವಧನ್ ಅವರನ್ನು ಬೆಳ್ಳಿತೆರೆಯ ಮೇಲೆ ಮತ್ತೊಮ್ಮೆ ಕಾಣುವಂಥ ಅವಕಾಶ ವಿಷ್ಣು ಅಭಿಮಾನಿಗಳಿಗೆ ಇದೀಗ ಲಭಿಸಲಿದೆ. ಹೌದು ಸಾಹಸಸಿಂಹನನ್ನು ಸಿನಿಮಾ ಪರದೆಯ ಮೇಲೆ ಜೀವಂತವಾಗಿರಿಸುವ ಪ್ರಯತ್ನವನ್ನು ಈಗಾಗಲೇ ಸ್ಯಾಂಡಲ್‌ವುಡ್‌ನ ಹಲವಾರು ನಿರ್ದೇಶಕರು, ನಿರ್ಮಾಪಕರುಗಳು ಮಾಡಿದ್ದಾರೆ. ಆದರೆ ಇಲ್ಲೊಂದು ವಿಶೇಷತೆಯೆಂದರೆ ಶ್ರೀಮತಿ ಭಾರತಿ ವಿಷ್ಣುವರ್ಧನ್ ಅವರು ಸಾಹಸ ಸಿಂಹನ ಪತ್ನಿಯಾಗಿಯೇ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಾಜಾಸಿಂಹ ಎಂಬ ಹೆಸರಿನ ಈ ಚಿತ್ರದ ಮುಹೂರ್ತ ಸಮಾರಂಭ ಕಳೆದವಾರ ಕಂಠೀರವ ಸ್ಟುಡಿಯೋ ಆವರಣದಲ್ಲಿ ಅದ್ದೂರಿಯಾಗಿ ನೆರವೇರಿತು. ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಆಗಮಿಸಿ ಚಿತ್ರಕ್ಕೆ ಆರಂಭ ಫಲಕ ತೋರಿಸಿ ಶುಭ ಹಾರೈಸಿದರು. ಸುಮಾರು 20 ವರ್ಷಗಳಿಂದಲೂ ಕನ್ನಡ ಚಿತ್ರರಂಗದ ವಿವಿಧ ಭಾಗಗಳಲ್ಲಿ ತೊಡಗಿಕೊಂಡಿರುವ ಅನುಭವಿ ತಂತ್ರಜ್ಞ ರವಿರಾಮ್ ಅವರು ಈ ಚಿತ್ರದ ಮೂಲಕ ನಿರ್ದೇಶಕನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಿತರಾಗುತ್ತಿದ್ದಾರೆ. ವಿಷ್ಣು ಅವರ ಅಪ್ಪಟ ಅಭಿಮಾನಿಯಾದ ಸಿ.ಡಿ. ಬಸಪ್ಪ ಅವರು ಈ ಚಿತ್ರವನ್ನು ಅಪಾರ ವೆಚ್ಚದೊಂದಿಗೆ ನಿರ್ಮಿಸುತ್ತಿದ್ದಾರೆ.

ಈ ಹಿಂದೆ ಸಿಂಹಾದ್ರಿಯ ಸಿಂಹ ಚಿತ್ರದಲ್ಲಿ ವಿಷ್ಣುವರ್ಧನ್ ಅವರು ನಿರ್ವಹಿಸಿದಂಥ ನರಸಿಂಹೇಗೌಡನ ಪಾತ್ರವನ್ನು ಈ ಚಿತ್ರದಲ್ಲಿ ನಿರ್ದೇಶಕ ರವಿರಾಮ್ ಅವರು ಮತ್ತೊಮ್ಮೆ ತೆರೆಯಮೇಲೆ ಜೀವಂತವಾಗಿರಿಸಿದ್ದಾರೆ. ವಿಷ್ಣು ಅವರು ತೆರೆಯ ಮೇಲೆ ಹೆಚ್ಚಾಗಿ ಕಾಣಿಸಿಕೊಳ್ಳದಿದ್ದರೂ ಅವರ ಪಾತ್ರ ಇಡೀ ಚಿತ್ರದಲ್ಲಿ ತುಂಬಿಕೊಂಡಿರುತ್ತದೆಯಂತೆ. ನಟ ಅನಿರುದ್ದ ಈ ಚಿತ್ರದಲ್ಲಿ ವಿಷ್ಣುವರ್ಧನ್-ಭಾರತಿ ದಂಪತಿಗಳ ಪುತ್ರನಾಗಿ ಕಾಣಿಸಿಕೊಂಡಿದ್ದಾರೆ. ಆ ಚಿತ್ರದ ನಾಯಕ ನರಸಿಂಹೇಗೌಡನ ಆದರ್ಶ ಹಾಗೂ ಸತ್ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುವ ನಾಯಕನಾಗಿ ನಟ ಅನಿರುದ್ದ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಬೆಡಗಿ ನಿಖಿತಾ ತುಕ್ರಾಲ್ ನಾಯಕಿಯಾಗಿ ಕಾಣಿಸಿಕೊಂಡಿರುವ ರಾಜಸಿಂಹನಿಗೆ ಜೆಸ್ಸಿ ಗಿಫ್ಟ್ ರಾಗ-ತಾಳ ಹಾಕುತ್ತಿದ್ದಾರೆ. ಛಾಯಾಗ್ರಾಹಕ ಕೆ.ಎಂ.ವಿಷ್ಣುವಧನ್ ಕ್ಯಾಮೆರಾ ಹಿಡಿಯುತ್ತಿದ್ದಾರೆ.

Write A Comment