ಕರ್ನಾಟಕ

ಮಧುಮೇಹ, ರಕ್ತದೊತ್ತಡ ದಂತಹ ರೋಗಗಳು ಬರದಂತೆ ತಡೆಯುವುದು ಅತ್ಯಗತ್ಯ : ಯು.ಟಿ.ಖಾದರ್

Pinterest LinkedIn Tumblr

k

ಬೆಂಗಳೂರು, ಏ.7- ಮಧುಮೇಹ, ರಕ್ತದೊತ್ತಡ ದಂತಹ ಜೀವನ ಶೈಲಿಯ ರೋಗಗಳು ಬರದಂತೆ ತಡೆಯುವುದು ಅತ್ಯಗತ್ಯವಾಗಿದ್ದು, ಈ ಬಗ್ಗೆ ಶಾಲಾ ಮಕ್ಕಳಲ್ಲೇ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು. ವಿಧಾನಸಭೆಯ ಬ್ಯಾಕ್ವೆಂಟ್ ಹಾಲ್‌ನಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಐಪಿಯು ಚಾಲನೆ ಮತ್ತು ಮೂರನೆ ಹಂತದ ಇಂದ್ರ ಧನುಷ್ ಅಭಿಯಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಧುಮೇಹ ಇಂದು ಎಲ್ಲರಿಗೂ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದೆ.

ಇದರಿಂದಾಗಿ ಹಲವಾರು ಕಾಯಿಲೆಗಳು ಬರುತ್ತವೆ. ಹೃದಯಾಘಾತ ಮತ್ತಿತರ ಸಮಸ್ಯೆಗಳೂ ಎದುರಾಗು ತ್ತವೆ. ಸಾರ್ವಜನಿಕರು ವಾರದಲ್ಲಿ 5 ನಿಮಿಷ ಬಿಡು ವು ಮಾಡಿಕೊಂಡು ಸರ್ಕಾರಿ ಆರೋಗ್ಯ ಪ್ರಾಥಮಿಕ ಕೇಂದ್ರ ಗಳಿಗೆ ಹೋಗಿ ರಕ್ತದೊತ್ತಡ ಮತ್ತು ಮಧುಮೇಹವನ್ನು ಪರೀಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಂತಹ ಕಾಯಿಲೆಗಳು ಕಂಡು ಬಂದಾಗ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದ ಅವರು, ದೊಡ್ಡವರಿಗಷ್ಟೇ ಅಲ್ಲದೆ, ಮಕ್ಕಳ ಜೀವನಶೈಲಿಯ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಇದಕ್ಕಾಗಿ ಶಿಕ್ಷಣ ಇಲಾಖೆ ಜತೆ ಚರ್ಚೆ ನಡೆಸಲಾಗುವುದು. ವರ್ಷಪೂರ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.ಹಿಂದೆ ತಾಯಂದಿರು ಪೌಷ್ಠಿಕ ಆಹಾರ ನೀಡಿ ಮಕ್ಕಳ ರೋಗ್ಯದ ಕಡೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಈಗ ಮಕ್ಕಳು ದಟ್ಟಪುಷ್ಟವಾಗಿ ಕಾಣಬೇಕೆಂಬ ತಾಯಂದಿರ ಆಸೆಗೆ ಅನಗತ್ಯವಾದ ತಿಂಡಿ ತಿನಿಸುಗಳನ್ನು ತಿನ್ನಿಸುತ್ತಾರೆ. ನಾಲಿಗೆ ರುಚಿಗೆ ಹೆಚ್ಚು ಒತ್ತು ನೀಡುತ್ತಾರೆ. ಇದರಿಂದ ಆರೋಗ್ಯ ಹದಗೆಡುತ್ತದೆ. ಈ ಬಗ್ಗೆ ಪೋಷಕರು ಎಚ್ಚರಿದಿಂದ ಇರಬೇಕು ಎಂದು ಹೇಳಿದರು.

ಮಧುಮೇಹ ನೀಗಿಸಲು ವರ್ಷವಿಡೀ ಕಾರ್ಯಕ್ರಮ ಗಳನ್ನು ಆಯೋಜಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಖಾದರ್ ತಿಳಿಸಿದರು. ಜನರ ಆರೋಗ್ಯ ಸುಧಾರಣೆಗೆ ಸರ್ಕಾರದಲ್ಲಿ ಬಹಳಷ್ಟು ಯೋಜನೆಗಳಿವೆ. ಅವುಗಳ ಬಗ್ಗೆ ಜನಜಾಗೃತಿ ಮೂಡಿಸುವ ಅಗತ್ಯ ಇದೆ. ವಿಶ್ವ ಆರೋಗ್ಯ ದಿನಾಚರಣೆ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಆರೋಗ್ಯ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಾಗುವುದು. ಆಶಾಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಹೇಳಿದರು.

ಇಂದ್ರಧನುಷ್ ಒಂದು ಮತ್ತು ಎರಡನೇ ಅಭಿಯಾನ ಪ್ರಗತಿಯಲ್ಲಿದೆ. ಕಲಬುರ್ಗಿ, ಹಾವೇರಿ, ಬೀದರ್ ಸೇರಿದಂತೆ 6 ಜಿಲ್ಲೆಗಳಲ್ಲಿ 53,688 ಮಕ್ಕಳು ಒಂದನೇ ಮತ್ತು ಎರಡನೇ ಅಭಿಯಾನದಲ್ಲಿ ಹೆಚ್ಚು ಲಸಿಕೆ ಹಾಕಿಸಿಕೊಂಡಿಲ್ಲ. ಮುಂದಿನ 7 ದಿನಗಳವರೆಗೂ 3ನೇ ಹಂತದ ಅಭಿಯಾನ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಈ ಬಾರಿ ಪೊಲೀಯೋ ಸಂಪೂರ್ಣ ಶಾಶ್ವತ ನಿರ್ಮೂ ಲನೆಗೆ ಲಸಿಕೆ ಬದಲಾಗಿ ಇಂಜೆಕ್ಷೆನ್ ನೀಡಲಾಗುತ್ತಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.

ಸಚಿವ ಖಾದರ್ ಸೇರಿದಂತೆ ವೇದಿಕೆಯಲ್ಲಿದ್ದ ಎಲ್ಲರೂ ರಕ್ತದೊತ್ತಡ, ಮಧುಮೇಹದಂತಹ ಪರೀಕ್ಷೆ ಮಾಡಿಸಿಕೊಂಡರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು. ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತರಿದ್ದರು.

Write A Comment