ಮನೋರಂಜನೆ

ಬಡತನದ ಜೋಡಿ ದೊರೆ ಭಗವಾನ್‌ ಸ್ನೇಹ ಹುಟ್ಟಿದ್ದು ಹೇಗೆ ಗೊತ್ತಾ?

Pinterest LinkedIn Tumblr

3_2ದೊರೈ ಮತ್ತು ಭಗವಾನ್‌ ಅನೇಕ ವರ್ಷಗಳ ಕಾಲ ಒಟ್ಟಿಗೆ ಚಿತ್ರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಜೊತೆಯಾಗಿ ತೊಡಗಿಸಿಕೊಂಡಿದ್ದವರು ಮತ್ತು ಅನೇಕ ಹಿಟ್‌ ಚಿತ್ರಗಳನ್ನು ಒಟ್ಟಿಗೆ ಕೊಟ್ಟವರು. ಈಗ್ಯಾಕೆ ಅವರಿಬ್ಬರ ವಿಷಯ ಎಂದರೆ ಅದಕ್ಕೂ ಕಾರಣವಿದೆ. ಇತ್ತೀಚೆಗೆ “ಕೋಮ’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಭಗವಾನ್‌ ಅವರು ಬಂದಿದ್ದರು. ಆ ಚಿತ್ರದಲ್ಲಿ ಅವರೊಂದು ಪ್ರಮುಖ ಪಾತ್ರವನ್ನೂ ನಿರ್ವಹಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಚಿತ್ರದ ನಿರ್ದೇಶಕರಾದ ರವಿ-ಚೇತನ್‌ ಬಗ್ಗೆ ಮಾತಾಡಿದರು. ಅವರ ಸ್ನೇಹವನ್ನು ಕೊಂಡಾಡಿದರು. ಆಗಲೇ ತಮ್ಮ ಮತ್ತು ದೊರೈ ಅವರ ಸ್ನೇಹ ಹುಟ್ಟಿದ್ದು ಹೇಗೆ ಎಂದು ವಿವರಿಸಿದರು. ಅದನ್ನು ಅವರ ಮಾತಿನಲ್ಲೇ ಕೇಳಿ … ನಾನು ಮತ್ತು ದೊರೈ ಇಬ್ಬರೂ ಸ್ನೇಹಿತರಾಗಿದ್ದು ಬಡತನದಿಂದ ಎಂದು ಬಹಳಷ್ಟು ಜನರಿಗೆ ಗೊತ್ತಿರಲಿಲ್ಲ. ಆಗಿನ್ನೂ ನಾನು ನಿರ್ದೇಶಕನಾಗಿರಲಿಲ್ಲ.

ಒಮ್ಮೆ ಎರಡು ದಿನಗಳ ಕಾಲ ನಾನು ಏನೂ ತಿಂದಿರಲಿಲ್ಲ. ತುಂಬಾ ಹಸಿವಾಗಿತ್ತು. ಜೇಬಲ್ಲಿ ದುಡ್ಡಿಲ್ಲ. ಹಾಗಿರುವಾಗ ಯಾರಾದರೂ ಸಾಲ ಕೊಟ್ಟರೆ, ಎರಡು ಇಡ್ಲಿ ಕೊಂಡು ತಿನ್ನೋಣ ಅಂತ ಹೋಟೆಲ್‌ಗೆ ಹೋದೆ. ಹೋಟೆಲ್‌ಗೆ ದೊರೈ ಬರುತ್ತಿದ್ದರು. ಅವರು ಕ್ಯಾಮೆರಾಮನ್‌ ಎಂಬುದು ನನಗೆ ಗೊತ್ತಿತ್ತು. ಅದೇ ಕಾರಣಕ್ಕೆ ಅವರನ್ನ ಅಡ್ಡ ಹಾಕಿದೆ. ಎರಡು ದಿನಗಳಿಂದ ಏನೂ ತಿಂದಿಲ್ಲವಾದ್ದರಿಂದ ಒಂದು ರೂಪಾಯಿ ಕೊಡಿ ಎಂದೆ. ಅವರು ಮುಖ ಪೆಚ್ಚಾಗಿತ್ತು. ನಾನು ಕೇಳಿದ್ದು ಸರಿಹೋಯೊ¤à ಇಲ್ಲವೋ ಎಂದು ನನಗೂ ಬೇಸರವಿತ್ತು. ಕೊನೆಗೆ ಜೇಬೆಲ್ಲ ತಡಕಾಡಿ ಅವರು 50 ಪೈಸೆ ತೆಗೆದುಕೊಟ್ಟರು. ನನ್ನ ಹತ್ತಿರ ಇರೋದೇ ಇಷ್ಟು ಎಂದರು. ನಾನು 25 ಪೈಸೆಗೆ ಇಡ್ಲಿ ತಿಂದು, ಕಾμ ಕುಡಿದು ಸುಧಾರಿಸಿಕೊಂಡೆ.

ಆ ನಂತರ ಜಿ.ವಿ. ಅಯ್ಯರ್‌ ಅವರು ಸಿಕ್ಕಿದ್ದರು. ಅವರು ನನ್ನನ್ನ ಮನೆಗೆ ಎಳೆದು ಕೊಂಡು ಹೋಗಿ ಊಟ ಮಾಡು ಎಂದರು. ಎರಡು ದಿನಗಳಿಂದ ಉಪವಾಸವಿದ್ದರೆ ಮೊದಲೇ ಯಾಕೆ ಮನೆಗೆ ಬರಲಿಲ್ಲ ಎಂದು ಬೈದರು. ಅವರಿಗೆ ನಾನು ಹಸಿದುಕೊಂಡಿದ್ದೆ ಎಂದು ಹೇಳಿದ್ದಾéರು ಗೊತ್ತಾಗಲಿಲ್ಲ. ಕೊನೆಗೆ ಅವರೇ ಆ ವಿಷಯವನ್ನು ದೊರೈ ಹೇಳಿದರು ಎಂದು ಹೇಳಿಕೊಂಡರು. ಇಷ್ಟಕ್ಕೂ ನಡೆದಿದ್ದೇನೆಂದರೆ, ದೊರೈ ಅವರಿಗೂ ತುಂಬಾ ಹಸಿವಾಗಿತ್ತಂತೆ. ಅದೇ ಕಾರಣಕ್ಕೆ ಅಯ್ಯರ್‌ ಬಳಿ 50 ಪೈಸಿ ಪಡೆದು ಹೋಟೆಲ್‌ಗೆ ಹೋದರಂತೆ. ಆಗ ನಾನು ಸಿಕ್ಕಿ, ದುಡ್ಡು ಕೇಳಿದೆ ಎಂದು ಅಷ್ಟೂ ದುಡ್ಡು ಕೊಟ್ಟು ಹೊರಟು ಹೋದರು. ಅವರ ತ್ಯಾಗವೇ ನನಗೆ ಮಾರ್ಗದರ್ಶನವಾಗಿದ್ದಷ್ಟೇ ಅಲ್ಲ, ನಮ್ಮ ಸ್ನೇಹಕ್ಕೆ ಮುನ್ನುಡಿಯಾಯ್ತು.

ಆ ನಂತರ ನಾವಿಬ್ಬರೂ ಹಲವು ಚಿತ್ರಗಳನ್ನ ನಿರ್ದೇಶನ ಮಾಡಿದ್ದೇವೆ. ಒಂದೇ ಒಂದು ದಿನಕ್ಕೂ ನಮ್ಮಿಬ್ಬರ ಮಧ್ಯೆ ಒಡಕು ಮೂಡಲಿಲ್ಲ. ನಾವಿಬ್ಬರು ಒಟ್ಟಿಗೆ ನಿರ್ಮಾಣ ಮಾಡಿದೆವು, ನಿರ್ದೇಶನ ಮಾಡಿದೆವು. ಆದರೆ, ಸ್ನೇಹಕ್ಕೆ ಚ್ಯುತಿ ಬರಲಿಲ್ಲ. ಅದಕ್ಕೆ ಕಾರಣ ಒಂದೇ ಒಂದು ದಿನ ನಮ್ಮಿಬ್ಬರ ನಡುವೆ ವ್ಯವಹಾರ ಕೆಡಲಿಲ್ಲ. ಎಷ್ಟೇ ದುಡ್ಡು ಬಂದರೂ ನಾವಿಬ್ಬರೂ ಸಮನಾಗಿ ಹಂಚಿಕೊಳ್ಳುತ್ತಿದ್ದೆವು. ಒಂದೇ ಒಂದು ದಿನ, ಇಬ್ಬರಲ್ಲೊಬ್ಬರಿಗೆ ಒಂದು ರೂಪಾಯಿ ಹೆಚ್ಚಿಗೆ ಬರಲಿಲ್ಲ, ಒಂದು ರೂಪಾಯಿ ಕಡಿಮೆ ಗಲಿಲ್ಲ. ಆ ಮಟ್ಟಿಗೆ ನಾವಿಬ್ಬರೂ ಸ್ನೇಹವನ್ನು ಉಳಿಸಿಕೊಂಡು ಬಂದೆವು. ನಮ್ಮಿಬ್ಬರ ಸ್ನೇಹವನ್ನು ದೂರ ಮಾಡಿದ್ದು ಆ ವಿಧಿ. ದೊರೈ ನಮ್ಮನ್ನು ಬಿಟ್ಟು ಹೋಗದಿದ್ದರೆ, ನಾವಿಬ್ಬರು ಈಗಲೂ ಜೊತೆಗಿರುತ್ತಿದ್ದೆವು. ಅದೇ ತರಹ ರವಿ-ಚೇತನ್‌ ಅವರ ಸ್ನೇಹ ಸಹ ದೊಡ್ಡ ಮಟ್ಟದಲ್ಲಿ ಬೆಳೆಯಲಿ, ಅವರು ಹಲವು ಚಿತ್ರಗಳನ್ನು ನಿರ್ದೇಶಿಸಲಿ.
-ಉದಯವಾಣಿ

Write A Comment