ಮನೋರಂಜನೆ

ಸೀರಿಯಲ್ ವೈಂಡ್‌ ಅಪ್ ಮಾಡಿಸಿದ ನಟ ಚರಿತ್ ಬಾಳಪ್ಪ!!

Pinterest LinkedIn Tumblr

v_2_8-153x180ಗಮನಿಸಿ ಇಲ್ಲೊಂದು ಫೆಸ್ ಬುಕ್ ಸ್ಟೇಟಸ್‌ನ ಸ್ಕ್ರೀನ್ ಶಾಟ್ ಇದೆ. ಕನ್ನಡದಲ್ಲಿ ಅನುವಾದ ಮಾಡಿ ಹೇಳೋದಾದ್ರೆ ಹೀಗೆ ಹೇಳಬಹುದು. “ನಾನು ಅಷ್ಟೊಂದು ಆಸಕ್ತಿಯಿಂದ, ಕಷ್ಟಪಟ್ಟು ಶ್ರಮವಹಿಸಿ ಕೆಲಸ ಮಾಡಿದ್ದಕ್ಕೆ ಅವರು ನನಗೆ ಕೊಟ್ಟಿದ್ದು ನೋವು! ಎಲ್ಲ ನೋವು, ಶ್ರಮಕ್ಕೆ ನೋವು ಅವಮಾನ ಸಹಿಸಿಕೊಂಡ ನಾನು ಅವರಿಗೆ ವಾಪಸ್ ಕೊಟ್ಟದ್ದು ವೈಂಡ್ ಅಪ್ ಎಂಬ ಗಿಫ್ಟ್! ಹಹ್ಹಹ್ಹ!!”

ಟಿವಿ ಭಾಷೆಯಲ್ಲಿ ವೈಂಡ್ ಅಪ್ ಅಂದ್ರೆ ಕಾರ್ಯಕ್ರಮವೊಂದು ದಿಢೀರ್ ನಿಂತುಹೋಗಿಬಿಡುವುದು. ಈ ಫೆಸ್‌ಬುಕ್ ಸ್ಟೇಟಸ್ ಹಾಕಿರುವ ನಟನ ಹೆಸರು ಚರಿತ್ ಬಾಳಪ್ಪ. ಈತ ವೈಂಡ್‌ಅಪ್ ಮಾಡಿಸಿರುವ ಧಾರಾವಾಹಿಯ ಹೆಸರು ಲವ್‌ಲವಿಕೆ. ಈತನ ಪ್ರಕಾರ ನೋವು ಅವಮಾನ ಕಷ್ಟ ನೀಡಿದವರು ಲವ್‌ಲವಿಕೆ ಧಾರಾವಾಹಿಯ ನಿರ್ದೇಶಕರಾದ ವಿನು ಬಳಂಜ. ಹತ್ತಿದ ಏಣಿ ಒದೆಯುವುದಕ್ಕೆ ಇದಕ್ಕಿಂತ ಅತ್ಯುತ್ತಮ ಉದಾಹರಣೆ ಬಹುಶಃ ಸಿಗಲಿಕ್ಕಿಲ್ಲ.

ಈ ಥರದ್ದೊಂದು ವಿಕೃತಿ ಹಾಗೂ ಅವಿವೇಕತನ ತೋರಿರುವ ಇನ್ನೂ ನಟನೆಯಲ್ಲಿ ಅಂಬೆಗಾಲಿಡುತ್ತಿರುವ ನಟನ ಬಗ್ಗೆ ಇಡೀ ಟಿವಿ ಇಂಡಸ್ಟ್ರಿ ಯೇ ಅಸಹ್ಯಪಡುತ್ತಿದೆ. ಆತನ ನೂರು ಮತ್ತೊಂದು ಫೆಸ್‌ಬುಕ್ ಗೆಳೆಯರು ಲೈಕೊತ್ತಿರುವುದೋ ಸೂಪರ್‌ಮಗಾ ಎಂದಿರುವುದೋ ಹೊರತುಪಡಿಸಿದರೆ, ಮಿಕ್ಕವರೆಲ್ಲರಿಗೂ ಈ ನಟನ ಅಸಲೀಯತ್ತು ಗೊತ್ತಿರುವುದರಿಂದ ಯಾವುದೇ ಮಹತ್ವವನ್ನೂ ನೀಡುವುದು ಅನಗತ್ಯ ಎಂದು ನಿರ್ಲಕ್ಷಿಸಿzರೆ.

ಲವ್‌ಲವಿಕೆ ಧಾರಾವಾಹಿ ಶುರುವಾದಾಗ, ಈ ಧಾರಾವಾಹಿಯ ಮಾಧ್ಯಮಗೋಷ್ಠಿಯಲ್ಲಿ ನಿರ್ದೇಶಕ ವಿನುಬಳಂಜ ಅವರ ಬಗ್ಗೆ ಹೊಗಳುತ್ತಾ ತಮ್ಮನ್ನು ಕಡೆದ ಶಿಲ್ಪಿ ಎಂಬಂತೆಲ್ಲ ಮಾತನಾಡಿದ್ದ ಚರಿತ್ ಏಕಾಏಕಿ ಸೀರಿಯಲ್‌ನಿಂದ ಹೊರಬಿದ್ದದ್ದೇಕೆ? ಆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ತನ್ನ ವಲಯದ ಮಂದಿಯ ಮಧ್ಯೆ ಲೂಸ್ ಟಾಕ್ ಶುರು ಮಾಡಿದ್ಯಾಕೆ ಎಂಬುದು ಇಡೀ ಕಿರುತೆರೆ ಇಂಡಸ್ಟ್ರಿಗೆ ಗೊತ್ತಿರುವ ವಿಷಯ.

ಚರಿತ್ ಕೊಡಗು ಜಿಯಿಂದ ಬಂದ ಮಧ್ಯಮವರ್ಗದ ಕೃಷಿಕ ಕುಟುಂಬದ ನಟ. ನೋಡಲು ಸುಂದರವಾಗಿರೋದ್ರಿಂದ ಸಹಜವಾಗಿ ನಟನಾಗುವ ಗೀಳು ಹುಟ್ಟಿದೆ. ಮಾಡೆಲಿಂಗ್ ಫೊಟೋಶೂಟ್ ಅಂತ ಕ್ಯಾಮೆರಾ ಎದುರಿಸಿದಾತನಿಗೆ ಬೇರೆ ಕೆಲಸದಲ್ಲಿ ಆಸಕ್ತಿ ಇಲ್ಲದೆ ಫುಲ್ ಟೈಮ್ ನಟನಾಗುವ ಆಸೆ ಹುಟ್ಟಿ ಸಿನಿಮಾದಲ್ಲಿ ಅವಕಾಶಕ್ಕಾಗಿ ಅಲೆದಾಡಿ ಹಾಗೂ ಹೀಗೂ ಚಿತ್ರಗಳಲ್ಲಿ ಅವಕಾಶ ಸಿಕ್ಕಿದೆ. ಆದರೆ ಆ ಚಿತ್ರಗಳು ಸಾಕಾರಗೊಳ್ಳಲೇ ಇಲ್ಲ. ಆಗ ಈ ಹೊಸ ಮುಖಕ್ಕೆ ಅವಕಾಶ ನೀಡಿದ್ದು ವಿನು ಬಳಂಜ. ತಮ್ಮ ಲವ್‌ಲವಿಕೆ ಧಾರಾವಾಹಿಗಾಗಿ ಹೊಸಮುಖದ ತಾಲಾಶಿನಲ್ಲಿದ್ದ ವಿನುಬಳಂಜ ಚರಿತ್‌ಗೆ ಅವಕಾಶ ನೀಡಿದರು. ಭಾಷೆ, ನಟನೆ ಎಲ್ಲವನ್ನೂ ಆರಂಭದಿಂದ ತಿದ್ದಿ ಕಲಿಸಿದ್ದು ವಿನುಬಳಂಜ ಅವರೇ. ಎಲ್ಲಕ್ಕಿಂತ ಹೆಚ್ಚಾಗಿ, ಕಿರುತೆರೆ ಮೂಲಗಳೇ ಹೇಳುವ ಪ್ರಕಾರ ಚರಿತ್‌ಗೆ ಇರೋದಕ್ಕೆ ಜಾಗ ಕೂಡ ವಿನುಬಳಂಜ ಅವರೇ ಕಲ್ಪಿಸಿದ್ದು. ಆತನ ವೃತ್ತಿಬದುಕನ್ನು ಅಷ್ಟೊಂದು ಪೋಷಿಸಿದ ವಿನುಬಳಂಜ ಅವರಿಗೆ ಉಲ್ಟಾ ಹೊಡಿದದ್ದು ಯಾಕೆ ಎಂಬುದು ಹಲವರಿಗೆ ಯಕ್ಷಪ್ರಶ್ನೆ.

ಚರಿತ್‌ನ ವಿಕೃತ ಖುಷಿಯ ಸ್ಟೇಟಸ್ ನೋಡಿ ಹಲವರು ಆತ ಲವ್‌ಲವಿಕೆಯಿಂದ ಹೊರಬಿದ್ದದ್ದಕ್ಕೆ ಕಾರಣಗಳನ್ನು ನೀಡುತ್ತಾರೆ. ಆರು ತಿಂಗಳುಗಟ್ಟಲೆ ವಿನು ಬಳಂಜ ಅವರು ಕಲ್ಪಿಸಿದ್ದ ವಸತಿಯಲ್ಲಿ ಇದ್ದ ಈತನಿಗೆದುರಭ್ಯಾಸಗಳಿದ್ದವೆಂದು, ಅಶಿಸ್ತಿನ ಜೊತೆಗೆ ಆ ಮನೆಯ ವಾತಾವರಣ ಹಾಗೂ ಹೆಸರು ಕೆಡಿಸುವ ಕೆಲಸಗಳನ್ನು ಮಾಡಲು ಶುರುಮಾಡಿದ್ದನೆಂದು ತಿಳಿದುಬಂದಿದೆ. ಅದಲ್ಲದೆ ‘ತನ್ನನ್ನು ರಾಜ್‌ಕುಮಾರ್ ಥರದ ನಟನೆಂದು ಹೋದ ಹೊಗಳುತ್ತಾರೆ. ಆದರೆ ತನ್ನ ವ್ಯಾಲ್ಯೂ ಈ ಸೀರಿಯಲ್ ತಂಡಕ್ಕೆ ಗೊತ್ತಿಲ್ಲ’ ಎಂದೂ ಲೂಸ್ ಟಾಕ್ ಮಾಡುವ ಉದ್ಧಟತನಕ್ಕೆ ಇಳಿವ ಚರಿತ್, ವಿನು ಬಳಂಜಗೆ ನಿರ್ದೇಶನಾನೇ ಬರಲ್ಲ, ತನ್ನಂಥ ನಟನಿಂದ ನಟನೆ ತೆಗೆಸೋಕೆ ಬರಲ್ಲ ಎಂದು ಮಾತಾಡುವ ಮಟ್ಟಕ್ಕೂ ಇಳಿದ ಬಗ್ಗೆ ಸುದ್ದಿಯಿದೆ. ಜೊತೆಗೆ ಲವ್ ಲವಿಕೆ ಧಾರಾವಾಹಿಯಲ್ಲಿ ನಟಿಸುವ ಎಲ್ಲ ನಟಿಯರ ಬಗ್ಗೆಯೂ ಕೀಳುಮಟ್ಟದ ಕಮೆಂಟ್ ಮಾಡುವ ಅಭ್ಯಾಸಕ್ಕಿಳಿದು ಹೆಣ್ಣುಮಕ್ಕಳ ಕೆಂಗಣ್ಣಿಗೂ ಗುರಿಯಾಗಿದ್ದುಂಟಂತೆ. ಹಾಗೂ ಹೀಗೂ ಸಹಿಸಿಕೊಂಡ ವಿನುಬಳಂಜ ಅವರುಕ್ಯಾಮೆರಾ ಎದುರುಗಡೆಯೂ ಚರಿತ್ ಅತ್ಯಂತ ಅಶಿಸ್ತು ಮತ್ತು ಅಸಹನೆ ಪ್ರದರ್ಶಿಸ ತೊಡಗಿದಾಗ ಇನ್ನಾಗದು ಎಂದು ಆತನನ್ನು ಹೊರ ಹಾಕಿzರೆ ಎಂದು ಹತ್ತಿರದ ಮೂಲಗಳು ಹೇಳುತ್ತವೆ.ಅಲ್ಲಿಂದ ಹೊರ ಬಿದ್ದಮೇಲೆ ಅಮ್ಮ ಧಾರಾವಾಹಿಗೆ ಕಮಿಟ್ ಆದ ಚರಿತ್, ತನ್ನ ನೀಚನಾಲಗೆಯನ್ನು ಇನ್ನಷ್ಟು ಹರಿಬಿಟ್ಟು ಹೋದಲ್ಲಿ ಬಂದಲ್ಲ ವಿನುಬಳಂಜ ಮತ್ತು ಅವರ ಧಾರಾವಾಹಿಯ ಬಗ್ಗೆ ಇಲ್ಲಸಲ್ಲದ ಮಾತನಾಡುತ್ತಾ ಸುಖಾಸುಮ್ಮನೆ ಶಪಿಸತೊಡಗಿzನೆ. ಅದರ ಪರಮಾವಧಿ ಎಂಬಂತೆ ಲವ್ಲವಿಕೆ ಧಾರಾವಾಹಿ ನಿಲ್ಲಿಸಿದ ಸುದ್ದಿ ಬಂದಕೂಡಲೇ ಈತ ಈ ಸ್ಟೇಟಸ್ ಹಾಕಿzನೆ. ತನ್ನ ಅಸಹ್ಯದ ಮುಖವನ್ನು ಮತ್ತೊಮ್ಮೆ ಅನಾವರಣಗೊಳಿಸಿದ್ದೆನೆ.

ವಿನುಬಳಂಜ ಕೆರಿಯರ್‌ನ ಕಂಡಿರಲಿಲ್ಲವಿನುಬಳಂಜ ಕಿರುತೆರೆಯ ಪುಟ್ಟಣ್ಣ ಎಂದವರಿzರೆ. ಅವರ ನಿರ್ದೇಶನದ ಧಾರಾವಾಹಿಗಳ ಕ್ವಾಲಿಟಿಯನ್ನು ಅವರ ಸ್ಪಧಿಗಳೂ ಮೆಚ್ಚಿ ಮಾತನಾಡುತ್ತಾರೆ. ಪ್ರೀತಿ ಇಲ್ಲದ ಮೇಲೆ, ಚಿಟ್ಟೆ ಹೆಜ್ಜೆ, ಜೋಗುಳ ಹೀಗೆ ಹಲವಾರು ಸೂಪರ್‌ಹಿಟ್ ಧಾರಾವಾಹಿ ಅವರ ಹೆಸರಲ್ಲಿದೆ. ಇಂದು ಹಿರಿತೆರೆಯಲ್ಲಿ ಪ್ರಖ್ಯಾತರಾಗಿರುವ ಯಶ್, ನವೀನ್ ಕೃಷ್ಣ, ಅಚ್ಯುತ ಕುಮಾರ್, ಪದ್ಮಜಾ ರಾವ್, ಕಿರುತೆರೆಯ ನಿರ್ದೇಶಕಿ ಶ್ರುತಿ ನಾಯ್ಡು ಸೇರಿದಂತೆ ಬಹಳಷ್ಟು ಮಂದಿ ಇಂದಿಗೂ ವಿನು ಬಳಂಜ ಅವರ ನಿರ್ದೇಶನವನ್ನು ಸ್ಮರಿಸುತ್ತಾರೆ. ಅವರಿಗೆ ಕೃತಜ್ಞರಾಗಿ ದ್ದರೆ. ಅನಂತ್ ನಾಗ್ರಂಥ ಮಹಾನ್ ನಟರು ಇವರ ನಿರ್ದೇಶನವನ್ನು ಮೆಚ್ಚಿ ಮಾತಾಡಿದ್ದಿದೆ. ನಟನೆ ಕಲೀಬೇಕು ಅಂದ್ರೆ ವಿನುಬಳಂಜ ಅವರ ಧಾರಾವಾಹಿಯಲ್ಲಿ ನಟಿಸಬೇಕು ಎಂದು ಹೇಳುವವರಿದರೆ. ತಮ್ಮ ಮೊದಲ ಧಾರಾವಾಹಿ ಅವರ ನಿರ್ದೇಶನದ್ದೇ ಆಗಬೇಕು, ಅವರ ಸೀರಿಯಲ್‌ನಲ್ಲಿ ಒಂದು ಚಿಕ್ಕ ಪಾತ್ರದದರೂ ನಟಿಸಬೇಕು ಎಂದು ಕನಸುಕಾಣುವವರಿzರೆ. ಅಂಥ ನಿರ್ದೇಶಕರಿಂದ ಬೆಳಕಿಗೆ ಬಂದ ಚರಿತ್, ಆರೇಳು ತಿಂಗಳಲ್ಲಿ ತನಗೆ ಬಂದ ಯಶಸ್ಸಿನ ಪಿತ್ಥ ನೆತ್ತಿಗೇರಿಸಿಕೊಂಡು ಹೀಗಾಗುತ್ತಾನೆಂದು ಖುದ್ದು ವಿನು ಬಳಂಜ ಕೂಡ ಎಣಿಸಿರಲಿಕ್ಕಿಲ್ಲ. ಬಹುಶಃ ಅವರ ಇಷ್ಟು ವರ್ಷಗಳ ವೃತ್ತಿಬದುಕಿನ ಅವರಿಗೆ ಇಂಥ ಕೆಟ್ಟ ಅನುಭವ ಆಗಿರಲಿಲ್ಲ ಎಂದು ಅವರ ಹತ್ತಿರದವರು ಹೇಳುತ್ತಾರೆ. ಆದರೆ ವಿನು ಬಳಂಜ ಮಾತ್ರ ಈತನ ವಿಷಯದಲ್ಲಿ ಮಾತನಾಡುವುದಕ್ಕೂ ಇಷ್ಟಪಡದೆ ಮೌನವಹಿಸುತ್ತಾರೆ. ಶುರುವಿನಲ್ಲಿ ವಾಹಿನಿಯೇ ಬೇಡ ಎಂದಾಗ್ಲೂ ಈತನ ಮೇಲೆ ಭರವಸೆ ಇಟ್ಟು, ಆಯ್ಕೆ ಮಾಡಿದ್ದಕ್ಕೆ ಅವರಿಗೆ ಇಂಥ ನೋವು ನೀಡಿ ಹೋಗಿzನೆ ಚರಿತ್ ಎನ್ನುತ್ತಾರೆ ಲವ್ ಲವಿಕೆಯ ಆಪ್ತರು.ವಾಹಿನಿ ಆಕ್ಷನ್ ತಗೋಬಾರದೇಕೆ?ಸೀರಿಯಲ್ ಒಂದನ್ನು ತಾನೇ ವೈಂಡ್ ಅಪ್ ಮಾಡಿಸಿದೆ ಎಂಬಂತೆ ಸ್ಟೇಟಸ್ ಹಾಕಿಕೊಂಡಿರುವ ಚರಿತ್‌ಗೆ ವಾಹಿನಿ ಇನ್ನಾದರೂ ಛೀಮಾರಿ ಹಾಕಿಲ್ಲ ಎಂಬುದು ಅಚ್ಚರಿ. ಏಕೆಂದರೆ ಇದು ವಾಹಿನಿಯ ಗೌರವದ ಪ್ರಶ್ನೆ ಕೂಡ. ಈತನಿಗೂ ಚಾನೆಲ್‌ಗೂ ಏನು ಸಂಬಂಧ? ವೈಂಡ್ ಅಪ್ ಮಾಡುವ ಅಧಿಕಾರ ತನಗೆ ಇದೆ. ತಾನೇ ಸೀರಿಯಲ್ ನಿಲ್ಲಿಸಿದ್ದು ಎಂಬಂತೆ ಮಾತನಾಡಿರುವ ಚರಿತ್ ಉದ್ಧಟತನಕ್ಕೆ ಚಾನೆಲ್ ಕ್ರಮತೆಗೆದುಕೊಂಡು ಪಾಠ ಕಲಿಸಬೇಕಿದೆ.

ಈಗ ಅವಕಾಶ ನೀಡಿರುವ ಇನ್ನೊಂದು ವಾಹಿನಿ ಮತ್ತು ಇನ್ನೊಂದು ನಿರ್ದೇಶಕರೂ ಈತನ ಹರುಕು ಬಾಯಿಗೆ ಕಡಿವಾಣ ಹಾಕಬೇಕಿದೆ. ಇಲ್ಲವಾದಲ್ಲಿ ಈಗ ನಟಿಸುತ್ತಿರುವ ಧಾರಾವಾಹಿ ತಂಡವೂ ಅದನ್ನು ಪ್ರಸಾರ ಮಾಡುತ್ತಿರುವ ವಾಹಿನಿಯೂ ಮುಂದೊಂದು ದಿನ ಈತನಿಂದ ಅಪಾಯ ಎದುರಿಸಬೇಕಾಗಬಹುದು.

ನವೀನ್ ಸಾಗರ್

Write A Comment