ಕರ್ನಾಟಕ

‘1 ಕೋಟಿ ಮಾದಕ ವಸ್ತು ವಶ ಮೂವರ ಬಂಧನ

Pinterest LinkedIn Tumblr

Parappana-agraharaclr-715x350ಬೆಂಗಳೂರು, ಮಾ. ೨೬ – ಮಾದಕ ವಸ್ತು ಬ್ರೌನ್‌ಶುಗರ್ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಆಗ್ನೇಯ ವಿಭಾಗದ ಪೊಲೀಸರು ೧ ಕೋಟಿಗೂ ಹೆಚ್ಚು ಮೌಲ್ಯದ ಬ್ರೌನ್‌ಶುಗರ್‌ನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡು ಮೂಲದ ಮುರುಗನ್ (೪೨), ಸೀನಾ (೩೨), ಪಳನಿ (೩೦) ಬಂಧಿತ ಆರೋಪಿಗಳಾದರೆ, ಬಂಧಿತರಿಂದ ೧ ಕೋಟಿ ರೂ. ಮೌಲ್ಯದ ೯೪೦ ಗ್ರಾಂ ತೂಕದ ಬ್ರೌನ್‌ಶುಗರ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತಮಿಳುನಾಡಿನ ಪೆರಂಬದೂರಿನ ಆರೋಪಿಗಳು ಬ್ರೌನ್‌ಶುಗರ್‌ನ್ನು ತಂದು ಹೊಸೂರು ರಸ್ತೆಯ ಪರಪ್ಪನ ಅಗ್ರಹಾರದ ಖಾಲಿ ಜಾಗವೊಂದರಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಪರಪ್ಪನ ಅಗ್ರಹಾರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು ಬೇರೆ ಕಡೆಯಿಂದ ಬ್ರೌನ್‌ಶುಗರ್‌ನ್ನು ತಂದು ನಗರದ ವಿವಿಧೆಡೆ ಮಾರಾಟ ಮಾಡುತ್ತಿರುವುದನ್ನು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಡಿಸಿಪಿ ಡಾ. ಬೋರಲಿಂಗಯ್ಯ ಅವರಿದ್ದರು.

Write A Comment