ಮನೋರಂಜನೆ

ಭಾರತಕ್ಕೆ ರೋಚಕ ಜಯ, ಸೆಮಿಫೈನಲ್ ಆಸೆ ಜೀವಂತ

Pinterest LinkedIn Tumblr

criಬೆಂಗಳೂರು: ಕೊನೆಯ ಬಾಲ್​ವರೆಗೂ ಕುತೂಹಲವನ್ನು ಕಾಯ್ದುಕೊಂಡಿದ್ದ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶದ ವಿರುದ್ಧ 1 ರನ್​ಗಳಿಂದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಸೆಮಿಫೈನಲ್ ಆಸೆಯನ್ನು ಭಾರತ ಜೀವಂತವಾಗಿರಿಸಿಕೊಂಡಿದೆ.

ಭಾರತ ನೀಡಿದ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಬಾಂಗ್ಲಾದೇಶ ಉತ್ತಮ ಆಟ ಪ್ರದರ್ಶಿಸಿತು. ಆದರೆ ಬಾಂಗ್ಲಾದೇಶದ ಆಸೆಗೆ ತಣ್ಣೀರೆರಚಿದ ಭಾರತ ರೋಚಕ ಗೆಲುವು ದಾಖಲಿಸಿತು. ಬಾಂಗ್ಲಾದೇಶ ಅಂತಿಮವಾಗಿ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 145 ರನ್ ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲಾದೇಶ ಪರ ಇನಿಂಗ್ಸ್ ಆರಂಭಿಸಿದ ತಮೀಮ್ ಇಕ್ಬಾಲ್ (35) ಬಿರುಸಿನ ಆಟವಾಡಿ ತಂಡಕ್ಕೆ ಅಗತ್ಯ ಪ್ರಾರಂಭವನ್ನು ಒದಗಿಸಿಕೊಟ್ಟರು. ನಂತರ ಬಂದ ಶಬ್ಬೀರ್ ರಹಮಾನ್ (26), ಶಕೀಬ್ ಅಲ್ ಹಸನ್ (22) ಮತ್ತು ಸೌಮ್ಯ ಸರ್ಕಾರ್ (21) ರನ್ ರೇಟ್ ಕಾಯ್ದುಕೊಳ್ಳುವಲ್ಲಿ ನೆರವಾದರು. ಕೊನೆಯಲ್ಲಿ ಮೊಹಮದುಲ್ಲಾ (18) ಬಿರುಸಿನ ಆಟವಾಡಿದರು.

ಭಾರತದ ಪರ ರವೀಂದ್ರ ಜಡೇಜಾ, ಅಶ್ವಿನ್, ಪಾಂಡ್ಯ ತಲಾ 2 ವಿಕೆಟ್ ಪಡೆದರು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಬಾಂಗ್ಲಾದೇಶ ಭಾರತವನ್ನು ತನ್ನ ಪ್ರಭಾವಿ ಬೌಲಿಂಗ್​ನಿಂದ ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಇನಿಂಗ್ಸ್ ಪ್ರಾರಂಭಿಸಿದ ಭಾರತ ಉತ್ತಮ ಆರಂಭವನ್ನು ಪಡೆಯಿತು. ಶಿಖರ್ ಧವನ್ (23) ಮತ್ತು ರೋಹಿತ್ ಶರ್ಮಾ (18) ರನ್ ಗಳಿಸಿದರು. ನಂತರ ಬಂದ ಕೊಹ್ಲಿ (24) ಸಹ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಇರಲಿಲ್ಲ. ಉಳಿದಂತೆ ಉಳಿದಂತೆ ಸುರೇಶ್ ರೈನಾ (30), ಹಾರ್ದಿಕ್ ಪಾಂಡ್ಯ (15) ಮತ್ತು ಮಹೇಂದ್ರ ಸಿಂಗ್ ಧೋನಿ (13*) ರನ್ ಗಳಿಸಿ ತಂಡದ ಮೊತ್ತವನ್ನು 146 ಕ್ಕೆ ಕೊಂಡೊಯ್ದರು.

ಸಂಕ್ಷಿಪ್ತಿ ಸ್ಕೋರ್:

ಭಾರತ 20 ಓವರ್​ಗಳಲ್ಲಿ 146 ಕ್ಕೆ 7 (ಸುರೇಶ್ ರೈನಾ 30, ಕೊಹ್ಲಿ 24, ಮುಷ್ತಿಫುರ್ ರಹೀಮ್ 34 ಕ್ಕೆ 2, ಅಲ್ ಅಮೀನ್ ಹುಸೇನ್ 36 ಕ್ಕೆ 2)

ಬಾಂಗ್ಲಾದೇಶ 20 ಓವರ್​ಗಳಲ್ಲಿ 145 ಕ್ಕೆ 9 (ತಮೀಮ್ ಇಕ್ಬಾಲ್ 35, ಶಬ್ಬೀರ್ ರಹಮಾನ್ 26, ಅಶ್ವಿನ್ 20 ಕ್ಕೆ 2, ಜಡೇಜಾ 22 ಕ್ಕೆ 2, ಪಾಂಡ್ಯ 29 ಕ್ಕೆ 2).

Write A Comment