ಮನೋರಂಜನೆ

ನಟ ಶಶಿಕಪೂರ್ ನಿಧನ ಸುಳ್ಳು ವದಂತಿ, ಆರೋಗ್ಯದಿಂದಿದ್ದಾರೆ…

Pinterest LinkedIn Tumblr

shashi-kapoor_webಮುಂಬೈ: ಬಾಲಿವುಡ್​ನ ಹಿರಿಯ ನಟ ಶಶಿಕಪೂರ್ ನಿಧನರಾಗಿದ್ದಾರೆ ಎಂಬ ಸುದ್ದಿ ಬುಧವಾರ ಬೆಳಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಅವರ ಅಭಿಮಾನಿಗಳು ಸೇರಿದಂತೆ ಚಿತ್ರ ರಸಿಕರಲ್ಲಿ ಕೆಲಕಾಲ ಸಂಚಲನ ಸೃಷ್ಟಿಸಿತು. ಅವರು ಆರೋಗ್ಯದಿಂದ ಇದ್ದಾರೆ ಮತ್ತು ಯಾವುದೇ ಸಮಸ್ಯೆಯಿಲ್ಲ ಎಂದು ಅಳಿಯ ರಿಷಿ ಕಪೂರ್ ಈ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಹಾಕಿದ್ದಾರೆ.

ಶಶಿ ಕಪೂರ್ ಅವರ ಮಗ ಕುನಾಲ್ ಕಪೂರ್ ಕೂಡ ಅವರ ಆರೋಗ್ಯ ಸ್ಥಿರವಾಗಿರುವ ವಿಷಯ ದೃಢಪಡಿಸಿದ್ದಾರೆ.

ಈ ಮೊದಲೂ ಅನೇಕ ಬಾರಿ ಟ್ವಿಟರ್​ನಲ್ಲಿ ಶಶಿ ಕಪೂರ್ ನಿಧನ ಸುದ್ದಿ ಹರಿದಾಡಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇಂತಹ ವದಂತಿಗಳಿಂದ ಅವರ ಆಯುಷ್ಯ ಹೆಚ್ಚುವುದರಲ್ಲಿ ಅನುಮಾನವಿಲ್ಲ ಎಂದು ಬಾಲಿವುಡ್​ನ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಸೇರಿದಂತೆ ಹಲವು ಹಿರಿಯ ನಟ-ನಟಿಯರು ಹೇಳಿದ್ದಾರೆ.

Write A Comment