ಅಂತರಾಷ್ಟ್ರೀಯ

ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಶಾಹಿದ್ ಅಫ್ರಿದಿ ಗುಡ್‍ಬೈ

Pinterest LinkedIn Tumblr

LONDON, ENGLAND - JUNE 21:  Shahid Afridi of Pakistan gives a thumbs up followng his team's victory at the end of the ICC World Twenty20 Final between Pakistan and Sri Lanka at Lord's on June 21, 2009 in London, England.  (Photo by Richard Heathcote/Getty Images) *** Local Caption *** Shahid Afridi

ನವದೆಹಲಿ: ವಿಶ್ವ ಕ್ರಿಕೆಟ್ ಪ್ರಮುಖ ಆಲ್‍ರೌಂಡರ್ ಪಾಕಿಸ್ತಾನದ ಶಾಹಿದ್ ಅಫ್ರಿದಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಗುಡ್‍ಬೈ ಹೇಳಿದ್ದಾರೆ. 2010ರಲ್ಲಿ ಟೆಸ್ಟ್ ಹಾಗೂ 2015ರಲ್ಲಿ ಏಕದಿನ ಪಂದ್ಯದಿಂದ ನಿವೃತ್ತಿಯಾಗಿದ್ದ ಅಫ್ರಿದಿ ಈಗ ನಡೆಯುತ್ತಿರುವ ಟಿ-20 ವಿಶ್ವಕಪ್ ಬಳಿಕ ಚುಟುಕು ಕ್ರಿಕೆಟ್‍ಗೂ ವಿದಾಯ ಹೇಳಿದ್ದಾರೆ.

ನಿನ್ನೆ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದ ಸೋಲಿನ ನಂತರ ಪಾಕ್ ಟಿ-20 ಕ್ಯಾಪ್ಟನ್ ಅಫ್ರಿದಿ ತನ್ನ ತೀರ್ಮಾನವನ್ನು ತಿಳಿಸಿದ್ರು. ಟಿ-20 ವಿಶ್ವಕಪ್‍ನ ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್ ಅಫ್ರಿದಿ ಪಾಲಿನ ಕೊನೆಯ ಪಂದ್ಯವಾಗಲಿದೆ ಎಂದಿದ್ದಾರೆ.

ಬೂಮ್ ಬೂಮ್ ಖ್ಯಾತಿಯ ಅಫ್ರಿದಿ ವಿಶ್ವದ ಬೆಸ್ಟ್ ಅಲ್‍ರೌಂಡರ್. 398 ಏಕದಿನ ಪಂದ್ಯದಲ್ಲಿ 8 ಸಾವಿರಕ್ಕೂ ಅಧಿಕ ರನ್ ಹಾಗೂ 395 ವಿಕೆಟ್ ಪಡೆದಿದ್ದಾರೆ. 27 ಟೆಸ್ಟ್ ಆಡಿ ಸಾವಿರದ ಏಳುನೂರಕ್ಕೂ ಅಧಿಕ ರನ್ ಹಾಗೂ 48 ವಿಕೆಟ್ ಪಡೆದಿದ್ದಾರೆ. ಏಕದಿನದಲ್ಲಿ 6 ಹಾಗೂ ಟೆಸ್ಟ್‍ನಲ್ಲಿ 5 ಸೆಂಚುರಿ ಭಾರಿಸಿದ್ದಾರೆ. ಟಿ-20ಯಲ್ಲಿ 97 ಪಂದ್ಯಗಳನ್ನಾಡಿ ಸಾವಿರದ ಮುನ್ನೂರಕ್ಕೂ ಹೆಚ್ಚು ರನ್ ಹಾಗೂ 97 ವಿಕೆಟ್ ಕಬಳಿಸಿರೋದು ಅಫ್ರಿದಿ ಟ್ರ್ಯಾಕ್ ರೆಕಾರ್ಡ್.

ಇತ್ತ ನಿನ್ನೆ ನಡೆದ ಪಂದ್ಯದಲ್ಲಿ ಪಾಕಿಸ್ತಾನವನ್ನು 22 ರನ್‍ಗಳಿಂದ ಮಣಿಸಿರುವ ನ್ಯೂಜಿಲ್ಯಾಂಡ್ ತಂಡ ನಾಕೌಟ್ ಹಂತಕ್ಕೆ ಮೊದಲ ತಂಡವಾಗಿ ಎಂಟ್ರಿ ಕೊಟ್ಟಿದೆ.

Write A Comment