
ಕೊಲ್ಕತ್ತಾ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಬಾಂಗ್ಲಾವನ್ನು ಮಣಿಸಿದ ಪಾಕಿಸ್ತಾನ ಶುಭಾರಂಭ ಮಾಡಿದೆ.
ಈಡನ್ ಗಾರ್ಡನ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪಾಕ್ ಪರ ಆರಂಭಿಕ ಆಟಗಾರರು ಭರ್ಜರಿ ಬ್ಯಾಟಿಂಗ್ ನಿಂದಾಗಿ ಪಾಕಿಸ್ತಾನ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ ಭರ್ಜರಿ 201ರನ್ ಕಲೆಹಾಕಿತು.
ಬೃಹತ್ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ ಆಟಗಾರರು ರನ್ ಗಳಿಸಲು ಪರದಾಡಿದರು. ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಇದರೊಂದಿಗೆ ಪಾಕಿಸ್ತಾನ 55 ರನ್ ಗಳಿಂದ ಜಯ ಗಳಿಸಿತು.
ಬಾಂಗ್ಲಾದೇಶ ಪರ ತಮೀಮ್ ಇಕ್ಬಾಲ್ 24, ಸೌಮ್ಯ ಸರ್ಕಾರ್ 0, ಶಬ್ಬೀರ್ ರೆಹಮಾನ್ 25, ಮಹಮದುಲ್ಲ 4, ಮುಸ್ಫಿಕರ್ ರಹೀಂ 18, ಮೊಹಮ್ಮದ್ ಮಿಥುನ್ 2 ರನ್ ಗಳಿಸಿದ್ದಾರೆ. ಇನ್ನು ಶಕೀಬ್ ಅಲ್ ಹಸನ್ ಅಜೇಯ 50 ಹಾಗೂ ಮುಶ್ರಫೆ ಮೋರ್ಟಜ 15 ರನ್ ಗಳಿಸಿದ್ದಾರೆ.
ಪಾಕಿಸ್ತಾನ ಪರ ಮೊಹಮದ್ ಆಮಿರ್, ಶಾಹಿದ್ ಅಫ್ರಿದಿ ತಲಾ 2 ವಿಕೆಟ್, ಮೊಹಮ್ಮದ್ ಇರ್ಫಾನ್, ಇಮದ್ ವಾಸಿಂ ತಲಾ 1 ವಿಕೆಟ್ ಪಡೆದಿದ್ದಾರೆ.
ಪಾಕಿಸ್ತಾನ ಪರ ಶರ್ಜಿಲ್ ಖಾನ್ 18, ಅಹ್ಮದ್ ಶೆಹಜಾದ್ 52, ಮೊಹಮ್ಮದ್ ಹಫೀಜ್ 64, ಶಾಹಿದ್ ಅಫ್ರಿದಿ 49, ಉಮರ್ ಅಕ್ಮಲ್ 0 ಗಳಿಸಿ ಔಟಾದರೆ ಶೋಯೆಬ್ ಮಲಿಕ್ ಅಜೇಯ 15 ಹಾಗೂ ಇಮದ್ ವಾಸಿಂ 0 ರನ್ ಗಳಿಸಿದ್ದಾರೆ. ಬಾಂಗ್ಲಾ ಪರ ಟಸ್ಕಿನ್ ಅಹ್ಮದ್, ಅರಾಫತ್ ಸನ್ನಿ ತಲಾ 2 ವಿಕೆಟ್ ಹಾಗೂ ಶಬ್ಬಿರ್ ರೆಹಮಾನ್ 1 ವಿಕೆಟ್ ಪಡೆದಿದ್ದಾರೆ.