ಮನೋರಂಜನೆ

ಸುನಿಯ ಇನ್ನೊಂದು ಲವ್‌ಸ್ಟೋರಿ ಮಾರ್ಚ್‌ 11ಕ್ಕೆ

Pinterest LinkedIn Tumblr

Simple-agi-innondu-love-story-(2)ಇದು “ಸಿಂಪಲ್ಲಾಗ್‌ ಒಂದು ಲವ್‌ ಸ್ಟೋರಿ’ಯ ಮುಂದುವರಿದ ಭಾಗನಾ? -ನಿರ್ದೇಶಕ ಸುನಿ “ಸಿಂಪಲ್ಲಾಗ್‌ ಇನ್ನೊಂದು ಲವ್‌ಸ್ಟೋರಿ’ ಸಿನಿಮಾ ಆರಂಭಿಸಿದಾಗ ಅದೆಷ್ಟು ಮಂದಿ ಈ
ಪ್ರಶ್ನೆ ಕೇಳಿದರೋ ಲೆಕ್ಕವಿಲ್ಲ. ಹಾಗಂತ ಇದು ಆ ಚಿತ್ರದ ಮುಂದುವರಿದ ಭಾಗವಂತೂ ಖಂಡಿತಾ ಅಲ್ಲ. ಆದರೆ ಅದೇ ಥರಾದ ಮತ್ತೂಂದು ಸಿನಿಮಾ.

ನಿರ್ದೇಶಕ ಸುನಿ ಕೂಡಾ ಇದನ್ನೇ ಹೇಳುತ್ತಾರೆ. “ಇದು ಆ ಚಿತ್ರದ ಮುಂದುವರಿದ ಭಾಗವಲ್ಲ. ಅದೇ ಫ್ಲೇವರ್‌ನ ಮತ್ತೂಂದು ಸಿನಿಮಾ. ನಾನು ತುಂಬಾ ಇಷ್ಟಪಟ್ಟ ಕಥೆ ಇದು. ಸಿನಿಮಾ ಕೂಡಾ ತುಂಬಾ ಚೆನ್ನಾಗಿದೆ ಬಂದಿದೆ. ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ’ ಚಿತ್ರಕ್ಕೂ ಮುನ್ನ ಬರೆದ ಕಥೆ
ಇದು. ಇದಕ್ಕೂ ಅದಕ್ಕೂ ಸಾಮ್ಯತೆ ಇದೆ. ಅದು ಡೈಲಾಗ್‌ ಮತ್ತು ಮನರಂಜನೆ. ಆ ಚಿತ್ರದಲ್ಲಿ ಫ್ಲ್ಯಾಶ್‌ ಬ್ಯಾಕ್‌ ಇತ್ತು. ಇಲ್ಲಿ ಇಮೇಜಿನೇಷನ್‌ ಇದೆ. ಹೋಗುವ ಜಾಗಕ್ಕಿಂತ ಹೋಗುವ ದಾರಿ ಇಷ್ಟವಾಗುತ್ತೆ. ಅದೇ ಥೀಮ್‌ನಲ್ಲಿ ಸಿನಿಮಾ ಮೂಡಿಬಂದಿದೆ.

ನನಗಂತೂ ತೃಪ್ತಿ ಇದೆ. ಮೊದಲ ಸಲ ಬೇರೆ ಬ್ಯಾನರ್‌ನಲ್ಲಿ ಸಿನಿಮಾ ಮಾಡಿದ್ದೇನೆ. ಸಿನಿಮಾ ಕೂಡಾ ತುಂಬಾ ಚೆನ್ನಾಗಿ ಮೂಡಿಬಂದಿದೆ’ ಎಂಬುದು ನಿರ್ದೇಶಕ ಸುನಿ ಮಾತು. “ಸಿಂಪಲ್ಲಾಗ್‌ ಒಂದ್‌ ಲವ್‌ಸ್ಟೋರಿ’ ಚಿತ್ರ ಇಷ್ಟಪಟ್ಟವರು ಈ ಚಿತ್ರವನ್ನು ಮತ್ತಷ್ಟು ಇಷ್ಟಪಡುತ್ತಾರೆಂಬ ವಿಶ್ವಾಸ
ಸುನಿಗಿದೆ.

ಚಿತ್ರದಲ್ಲಿ ಪ್ರವೀಣ್‌ ಹಾಗೂ ಮೇಘನಾ ಗಾಂವ್ಕರ್‌ ನಾಯಕ- ನಾಯಕಿಯಾಗಿ ನಟಿಸಿದ್ದಾರೆ. ಬಾಲನಟ ಹೇಮಂತ್‌ ಇಲ್ಲಿ ಟ್ಯೂಬ್‌ ಎಂಬ ಪಾತ್ರ ಮಾಡಿದ್ದಾರಂತೆ. ಚಿತ್ರ ಹೊರಬಂದ ಮೇಲೆ ಅವರನ್ನು ಎಲ್ಲರೂ ಟ್ಯೂಬ್‌ ಅಂತಾನೇ ಕರೆಯುತ್ತಾರಂತೆ. ಅಂದಹಾಗೆ, ಚಿತ್ರ ಮಾರ್ಚ್‌ 11 ರಂದು ತೆರೆಕಾಣುತ್ತಿದೆ. ಸುನಿ ಮೊದಲ ಸಿನಿಮಾ ಅಂದರೆ “ಸಿಂಪಲ್ಲಾಗ್‌ ಒಂದು ಲವ್‌ಸ್ಟೋರಿ’ ಬಿಡುಗಡೆಯಾಗಿ ಮೂರು ವರ್ಷ ಮೂರನೇ ದಿನಕ್ಕೆ “ಸಿಂಪಲ್ಲಾಗ್‌ ಇನ್ನೊಂದು ಲವ್‌ ಸ್ಟೋರಿ’ ಚಿತ್ರ ಬಿಡುಗಡೆಯಾಗುತ್ತಿದೆ.

ಆ ಚಿತ್ರ 2013 ರ ಮಾರ್ಚ್‌ 8 ರಂದು ಬಿಡುಗಡೆಯಾಗಿತ್ತು. ಚಿತ್ರಕ್ಕೆ ಭರತ್‌ ಹಾಗೂ ಸಾಯಿಕಿರಣ್‌ ಸಂಗೀತ ನೀಡಿದ್ದು, ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳಿಗೆ ಎಲ್ಲಾ ಕಡೆಗಳಿಂದಲೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರತಂಡ ಖುಷಿಯಾಗಿದೆ. ಚಿತ್ರವನ್ನು ಆಶು ಬೆದ್ರ ನಿರ್ಮಿಸಿದ್ದಾರೆ.

-ಉದಯವಾಣಿ

Write A Comment