ಮನೋರಂಜನೆ

“ರಿಮೇಕ್ ಚಿತ್ರಕ್ಕೆ “ರಾಜ್, ವಿಷ್ಣು” ಟೈಟಲ್ ?

Pinterest LinkedIn Tumblr

Sharanತಮಿಳಿನ ವರ್ತಪಾಡತ ವಾಲಿಬರ್ ಸಂಘಂ ಚಿತ್ರವನ್ನು ಕನ್ನಡದಲ್ಲಿ  ಭಟ್ಟಿ ಇಳಿಸಿ ‘ಅಧ್ಯಕ್ಷ’ ಮತ್ತು ಉಪಾಧ್ಯಕ್ಷರಾಗಿ ಮಿಂಚಿದ್ದ ನಟ ಶರಣ್ – ಚಿಕ್ಕಣ್ಣ ಜೋಡಿ ಮತ್ತೊಮ್ಮೆ ಕಾಮಿಡಿ ಕಮಾಲ್ ತೋರಿಸಲು ಒಂದಾಗುತ್ತಿರುವ ಸುದ್ದಿ ಗೊತ್ತೇ ಇದೆ.

ಕಾಲಿವುಡ್’ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದ “ರಜನಿ ಮುರುಗನ್” ಚಿತ್ರವನ್ನು ನಿರ್ಮಾಪಕ ರಾಮು ಕನ್ನಡದಲ್ಲಿ ರಿಮೇಕ್ ಮಾಡಲಿದ್ದಾರೆ. ಚಿತ್ರದ ನಾಯಕನಾಗಿ ಶರಣ್ ಮತ್ತು ನಾಯಕನ ಕಿಕ್ಕರ್ ಫ್ರೆಂಡಾಗಿ ಚಿಕ್ಕಣ್ಣ ಕಾಣಿಸಿಕೊಳ್ಳಲಿದ್ದಾರೆ.

ಆದರೆ ಈ ರಿಮೇಕ್ ಚಿತ್ರಕ್ಕೆ ಕನ್ನಡದ ಮೇರು ನಟರಾದ ರಾಜ್ ಮತ್ತು ವಿಷ್ಣು ಹೆಸರನ್ನು ಟೈಟಲ್ ಇಡಲಾಗಿದೆ ಎಂಬ ಸುದ್ದಿಯೊಂದು ಗಾಂಧಿನಗರದಿಂದ ಕೇಳಿ ಬಂದಿದೆ.

ಪಕ್ಕಾ ಕಾಮೆಡಿ ಚಿತ್ರವಾದ ಈ ರಿಮೇಕ್’ನಲ್ಲಿ ಶರಣ್’ರ ತಾತನ ಪಾತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಕೂಡ ಕಾಣಿಸಿಕೊಳ್ಳಿದ್ದಾರೆ ಎಂದು ಹೇಳಲಾಗುತ್ತಿದೆ.

ಕನ್ನಡದ ಶ್ರೇಷ್ಠ ಅಭಿನಯ ಚತುರರ ಹೆಸರುಗಳನ್ನು ಕಾಮಿಡಿ ಚಿತ್ರವೊಂದಕ್ಕೆ ಶೀರ್ಷಿಕೆಯನ್ನಾಗಿಸುವುದು ಮತ್ತು ರಿಮೇಕ್ ಸಿನೆಮಾವೊಂದು ನಟ ಸೌರ್ವಭೌಮ ಮತ್ತು ಅಭಿನಯ ಭಾರ್ಗವರ ಹೆಸರಲ್ಲಿ ಮೂಡಿಬರಲಿರುವುದು ವಿವಾಕ್ಕೀಡಾಗುವ ಸಾಧ್ಯತೆ ಹೆಚ್ಚಿದೆ.

ಈ ಚಿತ್ರಕ್ಕೆ ರಾಜ್ಧಿವಿಷ್ಣು ಟೈಟಲ್ ಅವಶ್ಯಕತೆಯಿತ್ತಾ?  ಮಹಾನ್ ನಟರುಗಳ ಹೆಸರನಲ್ಲಿರುವ ಧಮ್ ಕೂಡ “ರಜನಿ ಮುರುಗನ್” ಚಿತ್ರಕಥೆಗಿಲ್ಲವೆಂದು ಚಿತ್ರ ವೀಕ್ಷಿಸಿರುವ ವರನಟಧಿಸಾಹಸಿಂಹ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ ವಿಷ್ಣು ಟೈಟಲ್’ನೊಂದಿಗೆ ಚಿತ್ರ ಸೆಟ್ಟೇರಿದರೆ ಡಾ.ರಾಜ್ ಕುಮಾರ್ ಮತ್ತು ಡಾ.ವಿಷ್ಣುವರ್ಧನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಿದೆ ಎಂಬುದು ಸಿನಿಪಂಡಿತರ ಅಭಿಪ್ರಾಯ.

ಈ ಹಿಂದೆ ‘ಕಥೆ- ಚಿತ್ರಕಥೆ- ನಿರ್ದೇಶನ ಪುಟ್ಟಣ್ಣ’ ಚಿತ್ರವು ರಿಮೇಕಾಗಿದ್ದರಿಂದ ವಿವಾದಕ್ಕೀಡಾಗಿ ಬಳಿಕ ನಿರ್ದೇಶಕ ಪುಟ್ಟಣ್ಣನವರ ಕುಟುಂಬ ವರ್ಗದ ಸಮ್ಮತಿಯೊಂದಿಗೆ ಚಿತ್ರ ತೆರೆಕಂಡಿತ್ತು.

ಅಲ್ಲದೇ ಕಿಚ್ಚ ಸುದೀಪ್ ಅಭಿನಯದ ‘ವಿಷ್ಣುವರ್ಧನ’ ಚಿತ್ರದ ಶೀರ್ಷಿಕೆಗೆ ತಕರಾರು ನಡೆದಿತ್ತು. ಶಿವಣ್ಣ, ರಾಧಿಕಾ ಮತ್ತೊಮ್ಮೆ ಅಣ್ಣ ತಂಗಿ ಜೋಡಿಯಾಗ ಬೇಕಿದ್ದ “ರಾಜವಂಶ” ಟೈಟಲ್ ಕೂಡ ವಿವಾದಕ್ಕೀಡಾಗುವ ಸಾಧ್ಯತೆಯಿದೆ ಎಂದು ಈ ಹಿಂದೆ ಬದಲಾಯಿಸಿದ್ದರು.

★ಕಪ್ಪು ಮೂಗುತ್ತಿ

-ಉದಯವಾಣಿ

Write A Comment