ಮನೋರಂಜನೆ

ಚಿತ್ರಾಂಗದ ಲವ್ಸ್‌ ಬೆಂಗಳೂರು: ನಂಗೆ ಇಲ್ಲಿನ ವಾತಾರಣ,ಜನ ತುಂಬಾ ಇಷ್ಟ

Pinterest LinkedIn Tumblr

chiಹಿಂದಿ ಸಿನಿಮಾಗಳನ್ನು ನೋಡುವವರಿಗೆ ಚಿತ್ರಾಂಗದ ಸಿಂಗ್‌ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಕಡಿಮೆ ಚಿತ್ರದಲ್ಲಿ ನಟಿಸಿದ್ದರೂ ನಟನೆಯಲ್ಲಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ನಾಯಕಿ ಈಕೆ. ಇತ್ತೀಚೆಗೆ ಯುನೈಟೆಡ್‌ ಸ್ಪಿರಿಟ್ಸ್‌ನ ಸ್ಕಾಚ್‌ ವಿಸ್ಕಿ ಸಂಗ್ರಹವನ್ನು ಅನಾವರಣಗೊಳಿಸಲು ಬೆಂಗಳೂರಿಗೆ ಬಂದಿದ್ದ ಈ ಬಾಲಿವುಡ್‌ ಬೆಡಗಿ ಐ ಲವ್‌ ಬೆಂಗಳೂರು ಜೊತೆ ಮಾತಾಡಿದರು. ಬೆಂಗಳೂರಿನ ಬಾಂಧವ್ಯ, ಸೌಂದರ್ಯದ ರಹಸ್ಯ, ಕನ್ನಡ ಸಿನಿಮಾ ಇತ್ಯಾದಿಗಳ ಬಗ್ಗೆ ಚಿತ್ರಾಂಗದ ಮಾತಾಡಿದ್ದು ಇಲ್ಲಿದೆ.

– ಬೆಂಗಳೂರಿನ ಬಗ್ಗೆ ನಾಲ್ಕು ಮಾತು.
ನಾನು ಬೆಂಗಳೂರಿಗೆ ತುಂಬಾ ಸಲ ಬಂದಿದ್ದೇನೆ. ಹೇಳಿದರೆ ಕ್ಲೀಷೆಯಾಗಬಹುದು. ಆದರೆ ಅದು ಸತ್ಯ. ನನಗೆ ಇಲ್ಲಿನ ವಾತಾವರಣ ತುಂಬಾ ಇಷ್ಟವಾಗುತ್ತದೆ. ಎಷ್ಟೊಂದು ಹಸಿರಿದೆ ಇಲ್ಲಿ. ಎಷ್ಟೊಂದು ಒಳ್ಳೆಯ ವಾತಾವರಣವಿದೆ. ನಾನು ದೇಶದುದ್ದಕ್ಕೂ ತಿರುಗಾಡಿದ್ದೇನೆ. ಆದರೆ ಬೆಂಗಳೂರು ಎಲ್ಲಕ್ಕಿಂತ ವಿಭಿನ್ನವಾಗಿದೆ. ಇಲ್ಲಿನ ಜನರೂ ತುಂಬಾ ಒಳ್ಳೆಯವರು. ನಂಗೆ ಇಲ್ಲಿ ಖುಷಿಯಾಗುತ್ತದೆ.

– ಇಲ್ಲಿ ಯಾವ ಹೋಟೆಲ್‌ ಇಷ್ಟ?
ತಾಜೆ ವೆಸ್ಟೆಂಡ್‌ ಹೋಟೆಲನ್ನು ತುಂಬಾ ಪ್ರೀತಿಸುತ್ತೇನೆ. ಇಲ್ಲಿ ಸುತ್ತಮುತ್ತ ತುಂಬಾ ಮರಗಳಿವೆ. ಹಾಗಾಗಿ ನಂಗೆ ಇಲ್ಲಿರೋಕೆ ಇಷ್ಟ. ನಾ ಯಾವಾಗ ಬೆಂಗಳೂರಿಗೆ ಬಂದರೂ ಇಲ್ಲೇ ಉಳಿದುಕೊಳ್ಳುತ್ತೇನೆ. ನೂರು ವರ್ಷ ಆಗಿದೆಯಂತಲ್ಲ ಈ ಹೋಟೆಲ್‌ಗೆ. ಎಷ್ಟು ಅದ್ಭುತವಾಗಿದೆ.

– ನಿಮ್ಮ ಸೌಂದರ್ಯದ ರಹಸ್ಯವೇನು?
ರಹಸ್ಯ ಅಂತೇನಿಲ್ಲ. ಕೆಲಸ ಮಾಡುತ್ತಾ ಇರುತ್ತೇನೆ. ಅದೇ ನನ್ನ ಸೌಂದರ್ಯದ ಗುಟ್ಟು.

– ಡಯಟ್‌ ಮಾಡ್ತೀರಾ? ಹೇಗೆ?
ನಾನು ಡಯಟ್‌ ಮಾಡಲ್ಲ. ಇದೇ ಆಹಾರ ತಿನ್ನಬೇಕು, ಇದನ್ನೆಲ್ಲಾ ತಿನ್ನಬಾರದು ಅಂತೆಲ್ಲಾ ಪ್ಲಾನ್‌ ಮಾಡಿಕೊಂಡು ಬದುಕಲ್ಲ. ಡಯಟ್‌ ಅಂತ ನಾ ಮಾಡೋದೇ ಇಲ್ಲ. ನಿಜ ಹೇಳಬೇಕು ಅಂದ್ರೆ ಡಯಟ್‌ ಬೇಕಾಗಿಯೇ ಇಲ್ಲ ನಂಗೆ.

– ನೀವು ಫಿಟ್‌ನೆಸ್‌ ಕಾಪಾಡಿಕೊಳ್ಳುವುದು ಹೇಗೆ?
ಕಿಕ್‌ ಬಾಕ್ಸಿಂಗ್‌ ನಂಗಿಷ್ಟ. ದಿನಾ ಕಿಕ್‌ ಬಾಕ್ಸಿಂಗ್‌ ಪ್ರಾಕ್ಟಿಸ್‌ ಮಾಡುತ್ತೇನೆ. ಅದರ ಜೊತೆ ಪಿಲಾಟೆ ಕೂಡ ಇಷ್ಟ. ದಿನಾ ಪ್ರಾಕ್ಟೀಸ್‌ ಮಾಡುತ್ತೇನೆ. ಈ ಎರಡು ಅಭ್ಯಾಸಗಳು ನಾನು ಫಿಟ್‌ ಆಗಿರುವುದಕ್ಕೆ ಕಾರಣ. ಅದರಿಂದಾಗಿಯೇ ನಾನು ಖುಷಿಯಾಗಿರುತ್ತೇನೆ.

– ಕನ್ನಡ ಸಿನಿಮಾ ನೋಡಿದ್ದೀರಾ..
ಇದುವರೆಗೆ ನೋಡಿಲ್ಲ. ಆದರೆ ಇಲ್ಲಿ ತುಂಬಾ ಒಳ್ಳೆಯ ನಿರ್ದೇಶಕರಿದ್ದಾರೆ ಅಂತ ಕೇಳಿದ್ದೇನೆ. ತುಂಬಾ ಒಳ್ಳೆಯ ನಟರಿದ್ದಾರೆ ಅನ್ನುವುದನ್ನು ಕೇಳಲ್ಪಟ್ಟಿದ್ದೇನೆ.

– ಕನ್ನಡ ಸಿನಿಮಾದಲ್ಲಿ ನಟಿಸ್ತೀರಾ? ನಟಿಸೋ ಆಸಕ್ತಿ ಇದೆಯಾ?
ತುಂಬಾ ಆಸಕ್ತಿ ಇದೆ. ಕನ್ನಡ ಚಿತ್ರರಂಗದ ಯಾರೂ ಅಷ್ಟೊಂದು ಪರಿಚಯ ಇಲ್ಲ. ಆದರೆ ಯಾವತ್ತಾದರೂ ಅವಕಾಶ ಸಿಕ್ಕರೆ ಖಂಡಿತಾ ನಟಿಸುತ್ತೇನೆ.
-ಉದಯವಾಣಿ

Write A Comment