ಮನೋರಂಜನೆ

ಪಾಕಿಸ್ಥಾನದ ಹಾಲಿನ ಜಾಹೀರಾತಿನಲ್ಲಿ ನೀರ್ಜಾ ಸೋನಮ್‌!

Pinterest LinkedIn Tumblr

10_2ಮುಂಬಯಿ: ಬಾಲಿವುಡ್‌ನ‌ ನೀರ್ಜಾ ಚಿತ್ರದ ನಟಿ ಸೋನಮ್‌ ಕಪೂರ್‌ ಅವರು ಪಾಕಿಸ್ಥಾನದ  ಜಾಹೀರಾತೊಂದರಲ್ಲಿ  ಕೆಲಸ ಮಾಡಿದ್ದಾರೆ. ಪಾಕಿಸ್ಥಾನದ ತರಂಗ್‌ ಹಾಲಿನ ಈ  ಜಾಹೀರಾತಿನಲ್ಲಿ  ನಟಿ ಸೋನಮ್‌ ಕಪೂರ್‌ ಅವರೊಂದಿಗೆ ಪಾಕಿಸ್ಥಾನ ನಟ ಫವಾದ್‌ ಖಾನ್‌  ಅಭಿನಯಿಸಿದ್ದಾರೆ. ಈ ಜೋಡಿ  “ಖೂಬ್‌ಸೂರತ್‌’ ಸಿನೆಮಾದಲ್ಲಿ ಕೆಲಸ ಮಾಡಿದೆ.

ವಿಶೇಷವೆಂದರೆ,  ಇತ್ತೀಚೆಗೆ  ಬಿಡುಗಡೆಯಾದ ಸೋನಮ್‌ ಕಪೂರ್‌ ಅವರ  ನೀರ್ಜಾ ಚಿತ್ರಕ್ಕೆ ಪಾಕಿಸ್ಥಾನದಲ್ಲಿ  ನಿಷೇಧ ಹೇರಲಾಗಿದೆ.  ಆದರೂ,  ಬಾಲಿವುಡ್‌ನ‌  ನೀರ್ಜಾ ಪಾಕಿಸ್ಥಾನದಲ್ಲಿ ಹಾಲಿನ  ಬ್ರ್ಯಾಂಡಿನ ಜಾಹೀರಾತು ನೀಡಿದ್ದಾರೆ.

ಸೋನಮ್‌ ಕಪೂರ್‌ ಮತ್ತು ಫವಾದ್‌ ಖಾನ್‌ ಅವರ ಈ ಜಾಹೀರಾತು ಪಾಕಿಸ್ಥಾನದ ಅತ್ಯಂತ ದುಬಾರಿ ಜಾಹೀರಾತು ಆಗಿದೆ ಎಂದು ಜಾಹೀರಾತು ಕ್ಷೇತ್ರದ ಮೂಲಗಳು ಹೇಳುತ್ತವೆ. ತರಂಗ್‌ ಹಾಲು ಅನ್ನು   ಪಾಕಿಸ್ಥಾನದ ನಂ. 1 ಹಾಲು ಎಂದು ಕರೆಯಲಾಗುತ್ತದೆ.

ಸೋನಮ್‌ ಕಪೂರ್‌ ಅವರ ತರಂಗ್‌ ಹಾಲಿನ ಜಾಹೀರಾತು ಅನ್ನು ನಿರ್ದೇಶಕ ಅಸೀಂ ರಾಜಾ ಅವರು ಚಿತ್ರೀಕರಿಸಿದ್ದರು. ಈ ಜಾಹೀರಾತಿನಲ್ಲಿ ಸೋನಮ್‌ ಕಪೂರ್‌ ಸಿಂಡ್ರೆಲ್ಲಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತರಂಗ್‌ನ ಈ ಜಾಹೀರಾತನ್ನು ದುಬಾಯಿನಲ್ಲಿ ಚಿತ್ರೀಕರಿಸಲಾಗಿತ್ತು. ಈ ಸಂಬಂಧ ಸ್ವತಃ  ಫವಾದ್‌ ಖಾನ್‌ ಅವರು ಟ್ವೀಟ್‌ ಮಾಡಿದ್ದಾರೆ.

ಮೂರು ವರ್ಷಗಳ ಹಿಂದೆಬಾಲಿವುಡ್‌ ನಟಿ ಕರೀನಾ ಕಪೂರ್‌  ಅವರು ಪಾಕಿಸ್ಥಾನದ ಕ್ಯೂಮೊಬೈಲ್‌ಗಾಗಿ  ಜಾಹೀರಾತೊಂದರಲ್ಲಿ ನಟಿಸಿದ್ದರು. ಥೈಲ್ಯಾಂಡ್‌ನ‌ಲ್ಲಿ ಅದರ ಚಿತ್ರೀಕರಣ ನಡೆದಿತ್ತು.

ಅದನ್ನು ಪಾಕಿಸ್ಥಾನದ ಇಮ್ತಿಯಾಜ್‌ ಅಲಿ ಎಂದು ಕರೆಯಲ್ಪಡುವ ನಿರ್ದೇಶಕ ಫಾರೂಕ್‌ ಮನ್ನನ್‌ ಅವರು ಚಿತ್ರೀಕರಿಸಿದ್ದರು. ಆ ಜಾಹೀರಾತಿಗಾಗಿ ಅವರು ಅಮೆರಿಕನ್‌ ಟೆಕ್ನೀಷಿಯನ್‌ಗಳನ್ನು ಕರೆಸಿದ್ದರು. ಇದನ್ನೂ  ಅತ್ಯಂತ ದುಬಾರಿ ಜಾಹೀರಾತು ಎಂದು  ಕರೆಯಲಾಗುತ್ತಿತ್ತು. ಅದೇ ರೀತಿ, ನಟಿ ನರ್ಗಿಸ್‌ ಫಾಖ್ರಿ  ಅವರು ಪಾಕಿಸ್ಥಾನದ ಮೋಬಿಲಿಂಕ್‌ ಉತ್ಪನ್ನವೊಂದಕ್ಕೆ  ಜಾಹೀರಾತು ನೀಡಿದ್ದರು.
-ಉದಯವಾಣಿ

Write A Comment